ಪ್ರಮುಖ ಸುದ್ದಿ
ಕಲಬುರ್ಗಿಃ ಐವರು ನಾಡ ಪಿಸ್ತೂಲ್ ಮಾರಾಟಗಾರರ ಬಂಧನ
10 ನಾಡಪಿಸ್ತೂಲ್, 20 ಜೀವಂತ ಗುಂಡು ವಶಕ್ಕೆ
ಕಲಬುರ್ಗಿಃಜಿಲ್ಲೆಯ ವಿವಿಧಡೆ ಪೊಲೀಸರ ಮಿಂಚಿನ ಕಾರ್ಯಾಚರಣೆ ನಡೆಸುವ ಮೂಲಕ ಐವರು ನಾಡ ಪಿಸ್ತೂಲ್ ಮಾರಾಟಗಾರರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಶಿಕುಮಾರ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಂಧಿತರಿಂದ ಹತ್ತು ನಾಡಪಿಸ್ತೂಲ್ ಮತ್ತು ಇಪ್ಪತ್ತು ಜೀವಂತಗುಂಡುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಇಸ್ಲಾಯಿಲ್ ಝಳಕಿ, ಗುರುನಾಥ ಝಳಕಿ, ವಿಠಲ್ ಸುಲ್ತಾನಪೂರ, ಅಬ್ದುಲ್ ಕರಿಂ ಖಜೂರಿ, ಕ್ರಿಸ್ಟೋಪರ್ ಅಫಜಲಪುರ ಎಂಬುವರೇ ಬಂಧಿತ ಆರೋಪಿಗಳು.