ಪ್ರಮುಖ ಸುದ್ದಿ
ಸುಳ್ಳು ಆರೋಪ ಸಿದ್ರಾಮಯ್ಯಗೆ ಲೀಗಲ್ ನೋಟಿಸ್..?
ಬೆಳಗಾವಿಃ ರಾಜ್ಯ ಸರ್ಕಾರದ ವಿರುದ್ಧ 2000 ಕೋಟಿ ಹಗರಣದ ಗಂಭೀರ ಆರೋಪ ಮಾಡಿದ ವಿಪಕ್ಷ ನಾಯಕ ಸಿದ್ರಾಮಯ್ಯ ಅವರಿಗೆ ಸರ್ಕಾರ ಲೀಗಲ್ ನೋಟಿಸ್ ನೀಡಲು ಮುಂದಾಗಿದೆ ಎಂದು ಸಚಿವ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ.
ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕೊರೊನಾ ತಡೆಗೆ ಸರ್ಕಾರ ಶಿಸ್ತಿನಿಂದ ಶ್ರಮವಹಿಸುತ್ತಿದ್ದರೂ ವಿಪಕ್ಷ ನಾಯಕರು ತಗಾದೆ ತೆಗೆಯುತ್ತಿದ್ದಾರೆ.
ಅಲ್ಲದೆ ವಿನಾಕಾರಣ ಸುಳ್ಳು ಆರೋಪ ಮಾಡುತ್ತಿದ್ದಾರೆ. ಹೀಗಾಗಿ ಗಂಭೀರ ಆರೋಪ ಮಾಡಿದ ಸಿದ್ರಾಮಯ್ಯನವರಿಗೆ ಸಿಎಂ ಲೀಗಲ್ ನೋಟಿಸ್ ನೀಡುವ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.