ಕಾಂಗ್ರೆಸ್ ಪಕ್ಷದಿಂದ ರೋಷನ್ ಬೇಗ್ ಔಟ್..!
ಕಾಂಗ್ರೆಸ್ ಕ್ರಮಕ್ಕೆ ಮಂದವಾದ ರೋಷನ್
ಬೆಂಗಳೂರಃ ಕಾಂಗ್ರೆಸ್ ಪಕ್ಷದ ವಿರೋಧಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಶಾಸಕ ರೋಷನ್ ಬೇಗ್ ಅವರನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿ.ವೈ.ಘೋರ್ಪಡೆ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಅಮಾನತು ಆದೇಶ ಹೊರಡಿಸುವ ಮುನ್ನಾ ಎಐಸಿಸಿ ಅನುಮತಿ ಪಡೆದೆ ರೋಷನ್ ಬೇಗರನ್ನು ಅಮಾನತು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಲೋಕಸಭೆ ಚುನಾವಣೆ ಸೇರಿದಂತೆ ಮತ್ತು ಚುನಾವಣೆ ಮುಗಿದ ಮೇಲೆ ಕಾಂಗ್ರೆಸ್ ಪಕ್ಷದ ವಿರುದ್ಧ ಮತ್ತು ರಾಜ್ಯ ನಾಯಕರಾದ ಮಾಜಿ ಸಿಎಂ ಸಿದ್ಧರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್ ಪಕ್ಷದ ರಾಜ್ಯಧ್ಯಕ್ಷ ದಿನೇಶ ಗುಂಡೂರಾವ್ ಅವರ ವಿರುದ್ಧ ರೋಷನ್ ಬೇಗ ಕೆಂಡಕಾರಿದ್ದಾರೆ.
ಅವರ ಕಾರ್ಯವೈಖರಿ ಬಗ್ಗೆ ಟೀಕಿಸಿದರು. ಅಲ್ಲದೆ ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲಾಗಲಿದ್ದು, ಇದಕ್ಕೆಲ್ಲ ಸಿದ್ರಾಮಯ್ಯ ಮತ್ತು ದಿನೇಶ ಗುಂಡುರಾವ್ ಅವರ ವರ್ತನೆಯೇ ಕಾರಣ ಎಂದು ಚುನಾವಣೆ ಫಲಿತಾಂಶ ೆರಡು ದಿನ ಬಾಕಿ ಇರುವ ಮುನ್ನವೇ ಭವಿಷ್ಯ ನುಡಿದಿದ್ದರು.
ಅಲ್ಲದೆ ಅದನ್ನು ಮುಂದುವರೆಸಿದ್ದರು. ರಾಜ್ಯ ನಾಯಕರು ಮತ್ತು ಎಐಸಿಸಿ ಅನುಮತಿಯೊಂದಿಗೆ ಇಂದು ಅವರನ್ನು ಪಕ್ಷದಿಂದ ಮಾನತುಗೊಳಿಸಿ ಆದೇಶ ನೀಡಲಾಗಿದೆ.
ಬೇಗ್ ಅವರ ಮುಂದಿನ ನಡೆ ಏನು ಎಂಬುದನ್ನು ಕಾಯ್ದು ನೋಡಬೇಕು. ರಾಜ್ಯದ ರಾಜಕೀಯ ಮುಂದೆ ಯಾವ ತಿರುವು ಪಡೆಯಲಿದೆ ಎಂಬುದು ವಿಚಿತ್ರವಾಗಿದೆ. ಕಾದು ನೋಡಬೇಕು.