ಪ್ರಮುಖ ಸುದ್ದಿ
ರೌಡಿ ಶೀಟರ್ ಫೈಯ್ಯುಮ್ ಮೇಲೆ ಗುಂಡಿನ ದಾಳಿ
ಕಲಬುರ್ಗಿಃ ವೆಫನ್ ರಿಕವರಿಗೆ ತೆರಳಿದ್ದ ಪೊಲೀಸರ ಮೇಲೆ ಆರೋಪಿ ರೌಡಿ ಶೀಟರ್ ಮಿರ್ಜಾ ಫಯ್ಯೂಮ್ ಬೇಗ್ ಅದೇ ಗನ್‌ನಿಂದ ಪೊಲೀಸರ ಮೇಲೆ ದಾಳಿ ನಡೆಸಿದ ಘಟನೆ ನಗರ ಕಲಬುರ್ಗಿ ವಿಶ್ವ ವಿದ್ಯಾಲಯ ಠಾಣಾ ವ್ಯಾಪ್ತಿ ನಡೆದಿದೆ.
ಪ್ರತ್ಯುತ್ರ ನೀಡಿದ ಪೊಲೀಸರು ಆರೋಪಿಯ ಕಾಲಿಗೆ ಫೈರ್ ಮಾಡಿದ್ದಾರೆ. ಆಗ ಕುಸಿದು ಬಿದ್ದ ಆರೋಪಿ ಫೈಯ್ಯೂಮ್ ನನ್ನು ಪೊಲೀಸರು ಬಂಧಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇನ್ಸ್‌ಪೆಕ್ಟರ್ ಲಾಲಸಾಬ ಗುಂಡು ಹಾರಿಸಿ ರೌಡಿಯನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಹೆಡ್ ಕಾನ್ಸಟೇಬಲ್ ರಫೀಕ್ ಗೆ ಗಾಯಗಳಾಗಿದ್ದು ಅವರನ್ನು ನಗರಸ ಯುನೈಟೆಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿ ಫಯ್ಯೂಮ್ ನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳದಲ್ಲಿ, ಲಾಂಗ್, ಮಚ್ಷು ಮತ್ತು ಗುಂಡುಗಳು ಲಭ್ಯವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.