ಪ್ರಮುಖ ಸುದ್ದಿ

ಮೇ.18‌ ರಿಂದ 23 ರವರೆಗೆ ಯಾದಗಿರಿ‌ ಜೆಲ್ಲಾದ್ಯಂತ ಸ್ವಯಂಘೋಷಿತ ಬಂದ್ ಗೆ ಉಸ್ತುವಾರಿ ಸಚಿವ ಆರ್.ಶಂಕರ್ ಮನವಿ

ಮೇ.18‌ ರಿಂದ 23 ರವರೆಗೆ ಯಾದಗಿರಿ‌ ಜೆಲ್ಲಾದ್ಯಂತ ಸ್ವಯಂಘೋಷಿತ ಬಂದ್ ಗೆ ಉಸ್ತುವಾರಿ ಸಚಿವ ಆರ್.ಶಂಕರ್ ಮನವಿ

ಯಾದಗಿರಿಃ ಮೇ.18 ಬುಧವಾರ ಬೆಳಗ್ಗೆಯಿಂದ‌ ರವಿವಾರದವರೆಗೆ ಐದು ದಿನಗಳ ಕಾಲ ಸಾರ್ವಜನಿಕರು ವ್ಯಾಪಾರಸ್ಥರು ಸ್ವಯಂಘೋಷಿತ ಸಂಪೂರ್ಣ ಬಂದ್ ಮಾಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ‌ ಆರ್.ಶಂಕರ್ ಮನವಿ ಮಾಡಿದರು.

ನಗರದಲ್ಲಿ‌ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ತೀವ್ರತೆ ತಡೆಗೆ ಸ್ವಯಂಘೋಷಿತ ಬಂದ್ ಅನಿವಾರ್ಯ ವಾಗಿದೆ. ಜನ‌ರು ವ್ಯಾಪಾರ ವಹಿವಾಟು ಬಂದ್ ಮಾಡಿ‌ ಮನೆಯಲ್ಲಿಯೇ ಇರಬೇಕೆಂದು ತಿಳಿಸಿದರು.

ಕೊರೊನಾ ಕುರಿತು ಭಯಬೇಡ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಜಿಲ್ಲೆಯಲ್ಲಿ ಚಿಕಿತ್ಸೆಗೆ ಬೇಕಾಗುವ ಸಕಲ ವ್ಯವಸ್ಥೆ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಸಂಸದ ರಾಜಾ ಅಮರೇಶ್ವರ ನಾಯಕ, ಶಾಸಕ ವೆಂಕಟರಡ್ಡಿ ಮುದ್ನಾಳ, ಮಾಜಿ ಸಚಿವ ಬಾಬುರಾವ್ ಚಿಂಚನಸೂರ, ಕೃಷ್ಣಾ ಕಾಡಾ ಅಧ್ಯಕ್ಷ ಶರಣಪ್ಪ ತಳವಾರ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಶರಣಭೂಪಾಲರಡ್ಡಿ, ಪ್ರಧಾನ ಕಾರ್ಯದರ್ಶಿಗಳಾದ ದೇವಿಂದ್ರನಾಥ ನಾದ್, ಗುರು ಕಾಮಾ ಉಪಸ್ಥಿತರಿದ್ದರು.

Related Articles

One Comment

  1. ಶಹಾಪುರ ನಲ್ಲಿ ಕರಿ ಪ೦ಗಾಸ ಪತ್ತೆ ಆಗಿದೆ ದಯವಿಟ್ಟು ಎಲ್ಲರೂ ೫ ದಿನ ಮನೆಯಲ್ಲಿ ಇದ್ಧರೆ ತುಂಬಾ ಒಳ್ಳೆಯದು

Leave a Reply

Your email address will not be published. Required fields are marked *

Back to top button