ಪ್ರಮುಖ ಸುದ್ದಿ
ಪತ್ನಿ ಮೇಯರ್ ಆದ ಖುಷಿಯಲ್ಲಿ ಪತಿರಾಯ ಸಭಾಂಗಣದಲ್ಲಿ ಮಾಡಿದ್ದೇನು ಗೊತ್ತೆ.?
ಪತ್ನಿ ಮೇಯರ್ ಆದ ಖುಷಿಯಲ್ಲಿ ಪತಿರಾಯ ಸಭಾಂಗಣದಲ್ಲಿ ಮಾಡಿದ್ದೇನು ಗೊತ್ತೆ.?
ಮೈಸೂರುಃ ಪತ್ನಿ ರುಕ್ಮುಣಿ ಮೈಸೂರ ಮಹಾ ನಗರ ಪಾಲಿಕೆ ಅಧಿಕೃತ ಘೋಷಣೆ ಹೊರ ಬೀಳುತ್ತಿದ್ದಂತೆ ಪಾಲಿಕೆ ನಿಯಮದಂತೆ ಮೇಯರ್ ಸ್ಥಾನ ಅಲಂಕರಿಸಿದ ಸಂದರ್ಭ ಪತಿರಾಯ ಪತ್ನಿ ಮೇಯರ್ ರುಕ್ಮಣಿ ಅವರಿಗೆ ಸಭಾಂಗಣದಲ್ಲಿಯೇ ಕಿಸ್ ಮಾಡುವ ಮೂಲಕ ಎಲ್ಲರನ್ನು ನಾಚುವಂತೆ ಮಾಡಿದ್ದಾರೆ.
ಪತಿರಾಯ ಮಾದೇಗೌಡ ತನ್ನ ಪತ್ನಿ ರುಕ್ಮಿಣಿ ಅವರನ್ನು ಮೇಯರ್ ಎಂದು ಘೋಷಿಸಿದ ಖುಷಿಯಲ್ಲಿ ಪತ್ನಿಯನ್ನು ಮೇಲೆತ್ತಿ ಫೋಸ್ ಸಹ ಕೊಟ್ಟಿದ್ದಾನೆ. ಈ ಮಧ್ಯೆ ಯಾರೋ ಕ್ಯಾಮೆರಾಮನ್ ಒಬ್ಬರು ಇಳಿಸಿ ಇಳಿಸಿ ಸರ್ ಎಂದು ಕೂಗಿರುವದು ವಿಡಿಯೋ ದಲ್ಲಿ ಕೇಳಿ ಬರುತ್ತಿದೆ.
ಪತಿರಾಯ ಎಲ್ಲರ ಸಮ್ಮುಖದಲ್ಲಿ ಖುಷಿಯ ಭರಾಟೆಯಲ್ಲಿ ಕಿಸ್ ಕೊಟ್ಟಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಎಲ್ಲರನ್ನು ನಸುನಗುವಂತೆ ನಾಚಿಸುತ್ತಿದೆ ಎಂದರೆ ತಪ್ಪಿಲ್ಲ ಏನಂತೀರೀ..