ಪ್ರಮುಖ ಸುದ್ದಿ

ಗ್ರಾಪಂ ಚುನಾವಣೆಗೆ ಭಿಕ್ಷುಕ ಸ್ಪರ್ಧೆ, ಯುವಕರ ಸಾಥ್

ಗ್ರಾಪಂ ಚುನಾವಣೆಗೆ ಭಿಕ್ಷುಕ ಸ್ಪರ್ಧೆ, ಯುವಕರ ಸಾಥ್

ನಂಜನಗೂಡುಃ ತಾಲೂಕಿನ ಬೊಕ್ಕಹಳ್ಳಿ ಗ್ರಾಮದ ಯುವ ಸಮೂಹ ಸೇರಿ ಓರ್ವ ಭಿಕ್ಷುಕನನ್ನು ಗ್ರಾಪಂ ಚುನಾವಣೆ ಕಣಕ್ಕೆ ಇಳಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಹೌದು ಆತ ನಿರ್ಗತಿಕ ಜೀವನೋಪಾಯಕ್ಕಾಗಿ ಆತ ಭಿಕ್ಷೆ ಬೇಡುತ್ತಿದ್ದ ಎನ್ನಲಾಗಿದೆ. ಆತನ ಹೆಸರು ಅಂಕಪ್ಪ ನಾಯಕ ಇದೀಗ ಈತನನ್ನು ಯುವಕರು ಇಲ್ಲಿನ ಹುಳಿಮಾವು ಪಂಚಾಯತಿಯ ಅಭ್ಯರ್ಥಿಯಾಗಿ ಅಖಾಡಕ್ಕಿಳಿಸಿದ್ದಾರೆ.

ಈತ ನಿತ್ಯ ನಂಜನಗೂಡಿಗೆ ಬಂದು ಸಣ್ಣಪುಟ್ಟ ಕೆಲಸ ಮಾಡುತ್ತಿದ್ದ ಅಲ್ಲದೆ ಅವರಿವರ ಬಳಿ ಕಾಸಿಗಾಗಿ ಕೈಚಾಚಿ ಅರೆಹೊತ್ತಿನ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಎನ್ನಲಾಗಿದೆ.

ಈತನಿಗೆ ಯಾರ ಆಶ್ರಯವು‌ ಇಲ್ಲ. ಇದೀಗ ಯುವ ಸಮೂಹ ಈತನ ಹಿಂದೆ ನಿಂತು ಚುನಾಬಣೆ ನಿಲ್ಲಿಸಿದೆ. ಯುವಕರೆಲ್ಲರೂ ಸೇರಿ ಹೊಸ ಬಟ್ಟೆ ಕೊಡಿಸಿ ಕಾರಿನಲ್ಲಿ ಆತನನ್ನು ಕರೆ ತಂದು ನಾಮಿನೇಷನ್ ಮಾಡಿಸಿದ್ದಾರೆ.

ದೇಶದ ಪ್ರಜೆಯಾಗಿದ್ದರೆ ಸಾಕು. ಯಾರಾದರೇನು ಜನಸೇವೆ ಮಾಡಲು ಹೀಗಾಗಿ ಈತನನ್ನೆ ಕಣಕ್ಕೆ ನಿಲ್ಲಿಸಿದ್ದೇವೆ ಎನ್ನುತ್ತಾರೆ ಇಲ್ಲಿನ ಯುವಕರು. ಹಿಂದೆ ಗೆದ್ದವರಾರು ಸಮರ್ಪಕವಾಗಿ ಕೆಲಸ ಮಾಡಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂಧಿಸಿಲ್ಲ. ಈತ ಸ್ವತಃ ಕಷ್ಟಗಳನ್ನು ಅನುಭವಿಸಿದ್ದಾನೆ.

ಆತನ ಆ ಅರಿವು ಚುನಾವಣೆಯಲ್ಲಿ ಗೆದ್ದ ಮೇಲೆ ಕೆಲಸ ಮಾಡಲಿದೆ ಎಂಬ ಅಭಿಲಾಷೆ ನಮ್ಮದು ಎನ್ನುತ್ತಿದ್ದಾರೆ ಇಲ್ಲಿನ ಯುವಕರು.

Related Articles

Leave a Reply

Your email address will not be published. Required fields are marked *

Back to top button