ಪ್ರಮುಖ ಸುದ್ದಿ

2 ವಾರಗಳ ಕಾಲ‌ ಕಚೇರಿಗೆ ಬೀಗ ಸಹಕರಿಸುವಂತೆ – ದರ್ಶನಾಪುರ ಮನವಿ

2 ವಾರಗಳ ಕಾಲ‌ ಕಚೇರಿಗೆ ಬೀಗ ಸಹಕರಿಸುವಂತೆ – ದರ್ಶನಾಪುರ ಮನವಿ

ಯಾದಗಿರಿಃ ಕೊರೊನಾ ಸೋಂಕು ಹರಡುವಿಕೆ ಹೆಚ್ಚಾದ ಪರಿಣಾಮ ಜಿಲ್ಲೆಯ ಶಹಾಪುರ ಮತಕ್ಷೇತ್ರದ ಶಾಸಕರು, ಮಾಜಿ‌ ಮಂತ್ರಿಗಳಾದ ಶರಣಬಸಪ್ಪಗೌಡ ದರ್ಶನಾಪುರ ಅವರ ನಗರ ಕಚೇರಿ ಎರಡು ವಾರಗಳ ಕಾಲ ಬಂದ್ ಮಾಡುವ ಕುರಿತು ಪ್ರಕಟಣೆಯಲ್ಲಿ ತಿಳಿಸಿದ್ದು, ನಾಗರಿಕರು ಸಹಕರಿಸುವಂತೆ ಅವರು ಮನವಿ ಮಾಡಿದ್ದಾರೆ.

ಶಾಸಕರು ಸ್ವತಃ‌ ಎರಡು ವಾರ ಮನೆಯಲ್ಲಿಯೇ ಇರಲು ನಿರ್ಧರಿಸಿರುವ ಕಾರಣ ನಗರ ಕಚೇರಿಗೆ ಬೀಗ ಹಾಕಲಾಗಿದ್ದು, ಗ್ರಾಮೀಣ ಪ್ರದೇಶದ ಜನ ದೂರದಿಂದ ಇಂತಹ ಸ್ಥಿತಿಯಲ್ಲಿ ಬಂದು ವಾಪಸ್ ಆಗದಿರಲಿ ಎಂದು ಮುನ್ನೆಚ್ಚರಿಕೆ ಯಾಗಿ‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಲ್ಲದೆ ಕೊರೊನಾ ಸೋಂಕು ತಡೆಗೆ ಎಲ್ಲರೂ ಸರ್ಕಾರ ಸೂಚಿಸಿದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ತಿಳಿಸಿದ್ದಾರೆ. ಅನಗತ್ಯ ಓಡಾಟ ನಿಲ್ಲಿಸಿ ಕೊರೊನಾ ಮಹಾಮಾರಿ‌ ಹಾವಳಿ ಜಾಸ್ತಿಯಾಗುತ್ತಿದೆ.‌ ತಹಬಂದಿಗೆ ಬರುತ್ತಿಲ್ಲ.‌ ಇದು ಜನರ ಕೈಯಲ್ಲಿಯೇ ಇದೆ. ಸಾಮಾಜಿಕ ಅಂತರ, ಮಾಸ್ಕ್ ಧರಿಸಿ. ಅನಗತ್ಯ ಹೊರಗಡೆ ಬರಬೇಡಿ ಎಂದು ಸಲಹೆ ಸೂಚನೆ ನೀಡಿದ್ದಾರೆ.

ಯಾವುದೇ ಸಮಸ್ಯೆ ಇತರೆ ತುರ್ತು ಭೇಟಿಗಾಗಿ‌ ಆಪ್ತ ಸಹಾಯಕ ಶರಣು ಇಟಗಿ‌ ಮತ್ತು ತಮ್ಮ ಮೊಬೈಲ್ ಗೆ ಕರೆ ಮಾಡಲು ಅವರು ಕೋರಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button