ವಿನಯ ವಿಶೇಷ
15 ದಿನಗಳ ಕಾಲ ಈ 5 ರಾಜ್ಯಗಳಿಂದ ಜನರು ಕರ್ನಾಟಕಕ್ಕೆ ಬರದಂತೆ ನಿರ್ಬಂಧ-ಮಾಧುಸ್ವಾಮಿ
ಬೆಂಗಳೂರಃ ಮಹಾ ಸೇರಿ ಐದು ರಾಜ್ಯಗಳಿಂದ 15 ದಿನಗಳ ಕಾಲ ಯಾರು ಬರದಂತೆ ಕರ್ನಾಟಕ ಸರ್ಕಾರ ನಿರ್ಬಂಧ ಏರುವ ನಿರ್ಣಯಕೈಗೊಳ್ಳಲಾಗಿದೆ ಎಂದು ಸಚಿವ ಮಾಧುಸ್ವಾಮಿ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ನಗರದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಗುರುವಾರ ನಿರ್ಣಯಕೈಗೊಳ್ಳಲಾಗಿದೆ. ಮಹಾರಾಷ್ಟ್ರ ಸೇರಿದಂತೆ ಗುಜರಾತ್, ಮಧ್ಯಪ್ರದೇಶ, ತಮಿಳುನಾಡು, ರಾಜಸ್ಥಾನ ರಾಜ್ಯಗಳಿಂದ ಬರುವದನ್ನು ತಡೆಯಲಾಗುತ್ತದೆ.
ಕೋವಿಡ್-19 ಸೋಂಕಿತರ ಪ್ರಮಾಣ ದಿನೇ ದಿನೇ ಜಾಸ್ತಿಯಾಗುತ್ತಿದ್ದು, ಅನ್ಯ ರಾಜ್ಯಗಳಿಂದ ಬಂದವರಿಗೆ ಸೋಂಕು ಕಾಣಿಸಿಕೊಳ್ಳುತ್ತಿದೆ. ಅವರಿಂದ ರಾಜ್ಯ ಅವರ ಕುಟುಂಬಸ್ಥರು ಇತರರಿಗೆ ಸಮಸ್ಯೆಯಾಗುತ್ತಿದೆ ಹೀಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಸ್ಪಷ್ಟ ಪಡಿಸಿದರು.