BREAKING – ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ ಮಂಡನೆ
ವಿಪಕ್ಷಗಳಿಂದ ವಿರೋಧ, ಸದನದಲ್ಲಿ ಕೋಲಾಹಲ
ಅಧಿವೇಶನ, ಸುವರ್ಣಸೌಧಃ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ಗೃಹ ಸಚಿವ ಆರಗಜ್ಞಾನೇಂದ್ರ ಮಂಡನೆ ಮಾಡಿದರು.
ಈ ವೇಳೆ ಕೆಪಿಸಿಸಿ ಅಧ್ತಕ್ಷ ಡಿ.ಕೆ.ಶಿವಕುಮಾರ ಮತಾಂತರ ನಿಷೇಧ ಕಾಯ್ದೆಯ ಮಂಡನೆಗೂ ಮೊದಲು ಚರ್ಚೆಗೆ ಅವಕಾಶ ಕಲ್ಪಿಸಬೇಕಿತ್ತು. ಚರ್ಚೆಗೆ ಅವಕಾಶ ನೀಡದೆ ಮಸೂದೆ ಮಂಡನೆ ಮಾಡಿರುವದು ಸರಿಯಲ್ಲ ಎಂದು ವಿಧೇಯಕ ಪ್ರತಿ ಹರಿದು ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ವಿಪಕ್ಷ ನಾಯಕ ಸಿದ್ರಾಮಯ್ಯ ಕದ್ದು ಮುಚ್ಚಿ ಯಾಕ್ರಿ ಮಸೂದೆ ಮಂಡನೆ ಮಾಡ್ತೀರಾ ಎಂದು ವಿರೋಧ ವ್ಯಕ್ತಪಡಿಸಿದರು. ಕಾಂಗ್ರೆಸ್ ನ ಸದಸ್ಯರೆಲ್ಲರೂ ಸಭಾತ್ಯಾಗ ಮುಂದಾಗಿದ್ದಾರೆ. ಸದನ ಹೀಗಾಗಿ ಪರ ವಿರೋಧ ಗಲಾಟೆ ಜೋರಾಗಿ ಕಂಡು ಬರುತ್ತಿದೆ.
ತಿಂಗಳಿಂದ ರಾಜ್ಯದಲ್ಲಿ ಚರ್ಚೆ ನಡೆದಿದೆ – ಆರ್.ಅಶೋಕ
ಮತಾಂತರ ನಿಷೇಧ ಕಾಯ್ದೆ ಮಂಡನೆ ಯಾವುದೇ ಕದ್ದು ಮುಚ್ಚಿಯಾಗಿ ಮಾಡುತ್ತಿಲ್ಲ. ರಾಜಾರೋಷವಾಗಿಯೇ ಮಾಡುತ್ತಿದ್ದೇವೆ ಎಂದು ಸಚಿವ ಆರ್.ಅಶೋಶ ಹೇಳಿಕೆ ನೀಡಿದ್ದಾರೆ.
ಕಳೆದ ತಿಂಗಳಿಂದ ರಾಜ್ಯದಲ್ಲಿ ಪರ ವಿರೋಧ ಚರ್ಚೆಗಳು ನಡೆದಿವೆ. ಸರ್ವರಿಗೂ ಗೊತ್ತಿರುವ ವಿಷಯ. ಅಲ್ಲದೆ ಇಂದು ಮಸೂದೆ ಮಂಡನೆ ಮಾಡಲಾಗಿದೆ. ನಾಳೆ ಚರ್ಚೆಗೆ ಅವಕಾಶ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.