ಪ್ರಮುಖ ಸುದ್ದಿ

ಸಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 2 ಎಕರೆ ಭೂ ದಾನ – ಸಂತೃಪ್ತ ಭಾವ ವ್ಯಕ್ತಪಡಿಸಿದ ಭೂದಾನಿ ಹತ್ತಿಕಟಿಗಿ

ಸಂತೃಪ್ತ ಭಾವ ವ್ಯಕ್ತಪಡಿಸಿದ ಭೂದಾನಿ ಹತ್ತಿಕಟಿಗಿ

ಸಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 2 ಎಕರೆ ಭೂ ದಾನ

ಸಂತೃಪ್ತ ಭಾವ ವ್ಯಕ್ತಪಡಿಸಿದ ಭೂದಾನಿ ಹತ್ತಿಕಟಿಗಿ

yadgiri, ಶಹಾಪುರಃ ಸಗರ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಿಬ್ಬಂದಿ ವಸತಿ ಗೃಹ ನಿರ್ಮಾಣಕ್ಕೆ ಉಚಿತವಾಗಿ ಭೂ ದಾನ ಮಾಡಿದವರು ಗ್ರಾಮದ ಮುಖಂಡ ಗ್ರಾಪಂ ಸದಸ್ಯ ತಾಲೂಕು ಗ್ರಾಮೀಣ ಬಿಜೆಪಿ ಅಧ್ಯಕ್ಷ ತಿರುಪತಿ ಹತ್ತಿಕಟಗಿ.

ಪ್ರಸ್ತುತ ಕಾಲದಲ್ಲಿ ಒಂದಿಂಚೂ ಜಾಗವು ಬಿಟ್ಟುಕೊಡದವರೇ ಸಾಕಷ್ಟು ಜನರನ್ನು ಕಂಡಿದ್ದೇವೆ. ಮತ್ತು ನಿತ್ಯ ಮಾಧ್ಯಮದಲ್ಲಿ ಹಣಕ್ಕಾಗಿ, ಒಂದಿಂಚು ಜಾಗಕ್ಕಾಗಿ ಕೊಲೆಗಳು, ಬಡಿದಾಟ ನಡೆದಿರುವದು ಓದುತ್ತೇವೆ ದೂರದರ್ಶನದಲ್ಲಿ ನೋಡುತ್ತೇವೆ.

ಆದರೆ ಇಂತಹ ದಿನಮಾನಗಳಲ್ಲಿಯೂ ಸಗರ ಗ್ರಾಮದ ಸ್ವಾತಂತ್ರ್ಯ ಹೋರಾಟಗಾರ ದಿ.ಶಿವಲಿಂಗಪ್ಪ ಅ.ಹತ್ತಿಕಟಿಗಿ ಅವರ ಸ್ಮರಣಾರ್ಥ 2 ಎಕರೆ ಭೂಮಿ ದಾನ ಮಾಡಿರುವದು ಸಾಮಾನ್ಯ ಸಂಗತಿಯಲ್ಲ.

ಈ ಕುರಿತು ಭೂದಾನಿ ತಿರುಪತಿ ಹತ್ತಿಕಟಗಿಯವರನ್ನು vinayavani ಮಾತನಾಡಿಸಿದಾಗ, ನಮ್ಮ ತಂದೆಯವರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರು, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದವರು. ಅಂತವರ ಕುಟುಂಬದಿಂದ ಬಂದ ನಾನು ನಮ್ಮೂರಿನಲ್ಲಿ ಸರ್ಕಾರಿ ಆಸ್ಪತ್ರೆ ನಿರ್ಮಾಣಕ್ಕೆ ಭೂಮಿ ಸಿಗುತ್ತಿಲ್ಲ ಎಂದಾಗ ಸಹಜವಾಗಿ ನಮ್ಮೂರಿಗೆ ಊರಿನ ಜನರಿಗೆ ಒಳಿತಾಗುವದಾದರೆ ಯಾಕೆ 2 ಎಕರೆ ಭೂಮಿ ಕೊಡಬಾರದೆಂಬ ಯೋಚನೆ ಬಂತು. ತಕ್ಷಣ ಮನೆಯಲ್ಲಿ ಕುಟುಂಬಸ್ಥರೊಂದಿಗೆ ಚರ್ಚಿಸಿ 2 ಎಕರೆ ಭೂಮಿ ದಾನ ಮಾಡಲು ಮುಂದೆ ಬಂದೆ.

ಸಾಕಷ್ಟು ಜನರು ಇಲ್ಲಿ ನಿವೇಶನ ಮಾಡಿದರೆ ತುಂಬ ಬೆಲೆ ಬಾಳಲಿದೆ ಎಂಬ ಮಾತುಗಳು ಕೇಳಿ ಬಂದವು. ಆದರೆ ನಮ್ಮೂರಿನ ಜನರ ಆರೊಗ್ಯ ದೃಷ್ಟಿಯಿಂದ ಅಗತ್ಯತೆಯನ್ನು ಕಂಡು ಭೂದಾನ ಮಾಡಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವರು, ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಗ್ರಾಪಂ ಆಡಳಿತ ವರ್ಗ ಎಲ್ಲರೂ ಸೇರಿ ನೂತನ ಪ್ರಾಥಮಿಕ ಆರೋಗ್ಯ ಕಟ್ಟಡ ನಿರ್ಮಿಸುವಲ್ಲಿ ಅನುಕೂಲವಾಯಿತು. ಗ್ರಾಮಸ್ಥ ಮಹಿಳೆಯರ ಹೆರಿಗೆ ಸೇರಿದಂತೆ ಅನಾರೋಗ್ಯ ಸಂದರ್ಭದಲ್ಲಿ ಇದೇ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಪಡೆಯಬಹುದಾಗಿದೆ.

ಇದರಿಂದ ವಯಕ್ತಿಕವಾಗಿ ಸಂತೋಷ ತಂದಿದೆ. ಎರಡು ಎಕರೆ ಹಿರಿಯರು ಗಳಿಸಿಟ್ಟ ಆಸ್ತಿಯನ್ನು ಗ್ರಾಮದ ಒಳಿತಿಗಾಗಿ ನೀಡಿರುವ ಖುಷಿ ನಮಗಾಗಿದೆ. ಹಿರಿಯರ ಹೆಸರುÀ ಅಜರಾಮರವಾಗಿ ಉಳಿಯಲಿದೆ ಎಂದು ತಮ್ಮ ಸಂತೋಷವನ್ನು ಹಂಚಿಕೊಂಡರು.

Related Articles

Leave a Reply

Your email address will not be published. Required fields are marked *

Back to top button