ಗ್ರಾಮ ಸಭೆಃ ನಿರಾಶ್ರಿತರಿಂದ 830 ಅರ್ಜಿ ಸಲ್ಲಿಕೆ
ಯಾದಗಿರಿ, ಶಹಾಪುರಃ ಪ್ರಧಾನ ಮಂತ್ರಿ ಆವಾಜ್ ಯೋಜನಡಿಯಲ್ಲಿ ನಿರಾಶ್ರಿತ ಕುಟುಂಬಗಳಿಗೆ ಸರ್ಕಾರ ಮನೆ ಹಂಚಿಕೆ ಮಾಡುತ್ತಿದ್ದು, ಆ ಹಿನ್ನೆಲೆ ಅರ್ಜಿ ಆಹ್ವಾನಿಸಲಾಗಿತ್ತು. ಇಲ್ಲಿನ ಗ್ರಾಪಂ ವ್ಯಾಪ್ತಿ ಅಂದಾಜು 830 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಮುದ್ದೀನ್ ಮುಲ್ಲಾ ತಿಳಿಸಿದರು.
ತಾಲೂಕಿನ ಸಗರ ಗ್ರಾಮದಲ್ಲಿ ನಡೆದ ಗ್ರಾಮ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗ್ರಾಪಂ ಮಟ್ಟದಲ್ಲಿಯೇ ಅತಿ ಹೆಚ್ಚು ಅರ್ಜಿಗಳು ನಿರಾಶ್ರಿತರಿಂದ ಬಂದಿದ್ದು, ಸರ್ಕಾರ ಈ ಕಉರಿತು ಅರ್ಜಿಗಳನ್ನು ಪರಿಶೀಲನೆ ನಡೆಸುವ ಮೂಲಕ ಅರ್ಹರನ್ನು ಆಯ್ಕೆಗೊಳಿಸಿ ಅಂತಿಮ ಪಟ್ಟಿಯನ್ನು ನೀಡಲಿದೆ. ಆ ಪ್ರಕಾರ ಮನೆ ಹಂಚಿಕೆ ಮಾಡಲಾಗುವುದು ಎಂದು ತಿಳಸಿದರು.
ಆನ್ ಮೂಲಕ ಅರ್ಜಿ ಕರೆಯಲಾಗಿತ್ತು. ಇದುವರೆಗೂ ಸಗರ ಗ್ರಾಪಂ ವ್ಯಾಪ್ತಿ 830 ಅರ್ಜಿಗಳು ಸಲ್ಲಿಕೆಯಾಗಿವೆ. ಅರ್ಜಿ ಸಲ್ಲಿಸಿದವರ ಹೆಸರು ಸಮೇತ ಸಭೆಯಲ್ಲಿ ಓದುವ ಮೂಲಕ ಅವರು ಸ್ಪಷ್ಟ ಪಡಿಸಿದರು.
ಸಭೆಯಲ್ಲಿ ಅರ್ಜಿ ಸಲ್ಲಿಕೆಯಾದವರ ಮಾಹಿತಿಯೊಂದಿಗೆ ಜಿಲ್ಲಾ ಆಡಳಿತಕ್ಕೆ ವರದಿ ಒಪ್ಪಿಸಲಾಗುತ್ತದೆ. ಜಿಲ್ಲಾಡಳಿತ ಈ ಕುರಿತು ಸಮಗ್ರ ಪರಿಶೀಲನೆ ನಡೆಸಲಿದೆ. ಆ ಮೂಲಕ ಆಯ್ಕೆ ಪಟ್ಟಿ ಸಿದ್ಧತೆಗೊಳ್ಳಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಮಾನಪ್ಪ ವಟಾರ್, ಉಪಾಧ್ಯಕ್ಷ ಶರಣಪ್ಪ, ಗ್ರಾಪಂ ಸದಸ್ಯರಾದ ಸೋಪಣ್ಣ, ನಾಗರಾಜ ಮರ್ಸ, ಶಿವನಗೌಡ, ಮಹಮದ್ ಇಲಿಯಾಸ್, ಹಣಮಂತ್ರಾಯ ಕೊಳ್ಳೂರ ಸೇರಿದಂತೆ ಗ್ರಾಮಸ್ಥರು, ನಾಗರಿಕರು ಇದ್ದರು. ಕಾರ್ಯದರ್ಶಿ ಕಾಳಪ್ಪ ಬಡಿಗೇರ ನಿರೂಪಿಸಿದರು. ಡಾಟಾ ಎಂಟ್ರಿ ಆಪರೇಟರ್ ಸಾಯಿಬಾಬಾ ವಂದಿಸಿದರು.