ಕಥೆ
ಪತ್ರಕರ್ತರ ಪ್ರಶ್ನೆ ದಿಟ್ಟ ಉತ್ತರ ನೀಡಿದ ಮಹಾತ್ಮ

ತುಂಡು ಉಡುಪು
ಮಹಾತ್ಮ ಗಾಂಧೀಜಿ ಇಂಗ್ಲೆಂಡಿನ ರಾಣಿಯ ಭೇಟಿ ಮಾಡಲು ಹೋದಾಗಿನ ಘಟನೆ ಇದು. ಎಂದಿನಂತೆ ಮೊಣಕಾಲು ಉದ್ದ ಪಂಚೆ ಹಾಗೂ ಖಾದಿಯ ಉತ್ತರೀಯ ಧರಿಸಿದ್ದರು.
ಪತ್ರಕರ್ತರು ಬೆರಗಿ “ಈ ಅರೆಬೆತ್ತಲೆ ಉಡುಪಿನಲ್ಲಿ ರಾಣಿ ಎದುರು ನಿಲ್ಲಲು ನಿಮಗೆ ನಾಚಿಕೆ ಆಗೊಲ್ಲವೇ?” ಎಂದು ಗಾಂಧೀಜಿಯನ್ನು ಪ್ರಶ್ನಿಸಿದರು.
ತಕ್ಷಣವೇ ಮುಗುಳ್ನಗುತ್ತಲೇ” ಇದರಲ್ಲಿ ಸಂಕೋಚಪಡುವಂಥದು ಏನಿದೆ? ಇದು ನನ್ನ ದಿನನಿತ್ಯದ ಉಡುಪು. ಅಲ್ಲದೆ ಇಂಗ್ಲೆಂಡಿನ ರಾಣಿಯಾದರೋ ನಮ್ಮಿಬ್ಬರಿಗೂ ಆಗಿ ಇನ್ನೂ ಉಳಿಯುವಷ್ಟು ಅವರೊಬ್ಬರೇ ಬಟ್ಟೆ ಧರಿಸುತ್ತಾರೆ. ನಿಜಕ್ಕೂ ಸಂಕೋಚ ಪಡಬೇಕಾದುದು ಆ ರಾಣಿಯೇ.… ನಾನಲ್ಲವೇ ಅಲ್ಲ” ಎಂದು ಗಾಂಧೀಜಿ ಉತ್ತರಿಸಿದರು.
ಭಾರತದ ಜನತೆಯ ಜೀವಂತ ಪ್ರತಿನಿಧಿಯಂತಿದ್ದ ಬಾಪೂಜಿ ಮಾತು ಕೇಳಿ ಪತ್ರಕರ್ತರೆಲ್ಲ ಸ್ತಬ್ಧರಾಗಿಬಿಟ್ಟರು.
ನೀತಿ :– ಗಾಂಧೀಜಿ ತೋರಿದ ಆದರ್ಶ ಗುಣ. ಇದೊಂದು ದೇಶ ಪ್ರೇಮದ ನಿಜವಾದ ಉದಾಹರಣೆ. ಸರಳತೆ ಇದೊಂದು ಗಾಂಧಿ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.