ಸಗರ ಯಲ್ಲಮ್ಮಾ ಜಾತ್ರೆ-ಪ್ರಾಣಿ ಬಲಿ ತಡೆಗೆ ಬಂದೋಬಸ್ತ್
ಗಂಗಾ ಸ್ನಾನಕ್ಕೆ ತೆರಳಿದ ಯಲ್ಲಮ್ಮ ದೇವಿ ಪಲ್ಲಕ್ಕಿ
ಯಾದಗಿರಿ, ಶಹಾಪುರಃ ಸಗರ ನಾಡಿನ ಪ್ರಸಿದ್ಧ ಆರಾಧ್ಯ ದೇವತೆ ತಾಲೂಕಿನ ಸಗರ ಗ್ರಾಮ ಸಮೀಪದ ಮಹಲರೋಜಾ ಯಲ್ಲಮ್ಮ ಜಾತ್ರೆ ಇಂದಿನಿಂದ ಫೆ.19 ರಿಂದ ಮೂರು ದಿನಗಳ ಕಾಲ ಅದ್ದೂರಿಯಾಗಿ ನಡೆಯಲಿದೆ. ಈ ಸಂದರ್ಭದಲ್ಲಿ ಭಕ್ತಾಧಿಗಳಿಂದ ಹರಕೆ ನೆಪದಲ್ಲಿ ನಡೆಯುವ ಪ್ರಾಣಿ ಬಲಿ ತಡೆಗೆ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ ಎಂದು ಸಿಪಿಐ ಸಿರಾಜುದ್ದೀನ್ ಪತ್ರಿಕೆಗೆ ತಿಳಿಸಿದ್ದಾರೆ.
ಜಾತ್ರೆಯಲ್ಲಿ 2 ಸಿಪಿಐ, 3 ಪಿಎಸ್ಐ, 10 ಎಎಸ್ಐ, 25 ಜನ ಮುಖ್ಯ ಪೇದೆಗಳು ಸೇರಿದಂತೆ 50 ಜನ ಪೋಲಿಸರು ಮತ್ತು 8 ಮಹಿಳಾ ಪೋಲಿಸರು, 100 ಜನ ಗೃಹ ರಕ್ಷಕದಳದವರು ಹಾಗೂ 1 ಜಿಲ್ಲಾ ಶಸ್ತ್ರಪಡೆಯನ್ನು ನಿಯೋಜನೆ ಮಾಡಲಾಗಿದ್ದು ಎಂದು ವಿವರಿಸಿದರು.
ಮೂರು ಭಾಗಗಳಲ್ಲಿ ಚಕ್ ಪೋಸ್ಟ್ ನಿರ್ಮಾಣ ಮಾಡಲಾಗಿದ್ದು, ಭಕ್ತಾಧಿಗಳು ಯಾವುದೇ ಪ್ರಾಣಿ ಬಲಿಯಂತ ಕಾರ್ಯಕ್ಕೆ ಕೈ ಹಾಕಬಾರದು ಕಾನೂನು ಮೀರಿ ವರ್ತಿಸಬಾರದು ಎಂದು ಮನವಿ ಇಲ್ಲವಾದಲ್ಲಿ ಸೂಕ್ರ ಕ್ರಮಕ್ಕೆಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಪ್ರತಿ ಚಕ್ ಪೋಸ್ಟ್ನಲ್ಲಿ ಓರ್ವ ಎಎಸ್ಐ 2 ಮುಖ್ಯ ಪೇದೆ ಕರ್ತವ್ಯದಲ್ಲಿ ನಿರತರಾಗಿರಲಿದ್ದಾರೆ. ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಲಿದ್ದು, ಭಕ್ತಾಧಿಗಳ ಅನುಕೂಲಕ್ಕಾಗಿ ಎರಡು ದ್ವಾರಗಳನ್ನು ನಿರ್ಮಾಣ ಮಾಡಲಾಗಿದ್ದು, ಒಳ ಬರುವ ಮತ್ತು ಹೊರ ಹೋಗುವ ದ್ವಾರಗಳ ಮಾರ್ಗಸೂಚಿಯಂತೆ ಭಕ್ತಾಧಿಗಳು ನಡೆದುಕೊಳ್ಳಬೇಕು.
ಗಂಗಾ ಸ್ನಾನಕ್ಕೆ ತೆರಳಿದ ದೇವಿ ಪಲ್ಲಕ್ಕಿ
ಜಾತ್ರೆ ಅಂಗವಾಗಿ ಸೋಮವಾರ ಮಧ್ಯಾಹ್ನ ಶ್ರೀದೇವಿಯ ಪ್ರತಿಮೆ ಹೊತ್ತ ಪಲ್ಲಕ್ಕಿಯೂ ಸುರಪುರ ತಾಲೂಕಿನ ಯಮನೂರ ಗ್ರಾಮ ಹತ್ತಿರದ ಕೃಷ್ಣಾ ನದಿಗೆ ಗಂಗಾ ಸ್ನಾನಕ್ಕಾಗಿ ಭಕ್ತ ಸಮೂಹ ತೆರಳಿತು.
ಗಂಗಾ ಸ್ನಾನ ಪೂಜಾ ವಿಧಿ ವಿಧಾನ ಮುಗಿಸಿಕೊಂಡು ಮಾರನೇಯ ದಿನ ಅಂದ್ರೆ ಮಂಗಳವಾರ ಬೆಳಗ್ಗೆ ಮೂಲ ಸ್ಥಳಕ್ಕೆ ವಾಪಸ್ ಪಲ್ಲಕ್ಕಿ ಆಗಮಿಸಲಿದ್ದು, ಸಗರ ಗ್ರಾಮ ಪ್ರಮುಖ ಬೀದಿಗಳ ಮೂಲಕ ಪಲ್ಲಕ್ಕಿ ಉತ್ಸವ ನಡೆಯಲಿದೆ. ಗ್ರಾಮಸ್ಥರು ನೈವೇದ್ಯ, ಕಾಯಿ ಕರ್ಪೂರ ಅರ್ಪಿಸಿ ದೇವಿ ಕೃಪೆಗೆ ಪಾತ್ರರಾಗಲಿದ್ದಾರೆ.
ಈಗಾಗಲೇ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿದ್ದು, ಮಹಾರಾಷ್ಟ್ರ, ಆಂದ್ರ ಸುತ್ತಲಿನ ಜಿಲ್ಲೆಗಳಿಂದ ಗ್ರಾಮಗಳಿಂದ ಭಕ್ತಾಧಿಗಳ ದಂಡು ಆಗಮಿಸುತ್ತಿದೆ. ಮಂಗಳವಾರ ಪಲ್ಲಕಿಯ ಉತ್ಸವದಲ್ಲಿ ಭಾಗವಹಿಸಿ ಶ್ರೀದೇವಿಯ ದರ್ಶನ ಪಡೆಯಲಿದ್ದಾರೆ. ತಮ್ಮ ಹರಕೆಗಳನ್ನು ಸಹ ತೀರಸಲಿದ್ದಾರೆ.
ಜಾತ್ರೆಯಲ್ಲಿ ಭಕ್ತಾಧಿಗಳು ಎಚ್ಚರವಹಿಸಿ..
ಜಾತ್ರೆಗೆ ಬಂದ ಭಕ್ತಾಧಿಗಳು ತಮ್ಮ ಮೈಮೇಲಿರುವ ಬಂಗಾರ ಆಭರಣ ಮತ್ತು ದುಡ್ಡು ಭದ್ರವಾಗಿಟ್ಟುಕೊಳ್ಳಬೇಕು. ಅಲ್ಲದೆ ಮೊಬೈಲ್ ವಾಹನಗಳನ್ನು ಜೋಪಾನವಾಗಿಟ್ಟುಕೊಳ್ಳಿ. ಜಾತ್ರೆಗೆ ಸಹಸ್ರಾರು ಸಂಖ್ಯೆಯಲ್ಲಿ ಜನ ಸೇರುವದರಿಂದ ಕಳ್ಳ ಕಾಕರಿಂದ ಎಚ್ಚರಿಕೆವಹಿಸಬೇಕು.
-ಸಿರಾಜುದ್ದೀನ್. ಸಿಪಿಐ (ಗ್ರಾಮೀಣ) ಶಹಾಪುರ.