ಪ್ರಮುಖ ಸುದ್ದಿ

ಸಗರನಾಡಿನಲ್ಲಿ ಅಮಿತ್ ಶಾ ಅಬ್ಬರ- ಭಾಷಣದ ಫುಲ್ ಡಿಟೇಲ್ ವರದಿ

 

ಸಿದ್ರಾಮಯ್ಯನ ಸರ್ಕಾರವನ್ನು ತೆಗೆದು ಎಸೆಯಿರಿ- ಅಮಿತ್ ಶಾ

ಸಮಾವೇಶಕ್ಕೆ ತಡವಾಗಿ ಬಂದದ್ದಕ್ಕೆ ಮೊದಲು ನೆರೆದ ಎಲ್ಲಾ ಸಹೋದರ-ಸಹೋದರಿಯರು ಮತ್ತು ಕಾರ್ಯಕರ್ತರಲ್ಲಿ  ಕ್ಷಮೆ ಕೇಳಿ ತಮ್ಮ ಭಾಷಣವನ್ನು ಆರಂಭಿಸಿದ ಬಿಜೆಪಿ ಚಾಣಕ್ಯ ಅಮೀತ್ ಶಾ.

ಯಾದಗಿರಿಃ ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಇಂದು ಬೆಳಗಿನಿಂದ ಸಂಚರಿಸುತ್ತಿದ್ದೇನೆ. ಬಿಜೆಪಿಗೆ ಅಭೂತಪೂರ್ವ ಬೆಂಬಲ ಕಾಣುತ್ತಿದೆ. ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರುತ್ತಿದ್ದಾರೆ, ದೆಹಲಿಯಲ್ಲಿನ ಜನ ಹೇಳುತ್ತಿರುವದನ್ನು ಕೇಳಿದ್ದೆ, ಕರ್ನಾಟಕ ರಾಜ್ಯದ ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಬಿಜೆಪಿ ಕಡಿಮೆ ಕ್ಷೇತ್ರಗಳನ್ನು ಗಳಿಸಲಿದೆ ಎಂದು, ಆದರೆ ಬೆಳಗಿನಿಂದ ಈ ಭಾಗದಲ್ಲಿ ನೋಡುತ್ತಿದ್ದೇನೆ. ಕಾರ್ಯಕರ್ತರು ಉತ್ಸಾಹದಿಂದ ಭಾಗವಹಿಸುತ್ತಿದ್ದು, ಇದೆಲ್ಲವನ್ನು ಗಮನಿಸಿದರೆ, ಹೈಕ ಭಾಗವೇ ರಾಜ್ಯದ ಚುಕ್ಕಾಣಿ ಹಿಡಿಯಲು ಬಿಜೆಪಿ ಪಾಲಿಗೆ ಅಡಿಪಾಯವಾಗಲಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದರು.

ಜಿಲ್ಲೆಯ ಸುರಪುರ ನಗರದಲ್ಲಿ ಬಿಜೆಪಿವತಿಯಿಂದ ನಡೆದ ನವಶಕ್ತಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದಾಗಿ ರಾಜ್ಯದಲ್ಲಿ ಅತಿ ಹೆಚ್ಚು 3781 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿದ್ರಾಮಯ್ಯನವರ ಸರ್ಕಾರದ ನಿರ್ಲಕ್ಷದಿಂದ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಆದರೆ ಸಿದ್ರಾಮಯ್ಯ ಹೇಳ್ತಾರೆ, ರೈತರ ಆತ್ಮಹತ್ಯೆದ ಹಿಂದೆ ಭಾಜಪದ ಷಡ್ಯಂತ್ರವಿದೆ. ರಾಜ್ಯದಲ್ಲಿ ರೈತರು, ಮಹಿಳೆಯರು, ಆದಿವಾಸಿ, ವನವಾಸಿಗಳು ಸಂತ್ರಸ್ಥರಾಗಿದ್ದಾರೆ. ಅತಿ ಹೆಚ್ಚು ಮಹಿಳೆಯರ ಮೇಲೆ ಅತಯಾಚಾರ ಅನ್ಯಾಯವಾಗಿದೆ.
ಕರ್ನಾಟಕದ ಜನತೆ ಆಡಳಿತ ನಿಮಗೆ ನೀಡಿದೆ. ನಿಮ್ಮಿಂದ ಸಮರ್ಪಕ ಆಡಳಿತ ನಡೆಸಲು ಸಾಧ್ಯವಾಗದಿದ್ದರೆ, ಅಧಿಕಾರ ಬಿಟ್ಟು ತೊಲಗಿ. ಇನ್ನೇನು ಬಿಜೆಪಿ ಸರ್ಕಾರ ಬರಲಿದೆ ನಾವು ಕರ್ನಾಟಕವನ್ನು ಉತ್ತಮ ಸ್ಥಿತಿಗೆ ತರಲಿವೆ. ರೈತರಿಗೆ ಪರಿಹಾರ ಒದಗಿಸುತ್ತೇವೆ. ಮಹಿಳೆಯರಿಗೆ ಸಮರ್ಪಕ ರಕ್ಷಣೆ ನೀಡುತ್ತೇವೆ ಎಂದರು.

ಕೇಂದ್ರ ಸರ್ಕಾರ ರಾಜ್ಯಕ್ಕೆ ಏನು ಕೊಟ್ಟಿದೆ ಎಂದು ಕೇಳುವ ಸಿದ್ರಾಮಯ್ಯನವರೇ ಇದು ಕೇಂದ್ರ ಸರ್ಕಾರದ ಚುನಾವಣೆಯಲ್ಲಿ, ರಆಜ್ಯ ಸರ್ಕಾರದ್ದು, ರಾಜ್ಯದ ಜನತೆ ನಿಮಗೆ ಅಧಿಕಾರ ಕೊಟ್ಟಿದೆ, ನೀವು ರಾಜ್ಯ ಸರ್ಕಾರಕ್ಕೆ ಏನು ಕೊಟ್ಟಿದೀರಿ ಎಂಬುದನ್ನು ಸ್ಪಷ್ಟ ಪಡಿಸಿ, ಆ ಮೇಲೆ ನಾವು ಕೇಂದ್ರದಿಂದ ರಾಜ್ಯಕ್ಕೆ ಏನು ಕೊಟ್ಟಿದೆ ಎಂಬುದನ್ನು ಖಂಡಿತವಾಗಿ ತಿಳಿಸುತ್ತೇನೆ.

ಕೇಳಿ ಸಿದ್ರಾಮಯ್ಯನವರೇ, 13ನೇ ಹಣಕಾಸು ಯೋಜನೆಯಡಿಯಲ್ಲಿ ಹಿಂದೆ ನಿಮ್ಮ ಕಾಂಗ್ರೆಸ್ ಸರ್ಕಾರ ಕರ್ನಾಟಕ ರಾಜ್ಯಕ್ಕೆ ಕೇವಲ 88 ಸಾವಿರ 583 ಕೋಟಿ ಅನುದಾನ ನೀಡಿದ್ದರು, ಆದರೆ ಮೋದಿಜೀ ಸರ್ಕಾರ ಇದೇ 14ನೇ ಹಣಕಾಸು ಯೋಜನೆಯಡಿ 2 ಲಕ್ಷ 19 ಸಾವಿರ 506 ಕೋಟಿ ಅನುದಾನ ಒದಗಿಸಿದೆ.
ಅಂದ್ರೆ 1 ಲಕ್ಷ 30 ಸಾವಿರ ಕೋಟಿ ಹಣ ಹೆಚ್ಚಿಗೆ ನೀಡಿದೆ. ಇದೆಲ್ಲ ಹಣವನ್ನು ಏನ್ಮಾಡಿದ್ದೀರಿ ಎಂಬುದನ್ನು ಸ್ಪಷ್ಟ ಪಡಿಸಿ ಎಂದು ಸವಾಲೆಸೆದರು. ಇದೆಲ್ಲ ಹಣವನ್ನು ಸಿದ್ರಾಮಯ್ಯನವರು ಎಲ್ಲಿಗೆ ಕಳುಹಿಸಿದ್ದೀರಿ ಗೊತ್ತಾ ನಿಮಗೆ, ಮೋದಿಜೀ ಅವರು ನೀಡಿದ 1 ಲಕ್ಷ 30 ಸಾವಿರ ಕೋಟಿ ಹಣ ಎಲ್ಲಿಗೆ ಹೋಗಿದೆ ಅಂದ್ರೆ, ಇವತ್ತು ಕಾಂಗ್ರೆಸ್‍ನ ಸಿಎಂ ಸಿದ್ರಾಮಯ್ಯನವರು ಸೇರಿದಂತೆ ಅವರ ಹಿಂಬಾಲಕರ ಮನೆಗಳು ಬೆಳದಿವೆ. ನಾಲ್ಕು ಕೋಣೆಗಳಿದ್ದ ಅವರ ಮನೆ ದೊಡ್ಡ ದೊಡ್ಡ ಬಂಗಲೆಗಳಾಗಿವೆ, ಮನೆ ಮುಂದೆ ಕಾರ್‍ಗಳು ನಿಂತಿವೆ. ಯಾರಾದರೂ 40 ಲಕ್ಷದ ಗಡಿಯಾರ ಕೈಯ್ಯಲ್ಲಿ ಕಟ್ಟಿದ್ದಾರಾ..? ಅದು ಸಿದ್ರಾಮಯ್ಯನವರ ಕೈಯಲ್ಲಿದೆ. ಸಿದ್ರಾಮಯ್ಯನವರ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆರೋಪಿಸಿದರು.

ಅಲ್ಲದೆ ಯಾವೆಲ್ಲ ಯೋಜನೆಗಳಿಗೆ ಕೇಂದ್ರ ಸರ್ಕಾರ ಕೋಟಿಗಟ್ಟಲೇ ಹಣ ನೀಡಿದೆ ಎಂಬುದನ್ನು ಎಳೆ ಎಳೆಯಾಗಿ ಯಾವ ಯಾವ ಕಾಮಗಾರಿಗೆ ನೀಡಿದೆ ಎಂಬುದನ್ನು ಅಂಕಿ ಅಂಶ ಸಮೇತ ಒಟ್ಟು 79 ಸಾವಿರ ಕೋಟಿ ಹೆಚ್ಚಿನ ಹಣವನ್ನು ವಿವಿಧ ರೂಪದಲ್ಲಿ ನೀಡಿದೆ. ರೈತರು, ಮಹಿಳೆಯರು, ಮಕ್ಕಳು, ವೃದ್ಧರಿಗೆ ಸೇರಿದಂತೆ ಒಟ್ಟು 112 ಯೋಜನೆಗಳನ್ನು ರೂಪಿಸಿದ್ದು, ಅದಕ್ಕೆಲ್ಲ ಸಮರ್ಪಕ ಹಣ ಒದಗಿಸಲಾಗಿದೆ ಎಂದು ವಿವರಿಸಿದರು. ಈ ಎಲ್ಲಾ ಯೋಜನೆಗಳು ಕರ್ನಾಟಕ ರಾಜ್ಯದಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸಿದ್ರಾಮಯ್ಯ ಬಿಡಲಿಲ್ಲ. ಏಕೆ ಗೊತ್ತಾ.? ಇವೆಲ್ಲ ಯೋಜನೆಗಳು ಜಾರಿಯಾದಲ್ಲಿ ಪ್ರಧಾನಮಂತ್ರಿ ಮೋದಿಜೀ ಹವಾ ಜಾಸ್ತಿಯಾಗಲಿದೆ ಮತ್ತು ಖಂಡಿತವಾಗಿ ಬಿಜೆಪಿ ರಾಜ್ಯದ ಚುಕ್ಕಾಣಿ ಹಿಡಿಯಲಿದೆ ಎಂಬ ಭಯದಿಂದ, ಸಿದ್ರಾಮಯ್ಯನವರ ಸರ್ಕಾರ ರಾಜ್ಯದಲ್ಲಿ ಮೋದಿಜೀ ಕರುಣಿಸಿದ ಯೋಜನೆಗಳನ್ನು ಸಮರ್ಪಕವಾಗಿ ಜಾರಿ ಮಾಡಲಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. ಕಾರಣ ಇವೆಲ್ಲ ಅಂಶಗಳನ್ನು ಕಾರ್ಯಕರ್ತರು ಜನರಿಗೆ ಮುಟ್ಟಿಸಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷಜೀ, ಹಿರಿಯರಾದ ಮಾಜಿ ಎಂಎಲ್ಸಿ, ಪಕ್ಷದ ಜಿಲ್ಲಾ ಉಸ್ತವಾರಿ ಎನ್.ಶಂಕ್ರಪ್ಪ, ಮಾಜಿ ಸಚಿವ ರಾಜೂಗೌಡ, ಶಹಾಪುರ ಶಾಸಕ ಗುರು ಪಾಟೀಲ್, ಮಾಜಿ ಶಾಸಕ ವೀರಬಸವಂತರಡ್ಡಿ ಮುದ್ನಾಳ, ಶರಣಭೂಪಾಲರಡ್ಡಿ, ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಮಾಗನೂರ, ಭೀಮಣ್ಣ ಮೇಟಿ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜನಸ್ತೋಮವೇ ನೆರೆದಿತ್ತು.

Related Articles

Leave a Reply

Your email address will not be published. Required fields are marked *

Back to top button