ಪ್ರಮುಖ ಸುದ್ದಿ
ಭೀಮಾತೀರದ ಹಂತಕ ಮಹಾದೇವ್ ಸಾಹುಕಾರ್ ಭೈರಗೊಂಡ ಬಂಧನ!
ವಿಜಯಪುರ : ಭೀಮಾತೀರದ ಹಂತಕ ಗಂಗಾಧರ ಚಡಚಣ ಕೊಲೆ ಪ್ರಕರಣದ ಪ್ರಮುಖ ಆರೋಪಿ ಮಹಾದೇವ್ ಸಾಹುಕಾರ್ ಭೈರಗೊಂಡ ಬಂಧಿಸುವಲ್ಲಿ ಪೊಲೀಸರು ಯಶಸ್ವಿ ಆಗಿದ್ದಾರೆ. ತಲೆಮರೆಸಿಕೊಂಡಿದ್ದ ಆರೋಪಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು. ನಿನ್ನೆ ತಡರಾತ್ರಿ ಇಂಡಿ ತಾಲೂಕಿನ ಹೇರೂರು ಗ್ರಾಮದ ನಿವಾಸಕ್ಕೆ ಬಂದಿದ್ದ ಮಹಾದೇವ್ ಸಾಹುಕಾರ್ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಸಿಐಡಿ ತಂಡ ಹಾಗೂ ಚಡಚಣ ಪೊಲೀಸರನ್ನು ಒಳಗೊಂಡ ಸುಮಾರು 25 ಜನ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು. ಇಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ಆರೋಪಿಯನ್ನು ಬಂಧಿಸಿದ್ದಾರೆ. ಮಹಾದೇವ್ ಸಾಹುಕಾರ್ ಭೈರಗೊಂಡನನ್ನು ಚಡಚಣ ಪೊಲೀಸ್ ಠಾಣೆಗೆ ಕರೆದೊಯ್ದು ಸಿಐಡಿ ಹಾಗೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.