ಕ್ಯಾಂಪಸ್ ಕಲರವಪ್ರಮುಖ ಸುದ್ದಿ
ಮೇ. 17ರಂದು ಟ್ಯಾಲೆಂಟ್ ಸರ್ಚ್ ಟೆಸ್ಟ್ ಪರೀಕ್ಷೆ – ಡಾ.ಸುದತ್ತ ದರ್ಶನಾಪುರ
ಸಾಯಿ ವಿದ್ಯಾನಿಕೇತನ ಕಾಲೇಜಿನಲ್ಲಿ ಟ್ಯಾಲೆಂಟ್ ಟೆಸ್ಟ್ ಪರೀಕ್ಷೆ
ಸಾಯಿ ವಿದ್ಯಾನಿಕೇತನ ಕಾಲೇಜಿನಲ್ಲಿ ಟ್ಯಾಲೆಂಟ್ ಟೆಸ್ಟ್ ಪರೀಕ್ಷೆ
yadgiri, ಶಹಾಪುರಃ ನಗರದ ಸಾಯಿ ವಿದ್ಯಾನಿಕೇತನ ವಸತಿ ಕಾಲೇಜಿನಲ್ಲಿ ವಿಜ್ಞಾನ ವಿಭಾಗಕ್ಕೆ ಉಚಿತ ಪ್ರವೇಶ ಪಡೆಯಲು ಪ್ರತಿಭಾವಂತ ಹಾಗೂ ಬಡ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗಾಗಿ 2022-23ನೇ ಶೈಕ್ಷಣಿಕ ಸಾಲಿಗೆ “ಬಾಪುಗೌಡ ದರ್ಶನಾಪುರ ಟ್ಯಾಲೆಂಟ್ ಸರ್ಚ್ ಟೆಸ್ಟ್” ಪರೀಕ್ಷೆ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ.ಸುದತ್ತ ದರ್ಶನಾಪುರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೇ. 17ರಂದು ಬೆಳಗ್ಗೆ 10 ಗಂಟೆಗೆ ನಡೆಯುವ ಪ್ರವೇಶ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಟಾಪ್ 10 ವಿದ್ಯಾರ್ಥಿಗಳಿಗೆ ವಿಜ್ಞಾನ ವಿಭಾಗದಲ್ಲಿ ಉಚಿತ ಪ್ರವೇಶಕ್ಕೆ ಅವಕಾಶ ಕಲ್ಪಿಸಿ ಕೊಡಲಾಗುವುದು. ಅಂದು ನಡೆಯುವ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಶಹಾಪುರ ಹಳೆಯ ಬಸ್ ನಿಲ್ದಾಣದಿಂದ ನಮ್ಮ ವಿದ್ಯಾ ಸಂಸ್ಥೆಯ ಬಸ್ಸಿನ ಸೌಲಭ್ಯಗಳು ನೀಡಲಾಗುವುದು ಹೆಚ್ಚಿನ ಮಾಹಿತಿಗಾಗಿ ಹಾಗೂ ಪ್ರವೇಶ ಪರೀಕ್ಷಾ ನೊಂದಣಿಗಾಗಿ 9686642445 ಈ ನಂಬರಿಗೆ ಸಂಪರ್ಕಿಸಲು ಕೋರಲಾಗಿದೆ.