ಪ್ರಮುಖ ಸುದ್ದಿ

ವಿದ್ಯಾರ್ಥಿಗಳ ಕುತೂಹಲ ಹೆಚ್ಚಿಸಿದ ಇಸ್ರೋ ವಿಜ್ಞಾನಿಗಳ ತಂಡ

ತಂತ್ರಜ್ಞಾದಲ್ಲಿ ದೇಶದ ಸಾಮಥ್ರ್ಯ ಮೇಲ್ಪಂಕ್ತಿ: ಎಸ್.ಹಿರಿಯಣ್ಣ

ಯಾದಗಿರಿ, ಶಹಾಪುರ: ದೇಶ ಸಮೃದ್ಧವಾಗಲು ಉಪಗ್ರಹಗಳ ಕೇಂದ್ರದ ಸೇವೆ ಅಗತ್ಯತೆಗಳಲ್ಲಿ ಒಂದಾಗಿದ್ದು, ವಿಜ್ಞಾನ,   ವ್ಯವಸಾಯ ಕೈಗಾರಿಕೆ, ಖಗೋಳಶಾಸ್ತ್ರ, ಹವಾಮಾನ ವೀಕ್ಷಣೆ, ಖನಿಜ ಸಂಪತ್ತುಗಳ ಸಂಶೋಧನೆ ಸೇರಿದಂತೆ ಹತ್ತು ಹಲವು ಕಾರ್ಯಗಳಿಗೆ ಅನುಕೂಲವಿದೆ ಭೂಮಿಯಿಂದ ಬಟನ್ ಹಾಕಿ ಗಗನದಲ್ಲಿ ಇರುವ ಉಪಗ್ರಹದ ನಿಯಂತ್ರಣ ಮಾಡುವುದೆಂದರೆ ಇದು ವಿಜ್ಞಾನ-ತಂತ್ರಜ್ಞಾನದ ಬೆಳವಣಿಗೆಗೆ ಮೇಲ್ಪಂಕ್ತಿಯಾಗಿದೆ ಎಂದು ನಿವೃತ್ತ ಇಸ್ರೋ ವಿಜ್ಞಾನಿ ಹಿರಿಯಣ್ಣ. ಎಸ್. ತಿಳಿಸಿದರು.

ನಗರದ ಹೊರವಲಯದ ಕೇಂದ್ರೀಯ ಪಠ್ಯಕ್ರಮದ ಶ್ರೀ ಸಾಯಿ ವಿದ್ಯಾನಿಕೇತನ ರೆಸಿಡೆನ್ಸಿಯಲ್ ಶಾಲೆಯಲ್ಲಿ ವಿಶ್ವ ಅಂತರಿಕ್ಷ ಸಪ್ತಾಹ-2019 ಕಾರ್ಯಕ್ರಮವನ್ನು ಇಸ್ರೋ ಬೆಂಗಳೂರು ಪ್ರಾಯೋಜಕತ್ವದಲ್ಲಿ ಆಯೋಜಿಸಿದ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ಬೇರೆ ಬೇರೆ ರಾಷ್ಟ್ರಗಳು ಅಂದಿನ ಪರಿಸ್ಥಿತಿಯಲ್ಲಿ ಭಾರತದ ಬಗ್ಗೆ ತಾತ್ಸಾರ ಭಾವನೆ ಹೊಂದಿದ್ದ ಸಂದರ್ಭದಲ್ಲಿ ನಮ್ಮ ವಿಜ್ಞಾನಿಗಳು ಭಾರತವೂ ಕೂಡ ಅಣುಬಾಂಬನ್ನು ತಯಾರಿಸುವ ಸಾಮಥ್ರ್ಯ ಹೊಂದಿದೆ ಎಂದು ವಿಶ್ವಕ್ಕೆ ತೋರಿಸಿ ಕೊಟ್ಟು, ಪಾಶ್ಚಾತ್ಯ ವಿಜ್ಞಾನಿಗಳು ಬೆರಗಾಗುವಂತೆ ಮಾಡಿದ ಹೆಮ್ಮೆಯ ವಿಜ್ಞಾನಿಗಳು ನಮಗೆಲ್ಲ ಸ್ಫೂರ್ತಿಯಾಗಿದ್ದಾರೆ.

ಬೆಂಗಳೂರು ಇಸ್ರೋದ ಪ್ರಮುಖ ಕೇಂದ್ರವಾಗಿದ್ದು ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮಕ್ಕಾಗಿ ಉಪಗ್ರಹಗಳ ಸಾಕ್ಷಾತ್ಕಾರದಿಂದ ಪ್ರತಿಯೊಬ್ಬರಿಗೂ ಅನುಕೂಲವಾಗುವ ಗುರಿಯನ್ನು ಹೊಂದಿದೆ.

ವಿದ್ಯಾರ್ಥಿಗಳಿಗೆ ತಂತ್ರಜ್ಞಾನದ ಹೊಸ ಆವಿಷ್ಕಾರಗಳನ್ನು ಕಂಡುಹಿಡಿಯಲು, ಕರ್ನಾಟಕದಲ್ಲಿ ಯುಆರ್‍ಎಸ್‍ಎಸ್ ಸಂಸ್ಥೆಯ ತಂಡ ಬಾಹ್ಯಾಕಾಶ ವಿಜ್ಞಾನದ ಪ್ರಯೋಜನಗಳನ್ನು ತಿಳಿಸಲು ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು ಸ್ಥಳೀಯ ಸಾಯಿ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿಗಳಿಗೂ ಮತ್ತು ಬೇರೆ ಶಾಲೆಯ ವಿದ್ಯಾರ್ಥಿಗಳಿಗೂ ಇದರ ಸಾರ್ಥಕ ಪ್ರಯೋಜನವಾಗುತ್ತದೆ.

ವಿದ್ಯಾರ್ಥಿಗಳು ಸಕಾರಾತ್ಮಕ ಆಲೋಚನೆಗಳಿಂದ ಸೂಕ್ತ ಸಲಹೆ ಮಾರ್ಗದರ್ಶನದಿಂದ ಸರಳತೆ ಹಾಗೂ ನಮ್ರತೆಯಿಂದ ಮುಂದೆ ಬಂದು ವೀಕ್ಷಣೆ ಹಾಗೂ ಪ್ರಯೋಗಗಳನ್ನು ಮಾಡುವ ಮೂಲಕ ಗುಣಮಟ್ಟದ ವ್ಯಕ್ತಿತ್ವದ ವಿಕಾಸಕ್ಕೆ ನಾಂದಿಯಾಗಬೇಕು ಎಂದರು.

ಇದೇ ಸಂದರ್ಭದಲ್ಲಿ ಇಸ್ರೋದಲ್ಲಿನ ಕ್ರಿಯಾತ್ಮಕ ಚಟುವಟಿಕೆಗಳ ಪ್ರಮುಖ ಮಾದರಿಗಳಾದ ಮಾರ್ಕ್ 3, ವಿ.ಎಸ್.ಎಲ್.ವಿ, ಚಂದ್ರಯಾನ-2, ಮಂಗಳಯಾನ ಸೇರಿದಂತೆ 22 ಪೋಸ್ಟಲ್‍ಗಳು ಮತ್ತು ಅರ್ಧಗಂಟೆಯ ವಿಡಿಯೋ ರೆಕಾಡಿರ್ಂಗ್ ಮಾಹಿತಿ ವಿದ್ಯಾರ್ಥಿಗಳಿಗೆ ನೀಡಿದರು. ಶಾಲೆಯ ಆವರಣದಲ್ಲಿ ಉಪಗ್ರಹದ ಉಡಾವಣೆಯ ಮಾದರಿ ಪ್ರಾತ್ಯಕ್ಷಿಕೆ ಪ್ರದರ್ಶಿಸಿ ವಿದ್ಯಾರ್ಥಿಗಳ ಗಮನಸೆಳೆದರು.

ವಿಜ್ಞಾನಿಗಳ ತಂಡದಲ್ಲಿ ಉಮಾಕಾಂತ್ ಮಿರ್ಜಿ ಇಸ್ರೋ ವಿಜ್ಞಾನಿ, ಬಸವರಾಜ್ ಅಕ್ಕಿಮರಡಿ ವಿಶ್ವ ಅಂತರಿಕ್ಷ ಸಪ್ತಾಹದ ಸಂಯೋಜಕರು, ಶಾಮರಾವ್ ಗೂರೂರು, ವಿಶ್ವನಾಥ್ ಎಕ್ಲಾಸ್ಪುರ್, ವಿಠ್ಠಲ ಮೇತ್ರಿ, ಅಶೋಕ್ ಶಿರಡಿಬಾಬಾ, ಸೋಮಶೇಖರ್, ತಬ್ರೆಜ್ ಅಲಿ, ಕಿರಣ ದೇಸಾಯಿ ಇದ್ದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು. ಕಾರ್ಯಕ್ರಮದ ವೇದಿಕೆ ಮೇಲೆ ಶ್ರೀಸಾಯಿ ವಿದ್ಯಾನಿಕೇತನದ ಸಂಸ್ಥಾಪಕ ಕಾರ್ಯದರ್ಶಿ ಡಾ.ಸುದತ್ತ ದರ್ಶನಾಪುರ, ಪ್ರಾಚಾರ್ಯರುಗಳಾದ ಸಿ.ಎಸ್.ದೇಸಾಯಿ ಎಂ.ಪಿ.ಸಾಸನೂರು, ಆಡಳಿತಾಧಿಕಾರಿ ರೇಖು ಚೌವ್ಹಾನ್ ಇದ್ದರು.

ಉಪ ಪ್ರಾಚಾರ್ಯ ಎ.ಬಿ.ಪಾಟೀಲ್ ಸೇರಿದಂತೆ ವಿವಿಧ ಶಾಲೆಯ ಮುಖ್ಯಸ್ಥರು, ಪಾಲಕರು, ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಇದ್ದರು. ವಿಶ್ವ ಅಂತರಿಕ್ಷ ಸಪ್ತಾಹದ ಕುರಿತಂತೆ ಭಾಷಣ ಕ್ವಿಜ್ ಕಾಂಪಿಟೇಶನ್‍ಗಳು ನಡೆದವು. ವಿಜೇತರಿಗೆ ಪಾರಿತೋಷಕ ವಿತರಿಸಲಾಯಿತು ಇಸ್ರೋ ವಿಜ್ಞಾನಿ ಉಮಾಕಾಂತ್ ಮಿರ್ಜಿಯವರು ಸಮಾರೋಪ ಭಾಷಣ ಮಾಡಿದರು.

Related Articles

Leave a Reply

Your email address will not be published. Required fields are marked *

Back to top button