ಶಹಾಪುರಃ ಸಂಗೊಳ್ಳಿ ರಾಯಣ್ಣ ಅಪ್ರತಿಮ ದೇಶಭಕ್ತ – ಸಚಿವ ಭೈರತಿ ಬಸವರಾಜ
ಹೊಸಕೇರಾಃ ಕ್ರಾಂತಿ ವಿರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ
ಹೊಸಕೇರಾಃ ಕ್ರಾಂತಿ ವಿರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ
ಸಂಗೊಳ್ಳಿ ರಾಯಣ್ಣ ಅಪ್ರತಿಮ ದೇಶಭಕ್ತ – ಸಚಿವ ಭೈರತಿ ಬಸವರಾಜ
yadgiri, ಶಹಾಪುರಃ ಸಂಗೊಳ್ಳಿ ರಾಯಣ್ಣ ಅಪ್ರತಿಮ ದೇಶಭಕ್ತ. ಪ್ರಾಮಾಣಿಕತೆಯಿಂದ ದೇಶ ಮತ್ತು ಕನ್ನಡ ನಾಡಿನ ನೆಲ, ಜಲಕ್ಕಾಗಿ ಪ್ರಾಣ ತ್ಯಾಗ ಮಾಡಿ ಹೋರಾಟ ಮಾಡಿದ ಅಪ್ರತಿಮ ವೀರಯೋಧ. ಅಂತಹ ಮಹಾನ್ ಶಕ್ತಿ, ಚೇತನ ಈ ಗ್ರಾಮದ ಯುವಕರಲ್ಲಿ ಮೇಳೈಸಿದೆ ಎಂದರೆ ಹೊಸಕೇರಾ ಗ್ರಾಮ ನಿಜಕ್ಕೂ ಪುಣ್ಯಭೂಮಿ ಎಂದು ಸಚಿವ ಭೈರತಿ ಬಸವರಾಜ ತಿಳಿಸಿದರು.
ತಾಲೂಕಿನ ಹೊಸಕೇರಾ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಯುವಕರ ಬಳಗದಿಂದ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಅನಾವರಣಗೊಳಿಸಿ ನಂತರ ನಡೆದ ಸಮಾರಂಭದಲ್ಲಿ ಕಂಬಳಿ ಮತ್ತು ದೊಡ್ಡ ಹೂ ಮಾಲೆÀ ಗೌರವಾಧಾರ ಸ್ವೀಕರಿಸಿ ಅವರು ಮಾತನಾಡಿದರು.
ಸಂಗೊಳ್ಳಿ ರಾಯಣ್ಣ ಬ್ರಿಟಿಷರು ಒಡ್ಡಿದ ಅಮಿಷಕ್ಕೆ ಬಲಿಯಾದರೆ, ಆತ ಸ್ವಾರ್ಥನಾಗಿದ್ದರೆ, ಆತನೇ ರಾಜನಾಗಿ ಮೆರೆಯಬಹುದಿತ್ತು. ಆದರೆ ತನ್ನ ನಾಡಿನ, ದೇಶದ ನೆಲಕ್ಕಾಗಿ ತನ್ನ ಪ್ರಾಣ ಪಣಕಿಟ್ಟು ಹೋರಾಟ ಮಾಡಿದ ಧೀರ ಯೋಧ. ರಾಣಿ ಕಿತ್ತೂರಿನ ಚನ್ನಮ್ಮಳಿಗೆ ಧೈರ್ಯ ತುಂಬುವ ಮೂಲಕ ನಾನಿದ್ದೇನೆ ಮತ್ತೇ ಸೈನ್ಯ ಕಟ್ಟುವೆ. ಬ್ರಿಟಿಷರ ಹುಟ್ಟಡಗಿಸುವೆ ಎಂದು ಬ್ರಿಟಿಷರ ವಿರುದ್ಧ ಹೋರಾಡಿದ ಪ್ರಥಮ ಕನ್ನಡದ ವೀರ ಸೇನಾನಿ ಸಂಗೊಳ್ಳಿ ರಾಯಣ್ಣ, ಆತನ ಶೌರ್ಯ, ಪ್ರಾಮಾಣಿಕತೆ, ಬುದ್ಧಿ ಶಕ್ತಿಯನ್ನು ಯುವಕರು, ನಾವುಗಳು ಅನುಸರಿಸುವ ಮೂಲಕ ರಾಯಣ್ಣನ ಬಲಿದಾನಕ್ಕೆ ಗೌರವ ಸಮರ್ಪಣೆ ಮಾಡಬೇಕು ಅಂದಾಗ ಮಾತ್ರ ಜೀವನ ಸಾರ್ಥಕ ಎಂದರು.
ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಮಾತನಾಡಿ, ಸಂಗೊಳ್ಳಿ ರಾಯಣ್ಣನ ಚರಿತ್ರೆ ತಿಳಿದುಕೊಂಡು ಆತನಂತೆ ನಾವೆಲ್ಲರೂ ದೇಶದ ಏಳ್ಗೆಗಾಗಿ ಸಮಯ ಬಂದಾಗ ನಿಲ್ಲುತ್ತೇವೆ ಎಂಬ ದೃಢ ನಿರ್ಧಾರ ಇರಬೇಕು. ಆತ ಯುವಕರಿಗೆಲ್ಲ ಪ್ರೇರಣಾ ಶಕ್ತಿಯಾಗಿದ್ದಾರೆ. ಕಳೆದ ಎರಡು ವರ್ಷದಿಂದ ಕೋವಿಡ್ ಹಿನ್ನೆಲೆ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಅನಾವರಣ ಮಾಡಲಾಗಿರುವದಿಲ್ಲ. ಈಗ ಕಾಲ ಕೂಡಿ ಬಂದಿದೆ. ಆದರೆ ಸಿದ್ರಾಮಯ್ಯನವರು ಬರಲಾಗಲಿಲ್ಲ. ಆದರೂ ಇನ್ನೂ ಐದಾರು ತಿಂಗಳಲ್ಲಿ ಶಹಾಪುರದಲ್ಲಿ 24 ಅಡಿಯ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಸ್ಥಾಪನೆ ಮಾಡಲಿದ್ದೇವೆ. ಆಗ ಸಿದ್ರಾಮಯ್ಯನವರನ್ನು ಖಂಡಿತ ಕರೆಸಿ ಉದ್ಘಾಟಿಸೋಣ ಎಂದರು.
ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ ಮಾತನಾಡಿ, ಸಂಗೊಳ್ಳಿ ರಾಯಣ್ಣ ಇಡಿ ದೇಶದ ಆಸ್ತಿ ಆತ ಒಂದೆ ಸಮಾಜಕ್ಕೆ ಸೀಮಿತ ಮಾಡಬಾರದು. ರಾಯಣ್ಣ ಅತ್ಯದ್ಭುತ ಸಾಧಕ. ಗರಡಿ ಮನೆಯಲ್ಲಿ ಬೆಳೆದಾತ. ರಾಯಣ್ಣನು ರಾಜಕೀಯಕ್ಕೆ ತರಬಾರದು ಎಂದರು.
ಕನಕ ಪೀಠದ ಸಿದ್ಧರಾಮನಂದಪುರಿ ಮಹಾಸ್ವಾಮಿ ಆಶೀರ್ವಚನ ನೀಡಿದರು , ಅಗತೀರ್ಥ ರೇವಣಸಿದ್ದೇಶ್ವರ ಮಹಾಸಂಸ್ಥಾನದ ಶಾಂತಯ್ಯ ಮಹಾಸ್ವಾಮಿ. ದೇವರಗೋನಾಲ ಸಕ್ರೆಪ್ಪ ಮುತ್ಯಾ, ನಿಜಾನಂದ ಮಹಾಸ್ವಾಮಿ, ಸಣಕ್ಕೆಪ್ಪ ಮುತ್ಯ ಸಾನ್ನಿಧ್ಯವಹಿಸಿದ್ದರು. ಎಂಎಲ್ಸಿ ಬಿ.ಜಿ.ಪಾಟೀಲ್, ಮಾಜಿ ಎಂಎಲ್ಸಿ ಅಮಾತೆಪ್ಪ ಕಂದಕೂರ, ಮುಖಂಡರಾದ ಶರಣಪ್ಪ ಸಲಾದಪುರ, ಶಿವಮಹಾಂತ ಚಂದಾಪುರ, ಪ್ರಭು ಬೂದನೂರ ಇತರರಿದ್ದರು.
ಮಳೆ ಬಂದು ಒಂದಿಷ್ಟು ಅಸ್ತವ್ಯಸ್ತ
ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ವೇದಿಕೆ ಏರುತ್ತಿದ್ದಂತರೆ, ಮಳೆ ಜೋರಾಯಿತು, ಜನ ಮಳೆ ಬಂದರೂ ಹಾಗೇ ನಿಂತಿರುವದುನ್ನು ಕಂಡ ಸಚಿವರು, ನಾಡಿನ ಸಮೃದ್ಧಿಗೆ ರಾಯಣ್ಣನ ಪ್ರತಿಮೆ ಅನಾವರಣೆ ಹಿನ್ನೆಲೆ ವರುಣ ದೇವ ಒಂದಿಷ್ಟು ಮಳೆ ಸುರಿಸುವ ಮೂಲಕ ನಾಡು ಸುಭೀಕ್ಷವಾಗಿದೆ ಎಂಬ ಅರ್ಥವನ್ನು ನೀವು ಮಾಡಿ ಕಾಯ ಯಶಸ್ವಿಯಾಗಿದೆ ಎಂಬುದಕ್ಕೆ ಶುಭಸೂಚಕವಿದೆ ಎಂದರು.
ಒಂದಿಷ್ಟು ಮಳೆ ಬಂದ ಕಾರಣ, ಕುರ್ಚಿಗಳ, ಪೆಂಡಾಲ ಒಳಗಡೆ ನೀರ ಸುರಿದು ಅಸ್ತವ್ಯಸ್ತವಾಯಿತು, ಆ ನಂತರ ಕಡಿಮೆ ಆಯಿತು.
—————–