ಪ್ರಮುಖ ಸುದ್ದಿ
ನಟಿ ಸಂಜನಾ ಮನೆ ಮೇಲೆ ಸಿಸಿಬಿ ದಾಳಿ
ನಟಿ ಸಂಜನಾ ಮನೆ ಮೇಲೆ ಸಿಸಿಬಿ ದಾಳಿ
ಬೆಂಗಳೂರಃ ಬೆಳ್ಳಂ ಬೆಳಗ್ಗೆ ಇಂದು ಸಿಸಿಬಿ ಪೊಲೀಸರು ನಟಿ ಸಂಜನಾ ಮನೆ ಮೇಲೆ ದಾಳಿ ನಡೆಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.
ಸ್ಯಾಂಡಲ್ ವುಡ್ ನಲ್ಲಿ ಹರಡಿದ ಡ್ರಗ್ಸ್ ಮಾಫಿಯಾ ಸಂಚಲನ ಮೂಡಿಸುತ್ತಿದೆ.
ಮೊದಲಿಗೆ ನಟಿ ರಾಗಿಣಿ ಮತ್ತು ನಟಿ ಸಂಜನಾ ಆಪ್ತರಾದ ರವಿಶಂಕರ ಹಾಗೂ ರಾಹುಕ್ ಹೆಸರು ಕೇಳಿ ಬಂದಿತ್ತು. ಬೆನ್ನ ಹಿಂದೆಯೇ ಈ ಇಬ್ಬರ ನಟಿಯರ ಬಲವಾದ ಆರೋಪಗಳು ಹೊರ ಬಂದವು. ರವಿಶಂಕರ ಮತ್ತು ರಾಹುಲ್ ರನ್ನು ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದರು.
ಆ ನಡುವೆಯೇ ಮೊದಲನೇ ಹಂತದಲ್ಲಿ ನಟಿ ರಾಗಿಣಿ ಮನೆ ಮೇಲೆ ದಾಳಿ ನಡೆಸಿ ನಟಿ ರಾಗಿಣಿಯನ್ನು ವಿಚಾರಣೆಗೆ ಕರೆ ತಂದು ಇದೀಗ ವಿಚಾರಣೆಗಾಗಿಯೇ 3 ದಿನ ಸಿಸಿಬಿ ಕಸ್ಟಡಿಯಲ್ಲಿದ್ದಾರೆ.
ಮುಂದುವರೆದ ಭಾಗವಾಗಿ ಇಂದು ನಟಿ ಸಂಜನಾ ಗಿಲ್ರಾನಿ ಮನೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಬಹುತೇಕ ಸಂಜನಾಳನ್ನು ವಿವಾರಣೆಗೆ ಕರೆದೊಯ್ಯುವ ಸಾಧ್ಯತೆ ಇದೆ ಎನ್ನಲಾಗಿದೆ.