ಪ್ರಮುಖ ಸುದ್ದಿ
ಖ್ಯಾತ ನಿರೂಪಕ ಸಂಜೀವ ಕುಲಕರ್ಣಿ ಇನ್ನಿಲ್ಲ.!
ಖ್ಯಾತ ನಿರೂಪಕ ಸಂಜೀವ ಕುಲಕರ್ಣಿ ಇನ್ನಿಲ್ಲ.!
ಬೆಂಗಳೂರಃ ಖ್ಯಾತ ನಿರೂಪಕ, ಕಿರುತೆರೆ ನಟ, ರಂಗಕರ್ಮಿ ಸಂಜೀವ ಕುಲಕರ್ಣಿ (49) ಅವರು ಶನಿವಾರ ಅನಾರೋಗ್ಯದಿಂದಾಗಿ ನಿಧನರಾದರು.
ಕುಲಕರ್ಣಿ ಅವರು ಈಟಿವಿ ಕನ್ನಡದಲ್ಲಿ ಬರುತ್ತಿದ್ದ ಡಿಮ್ಯಾಂಡಪ್ಪೋ ಡಿಮ್ಯಾಂಡ್ ಕಾರ್ಯಕ್ರಮ ನಡೆಸುವ ಮೂಲಕ ಖ್ಯಾತಿ ಹೊಂದಿದ್ದರು.
ಹಲವಾರು ಕಾರ್ಯಕ್ರಮಗಳ ನಿರೂಪಣೆಯನ್ನ ಸಮರ್ಪಕವಾಗಿ ನಿಭಾಯಿಸುವ ಮೂಲಕ ಮನೆ ಮಾತಾಗಿದ್ದರು. ಕಳೆದ 15 ವರ್ಷದಿಂದ ಅವರು ಕಾರ್ಡಿಯೋಮಪತಿ ಎಂದ ಖಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.
ನಗರದ ನಾರಾಯಣ ಹೃದಯಾಲಯದ ತೀವ್ರನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾದರು.
ರವಿವಾರ ಬೆಳಗ್ಗೆ ಅವರ ಅಂತ್ಯಕ್ರಿಯೆ ಯನ್ನು ಚಾಮರಾಜ ಪೇಟೆಯ ಟಿಆರ್ ಮಿಲ್ ಬಳಿಯ ಸ್ಮಶಾನದಲ್ಲಿ ಇಂದು ಬೆಳಗ್ಗೆ ಅಂತ್ಯಕ್ರಿಯೆ ಜರುಗಿತು ಎಂದು ಮೂಲಗಳು ತಿಳಿಸಿವೆ.