ಅತಂತ್ರ ಬದುಕು ಸಾಗಿಸುತ್ತಿರುವ ಅತಿಥಿ ಉಪನ್ಯಾಸಕರು
-ರಾಘವೇಂದ್ರ ಹಾರಣಗೇರಾ
ಕರ್ನಾಟಕದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಳೇದ 15, 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಗಳು ಯಾವುದೇ ಸೇವಾ ಭದ್ರತೆ ಇಲ್ಲದೆ ಆತಂತ್ರದ ಬದುಕನ್ನು ಸಾಗಿಸುತ್ತಿದ್ದಾರೆ.
ಕೊರೊನಾ ಪರಿಣಾಮದಿಂದ ಕಳೆದ 3,4 ತಿಂಗಳನಿಂದ ಯಾವುದೇ ವೇತನ ಇಲ್ಲದೆ ಇರುವುದರಿಂದ ಉಪನ್ಯಾಸಕ ವೃತ್ತಿಯನ್ನೆ ನಂಬಿಕೊಂಡಿದ್ದ ಅವರು ಯಾವುದೇ ಕೆಲಸವಿಲ್ಲದೆ ಬದುಕಿನ ಮೂಲಭೂತ ಸೌಕರ್ಯಗಳನ್ನು ಕೊಂಡುಕೊಳ್ಳುಲು ಸಾದ್ಯವಾಗದ ಸ್ಥಿತಿಯಲ್ಲಿದ್ದಾರೆ.
ಕುಟುಂಬ ನಿರ್ವಹಣೆ ಸಾದ್ಯವಾಗದೆ ಅನೇಕ ತಲ್ಲಣಗಳನ್ನು, ಗಂಭೀರ ಸಮಸ್ಯೆಗಳನ್ನು ಎದುರಿಸುತ್ತ ಮಾನಸಿಕ ಖಿನ್ನತೆಗೆ ಒಳಗಾಗಿ, ಜಿಗುಪ್ಸೆಗೊಂಡು ಆತ್ಮಹತ್ಯೆ ಹಾದಿ ತುಳಿದಿರುವುದು ವಿಷಾದನೀಯ ಸಂಗತಿ. ಕಳೆದ ಎರಡು ದಶಕಗಳಿಂದ ಸರಕಾರಿ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರಿಂದ ಸೇವೆ ಮಾಡಿಸಿಕೊಂಡ ಸರ್ಕಾರಗಳು ಇಲ್ಲಿಯವರೆಗೆ ಅತಿಥಿ ಉಪನ್ಯಾಸಕರ ವೃತ್ತಿ ಜೀವನದ ಬಗ್ಗೆ ನಿರ್ಲಕ್ಷ್ಯ ತೋರುತ್ತಾ ಬಂದಿವೆ.
ನೂರಾರು ಬಾರಿ ಹೊರಾಟಗಳ ಮೂಲಕ ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಪರಿಹರಿಸಿ ಸೇವಾ ಭದ್ರತೆ ನೀಡಲು ಸರ್ಕಾರಕ್ಕೆ ಮನವಿ ಸಲ್ಲಿಸಿಸದರೂ ಸಹ 2, 3 ಸಾವಿರ ರೂಪಾಯಿ ಗೌರವ ಧನ ಹೆಚ್ಚಳ ಮಾಡುವುದನ್ನು ಬಿಟ್ಟರೆ ಯಾವುದೇ ರೀತಿಯ ಪ್ರಯೋಜನವಾಗಿಲ್ಲ.
ಕೂಲಿಕಾರರಿಗೆ, ಕೃಷಿಕರಿಗೆ, ವಿವಿಧ ಕಾರ್ಮಿಕರಿಕರಿಗೆ, ಆಟೋ ಚಾಲಕರಿಗೆ, ವಿವಿಧ ಕಸುಬುದಾರರಿಗೆ ಕೊರೊನಾ ಸಂದರ್ಭದಲ್ಲಿ ಹಲವು ಸೌಲಭ್ಯಗಳನ್ನು ಮತ್ತು ಹಣವನ್ನು ಒದಗಿಸಿದ ಸರ್ಕಾರ ಅವರೆಲ್ಲರ ಮಕ್ಕಳಿಗೆ ಶಿಕ್ಷಣ ನೀಡಿ ವಿವಿಧ ಪದವಿ ಪಡೆಯಲು ಕಾರಣರಾದ ಅತಿಥಿ ಉಪನ್ಯಾಸಕರುಗಳಿಗೆ ಯಾವುದೇ ಸೌಲಭ್ಯ ನೀಡದೆ ಇರುವುದು ಸರ್ಕಾರದ ಶಿಕ್ಷಣದ ಮತ್ತು ಅಧ್ಯಾಪಕರ ಕುರಿತು ಎಷ್ಟೋಂದು ನಿರ್ಲಕ್ಷ್ಯ ವಹಿಸುತ್ತಿದೆ ಎಂಬುದು ಚಿಂತನಾರ್ಹವಾಗಿದೆ.
ಕೊರೊನಾ ತಂದಿರುವ ಅನೇಕ ಬಿಕ್ಕಟ್ಟಿನ ಸಂದರ್ಭದಲ್ಲಿ ನೂರಾರು ಉಪನ್ಯಾಸಕರು ಕೂಲಿ ಮಾಡುತ್ತಿದ್ದಾರೆ, ತರಕಾರಿ, ಹಣ್ಣು- ಹಂಪಲುಗಳು ಮಾರುತ್ತಿದ್ದಾರೆ, ಹೊಟೆಲುಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲಸ ಇಲ್ಲದ ಅನೇಕ ಉಪನ್ಯಾಸಕರು ಕುಟುಂಬದವರಿಂದ ಬೈಸಿಕೊಳ್ಳುತ್ತಾ ಮಾನಸಿಕ ಒತ್ತಡಗಳಿಗೆ ಒಳಗಾಗಿದ್ದಾರೆ. ದಿನಗೂಲಿ ಕಾರ್ಮಿಕರಿಗೆ, ವಿವಿಧ ಇಲಾಖೆಯಲ್ಲಿ ದುಡಿಯುತ್ತಿರುವ ಗುತ್ತಿಗೆ ಕೆಲಸಗಾರರರಿಗೆ ಸರ್ಕಾರಿ ಸೇವೆ ಸೇವೆಗೆ ಸೇರಿಸಿಕೊಂಡು ಭದ್ರತೆ ನೀಡುವ ಸರ್ಕಾರ ಅತಿಥಿ ಉಪನ್ಯಾಸಕರುಗಳಿಗೆ ಯಾವುದೇ ಭದ್ರತೆ ನೀಡದೆ ಪ್ರತಿವರ್ಷ ಆತಂಕದಲ್ಲಿ ಆತಂತ್ರ ಜೀವನಕ್ಕೆ ತಳ್ಳುತ್ತಿರುವುದು ಯಾವ ನ್ಯಾಯ? ಅತಿಥಿ ಉಪನ್ಯಾಸಕರ ಬದುಕು ಬವಣೆಗಳ ವಿಷಯದಲ್ಲಿ ಸರ್ಕಾರಕ್ಕೆ ಮಾನವೀಯ ಸಂವೇದನೆ ಬೇಕಾಗಿದೆ.
ದಯವಿಟ್ಟು ಸರ್ಕಾರ ಗಂಭೀರ ಸಮಸ್ಯೆಗಳಲ್ಲಿ, ತಲ್ಲಣಗಳ ನಡುವೆ ಆತಂತ್ರದ ಬದುಕು ಸಾಗಿಸುತ್ತಿರುವ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಬೇಕು, ಕೊರೊನಾ ರಜೆಯನ್ನು ಸೇವಾ ಅವಧಿ ಎಂದು ಪರಿಗಣಿಸಿ ವೇತನ ನೀಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಸೇವಾ ಭದ್ರತೆ ನೀಡಬೇಕು. ಶಿಕ್ಷಣ ತಜ್ಞರು, ಚಿಂತಕರು, ವಿಧಾನ ಸಭಾ ಮತ್ತು ವಿಧಾನ ಪರಿಷತ್ತಿನ ಎಲ್ಲಾ ಸದಸ್ಯರು, ಹಿರಿಯ ಸಾಹಿತಿಗಳು, ವಿದ್ವಾಂಸರು ಸರ್ಕಾರದೊಂದಿಗೆ ಚರ್ಚಿಸಿ, ಪರಿಣಾಮಕಾರಿಯಾಗಿ ಚಿಂತನ ಮಂಥನ ನಡೆಸಿ ಮಾನವೀಯಪರ, ಜೀವಪರ ಕಾಳಜಿಗಳಿಂದ ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಪರಿಹರಿಸಲು ಶ್ರಮಿಸಿಬೇಕೆಂದು ಕೊರುತ್ತೇವೆ.
–ರಾಘವೇಂದ್ರ ಹಾರಣಗೇರಾ ಸಮಾಜಶಾಸ್ತ್ರ ಅತಿಥಿ ಉಪನ್ಯಾಸಕರು ಶಹಾಪುರ.