ಪ್ರಮುಖ ಸುದ್ದಿಸಾಹಿತ್ಯ

ನರಹರಿ ಸೋನಾರ ಶ್ರೇಷ್ಠ ಸಂತ – ಸೂಗುರೇಶ್ವರ ಶ್ರೀ

ಪುಸ್ತಕ ಖರೀದಿಗೆ ಮಾಡಿದ ಖರ್ಚು ವ್ಯರ್ಥವಾಗಲ್ಲ

ನರಹರಿ ಸೋನಾರ ಶ್ರೇಷ್ಠ ಸಂತ – ಸೂಗುರೇಶ್ವರ ಶ್ರೀ

ಪುಸ್ತಕ ಖರೀದಿಗೆ ಮಾಡಿದ ಖರ್ಚು ವ್ಯರ್ಥವಾಗಲ್ಲ

yadgiri, ಶಹಾಪುರಃ ಜೀವನಕ್ಕೆ ಅರ್ಥ ತುಂಬುವ ಶ್ರೇಷ್ಠ ಗ್ರಂಥಗಳನ್ನು ಅಧ್ಯಯನ ಮಾಡುವದರಿಂದ ಹಾಗೂ ಮನೆಯಲ್ಲಿ ಇಡುವದರಿಂದ ನಕರಾತ್ಮಕ ಶಕ್ತಿಗಳನ್ನು ದೂರೀಕರಿಸಲು ಸಾಧ್ಯ. ಪುಸ್ತಕಗಳಿಗಾಗಿ ಖರ್ಚು ಮಾಡುವ ಹಣ ಎಂದಿಗೂ ವ್ಯರ್ಥವಾಗಲ್ಲ ಎಂದು ಕುಂಬಾರಗೇರಿ ಹಿರೇಮಠದ ಸೂಗೂರೇಶ್ವರ ಶಿವಾಚಾರ್ಯರು ಅಭಿಪ್ರಾಯಪಟ್ಟರು.
ನಗರದ ಏಕದಂಡಗಿ ಮಠದ ಆವರಣದಲ್ಲಿ ನಡೆದ ಸಂತ ನರಹರಿ ಸೋನಾರ ಗ್ರಂಥದ ಮೂರನೇಯ ಆವೃತ್ತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಅಪ್ಪಟ ಶಿವಭಕ್ತನಾದ ಸ್ವರ್ಣಶಿಲ್ಪಿ ನರಹರಿ ಸೋನಾರ ವಿಠಲನ ವಡ್ಯಾಣ ನಿರ್ಮಿಸಿ ಅರ್ಪಿಸುವ ಸಂದರ್ಭದಲ್ಲಿ ನಡೆಯುವ ಚಮತ್ಕಾರದಿಂದ ಹರಿ ಹರರ ಏಕತೆಯನ್ನು ಕಂಡುಕೊಳ್ಳುತ್ತಾನೆ. ಹರಿ ಮತ್ತು ಹರ ಇಬ್ಬರೂ ತಾತ್ವಿಕವಾಗಿ ಒಂದೇ ಆದರೂ ಎರಡು ಪಂಥಗಳ ನಡುವೆ ಯಾವುತ್ತು ಶ್ರೇಷ್ಠತೆ, ಕನಿಷ್ಠತೆಗಳ ವಿವಾದ ಇದ್ದದ್ದೆ, ಈ ಭಿನ್ನಪ್ರಾಯ ಸರಿಯಿಲ್ಲ. ಅವರಿಬ್ಬರೂ ಒಂದೇ ಎಂಬ ತತ್ವ ನಿರೂಪಣೆ ಈ ಕೃತಿಯ ಸಾರವಾಗಿದೆ.

ಶ್ರೀಮತಿ ಭಾರತಾ ಮಾತಾ ಇಂತದೊಂದು ಸರ್ವಕಾಲಿಕ ಶ್ರೇಷ್ಠ ಗ್ರಂಥವನ್ನು ಐದು ದಶಕಗಳ ಹಿಂದೇಯೇ ಬರೆದು ಪ್ರಕಟಿಸಿದ್ದರು. ಈಗ ಮೂರನೇಯ ಆವೃತ್ತಿಯನ್ನು ಬಿಡುಗಡೆ ಮಾಡುವ ಸೌಭಾಗ್ಯ ನನ್ನದಾಗಿದೆ.
ಈ ಕೃತಿಯನ್ನು ತಮ್ಮ ಶ್ರೀಮಠದ ಪ್ರಕಾಶನ ಸಂಸ್ಥೆಯಿಂದ ಪ್ರಕಟಿಸಿದ ಅಳ್ಳಳ್ಳಿ ಮಠದ ನಾಗಪ್ಪಯ್ಯ ಸ್ವಾಮಿಗಳು ಹಾಗೂ ಗ್ರಂಥ ಪ್ರಕಟಣೆಯ ವೆಚ್ಚವನ್ನು ಬರೆಸಿದ ಯರಡೋಣಿಯ ಶ್ರೀನಿವಾಸಮೂರ್ತಿ ಹೊಸಮನಿ ಪರಿವಾರ ಪ್ರಶಂಸನೀಯ ಕಾರ್ಯ ಮಾಡಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಏಕದಂಡಿಗಿ ಮಠದ ಅಜೇಂದ್ರ ಸ್ವಾಮೀಜಿ, ಒಂದು ಗ್ರಂಥದ ರಚನೆ ಹಾಗೂ ಪ್ರಕಟಣೆಯ ಹಿಂದೆ ಎಷ್ಟೊಂದು ಪರಿಶ್ರಮವಿರುತ್ತದೆ ಎಂಬುದು ಅದನ್ನು ಅನುಭವಿಸಿದವರಿಗೆ ಗೊತ್ತು. ಲೇಖಕಿ ಭಾರತಾ ಮಾತಾ ತುಂಬಾ ಸಂಶೋಧನೆ ಮಾಡಿ ಈ ಕೃತಿ ರಚನೆ ಮಾಡಿದ್ದಾರೆ. ಈಗ ಅವರಿಲ್ಲದ ಹೊತ್ತಿನಲ್ಲಿ ಮೂರನೇಯ ಆವೃತ್ತಿ ಬಿಡುಗಡೆಗೊಂಡಿದೆ. ಈ ಪುಸ್ತಕವನ್ನು ಕೊಂಡು ಓದುವ ಮೂಲಕ ಅವರನ್ನು ಸ್ಮರಿಸೋಣ ಎಂದರು.

ಸಾನ್ನಿಧ್ಯವಹಿಸಿದ್ದ ಏಕದಂಡಗಿ ಮಠದ ಕಾಳಹಸ್ತೇಂದ್ರ ಸ್ವಾಮೀಜಿ ಆಶೀರ್ವಚನ ನೀಡುತ್ತಾ, ನನ್ನ ಬಾಲ್ಯದಲ್ಲಿ ಈ ಕೃತಿಯ ಮೊದಲ ಆವೃತ್ತಿ ಪ್ರಕಟಗೊಂಡಿತ್ತು. ಈಗ ಮೂರನೇಯ ಆವೃತ್ತಿಯನ್ನು ನೋಡುತ್ತಿರುವದು ನನ್ನ ಸೌಭಾಗ್ಯ. ಸಂತ ನರಹರಿ ಸೋನಾರರ ವೃತ್ತಿಪರತ ಹಾಗೂ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಕಲ್ಬುರ್ಗಿಯ ಹಿರಿಯ ಸಾಹಿತಿ ನರಸಿಂಹರಾವ್ ಹೇಮನೂರ ಮಾತನಾಡಿದರು. ಮೊದಲಿಗೆ ಗ್ರಂಥ ದಾಸೋಹಿಗಳಾದ ಶ್ರೀನಿವಾಸಮೂರ್ತಿ ಹೊಸಮನಿ ಪ್ರಾಸ್ತವಿಕವಾಗಿ ಮಾತನಾಡಿದರು. ನರಹರಿ ಸೋನಾರ ಕೃತಿಯ ಪರಿಚಯವನ್ನು ಸಾಹಿತಿ ದತ್ತಾತ್ರೇಯ ವಿಶ್ವಕರ್ಮ ಮಾಡಿದರು. ಶಹಾಪುರ ವಿಶ್ವಕರ್ಮ ಸಮಾಜದ ಅಧ್ಯಕ್ಷ ಶಂಕರ ಗುತ್ತರಗಿ ಅಧ್ಯಕ್ಷತೆವಹಿಸಿದ್ದರು. ಅಳ್ಳಳ್ಳಿ ನಾಗಪಯ್ಯ ಸ್ವಾಮೀಗಳು, ಅಯ್ಯಪ್ಪಯ್ಯ ಸ್ವಾಮೀಗಳು ಉಪಸ್ಥಿತರಿದ್ದರು. ಕು.ವೈಷ್ಣವಿ ಏಕದಂಡಗಿಮಠ ಸ್ವಾಗತಿಸಿದರು. ವಿರುಪಾಕ್ಷ ಸ್ವಾಮೀಜಿ ನಿರೂಪಿಸಿದರು. ಸುರೇಶ ಹುಣಸ್ಯಾಳ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button