ನಿನ್ನ ನೆನಪಿನ ಸೆಲೆ..! ಪತ್ರಕರ್ತ ಚಂದಪ್ಪ ದೋರನಹಳ್ಳಿ ರಚಿಸಿದ ಕವಿತೆ
ನಿನ್ನ ನೆನಪಿನ ಸೆಲೆ..!
ನನ್ನ ಅಂತರಂಗದಲ್ಲಿ ಅಡಗಿರುವೇ ಮಿಲಿಯನ್ ನೆನಪುಗಳು.
ನೀ ಜನಿಸಿ ಬಂದ ಗರ್ಭದಲ್ಲಿ ನಾ ಹುಟ್ಟಿದೆ ನೀ ತೊಟ್ಟಿಲು ತೂಗಿ ಮುದ್ದು ಮಾಡಿದ ಆ ಮಧುರ ಕ್ಷಣಗಳು ನೆನಪಿನ ಬಿಕ್ಕಳಿಕೆ ಎನ್ನ ಹೃದಯದ ಬಡಿತ ಹೆಚ್ಚಿಸುತ್ತಿದೆ..!!
ಅಂಬೆಗಾಲುರಿ ಮಣ್ಣು ತಿನ್ನುವಾಗ ಕಣ್ಣಿನಲ್ಲಿ ಭೀತಿಯ ಖಡ್ಗವು ನೀ ತೋರಿಸಿ ಭಯ ಸೃಷ್ಟಿಸಿದಿ..! ಮಗ್ಗುಲಲ್ಲಿ ಮುದ್ದು ಮಾಡಿ ಅಪ್ಪಿ ಆಲಂಗಿಸಿ ಮುಗಳು ನಗೆ ಬಿರಲು ಕಾಡುಗಲ್ಲಿನ ಗೊಂಬೆಗಳು ನೀ ಕೊಟ್ಟಿ.!!
ಜಗದ ಅರಿವು ಇಲ್ಲದಾಗ ವಿರಳವಾದ ಅಂತಃಕರಣದ ಮಮತೆ ಮಮಕಾರ ಕರಳು ಹುಬ್ಬಿಸಿ ದೇಹದ ಬಿಡಿ ಭಾಗಗಳು ಬಲಗೊಳಿಸಿ ಜೀವನವಿಡೀ ಬೆಣ್ಣಿಯಂತೆ ಜ್ವಾಕಿಯ ಕರುಣೆ ನೀ ಮಾಡಿದಿ..! ಸ್ಫೂರ್ತಿ ತುಂಬಿದ ನಿನ್ನ ಜೇನಿನ ಮುತ್ತುಗಳು ಪಡೆಯಲು ನೆನಪಿನ ಅಂಗಳ ಮತ್ತೆ ಮತ್ತೆ ಹಂಬಲಿಸುತ್ತಿದೆ…!!
ಕಗ್ಗಗಲ್ಲಿನಂಥ ಮೆದುಳಿಗೆ ಚಾಟಿ ಏಟಿಯ ಹಳಿಯಿಂದ ಅಕ್ಷರದ ಬೀಜವು ನೆಟ್ಟಿ..! ಮೊಳಕೆಯೊಡೆಯಲು ನಿತ್ಯ ಹುಳಿಚಿ ಹಿಡಿದು ಕೆತ್ತಿ ಕೆತ್ತಿ ಅಂಧ ಮೆದುಳಿಗೆ ಅಕ್ಷರ ದೀಕ್ಷೆವೂ ಕೊಟ್ಟು ಮೆದುಳು ಶೃಂಗಾರಗೊಳಿಸಿದಿ..! ಆ ಮಧುರ ಕ್ಷಣ ನೆನಪಿಸಿ ಅಕ್ಷರ ತುಂಬಿದ ಫಸಲಿನಂಥ ಅಲಂಕಾರದ ಮೆದುಳು ನಿನ್ನನ್ನು ಕಾಣದೆ ಬಿರುಕುಗೊಳುತ್ತಿದೆ..!!
ಮನಸ್ಸೆಂಬ ಬರಡು ಭೂಮಿಯಲ್ಲಿ ಅಂತರ್ಜಲ ಪಾತಾಳಕಿಳಿದು ಮನವು ನೋವುಗೊಂಡು ಒಂಟಿಯಾಗಿ ಕಳೆದ ದಿನದಲ್ಲಿ ನೀ ಬೇಸರಗೊಂಡು ಎನ್ನ ಮನಕ್ಕೆ ಸಂತೈಸಿ ಬೆಚ್ಚನೆಯ ಆಲಿಂಗನಗಳ ತುತ್ತು ಕೊಟ್ಟು ಮುದ್ದಿಸಿದ ಕ್ಷಣಗಳು ನೆನಪಿಸಿ ನೀನಿಲ್ಲದೆ ಮತ್ತೆ ಮತ್ತೆ ನರಳುವಂತ್ತಾಗಿದೆ..!!
ಅರಳಿದ ಹೂ ಮೇಲಿನ ಇಬ್ಬನಿ ಹನಿಯಂತೆ ನೀ ಜೊತೆಯಲ್ಲಿದ್ದಾಗ
ರಾತ್ರಿ ಸುರಿಯುವ ತಂಗಾಳಿಯಂತೆ ದಿಗಿಲಾಗಿ ನಾ ಅತ್ತಾಗ ಕಣ್ಣೀರಿನ ಹನಿ ನೀ ಕುಡಿದು ದುಃಖವು ಮರೆಸಿ ನಿದ್ರೆಗೆ ಜಾರಿಸಿದಿ..! ನಾನೇ
ಹಲವು ಬಾರಿ ಬೆಂಕಿಯ ಕೊಳ್ಳಿ ಇಟ್ಟರು ಶಾಖದಲ್ಲಿ ನೀ ಬೆಂದು ಹಸುವಿನ ತುಪ್ಪು ಉಣಬಡಿಸಿದಿ..! ಆ ಮಧುರ ಕ್ಷಣ ನೆನೆದು ಮನವು ಕೆಂಡದಲ್ಲಿ ಹುರುಳಾಡುಂತ್ತಾಗುತ್ತಿದೆ.
ನಿನ್ನ ಪ್ರೀತಿಗೆ ಮನಸೋತು ನಾ ಕಂಡೆ ಲಕ್ಷ ಲಕ್ಷ ಕನಸು ಅದನ್ನು ಉಳಿಸಿಕೊಳ್ಳಲು ನಾ ಅನುಭವಿಸಿದೆ ಸಾವಿರಯಾತನೆ..!
ಕೊನೆಗೂ ನನ್ನ ಸಾವಿರ ಪ್ರಶ್ನೆಗಳಿಗೆ ಉತ್ತರ ಕೊಡದೆ ಮರೆಯಾಗಿ ನನ್ನ ಕೈಬಿಟ್ಟಿ..! ನಿನ್ನಿಲ್ಲದೇ ಜೊತೆಯಲ್ಲಿ ನಾ ಹೇಗೆ ಬದುಕಿ ಬಾಳಲಿ ನೀಚರು ತುಂಬಿದ ಜಗದಲ್ಲಿ…!!
-ಚಂದಪ್ಪ.ದೋರನಹಳ್ಳಿ.
ಪತ್ರಕರ್ತರು ಬೆಂಗಳೂರ.