ವಿನಯವಾಣಿಯಲ್ಲಿ ನೋಡಿ ವಾರ ಭವಿಷ್ಯ
ವಾರ ಭವಿಷ್ಯ 14-07-2019
ದಯಾಮಯನಾದ ಭಗವಂತನನ್ನು ನೆನೆದು ಈ ವಾರದ ದ್ವಾದಶ ರಾಶಿಯ ಫಲಾಫಲಗಳನ್ನು ತಿಳಿಯೋಣ.
ಜ್ಯೋತಿಷ್ಯರು ಗಿರಿದರ ಶರ್ಮ (ಶ್ರೀರಂಗಪಟ್ಟಣ)
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು. ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಸಮಸ್ಯೆಗಳ ಬಗ್ಗೆ ಜ್ಯೋತಿಷ್ಯ ಶಾಸ್ತ್ರದ ಪರಿಹಾರ ಮತ್ತು ಮಾರ್ಗದರ್ಶನ ಪಡೆಯಲು ಇಂದೇ ಕರೆ ಮಾಡಿ.
9945098262
ಮೇಷ ರಾಶಿ
ಹೊಸ ಆವಿಷ್ಕಾರಗಳನ್ನು ಮಾಡುವ ಮನಸ್ಥಿತಿ ನಿಮ್ಮಲ್ಲಿದೆ. ನಿಮ್ಮ ಕೆಲಸಗಳಲ್ಲಿ ಆಧುನಿಕತೆ, ತಾಂತ್ರಿಕ ಗುಣಮಟ್ಟತೆಯನ್ನು ಅಳವಡಿಸಿಕೊಂಡು ಸಾಗುವಿರಿ. ಆರ್ಥಿಕವಾಗಿ ಮಧ್ಯಮ ಸ್ಥಿತಿಯ ವಾತಾವರಣ ಕಂಡು ಬರಲಿದೆ. ಕುಟುಂಬದಲ್ಲಿ ವಿಶ್ವಾಸದ ಕೊರತೆ ಮೂಡಬಹುದು. ಭೂಮಿಯ ವಿಚಾರಗಳಲ್ಲಿ ಹಿನ್ನಡೆಯಾಗುವ ಸಾಧ್ಯತೆ ಕಂಡುಬರುತ್ತದೆ.
ಅದೃಷ್ಟ ಸಂಖ್ಯೆ 9
ಗಿರಿಧರ ಶರ್ಮ 9945098262
ವೃಷಭ ರಾಶಿ
ಕೌಟುಂಬಿಕ ಭಿನ್ನಾಭಿಪ್ರಾಯಗಳು ಸರಿಹೋಗುವ ಸಮಯವಿದು. ಹಳೆಯ ಸಾಲಗಳನ್ನು ಮರುಪಾವತಿ ಮಾಡುವ ಸ್ಥಿತಿಯಿದೆ. ಹೊಸ ಪರಿಚಯಸ್ಥರು ಹಾಗೂ ಗಣ್ಯ ವ್ಯಕ್ತಿಗಳ ಜೊತೆ ಒಡನಾಟ ಹೆಚ್ಚಾಗಬಹುದು. ಮನರಂಜನೆಗೆ ಅಧಿಕ ಸಮಯ ವಿನಿಯೋಗಿಸುವಿರಿ. ಪತ್ನಿಯ ಆರೋಗ್ಯದಲ್ಲಿ ಏರುಪೇರು ಆಗುವ ಸಾಧ್ಯತೆ ಕಂಡುಬರುತ್ತದೆ.
ಅದೃಷ್ಟ ಸಂಖ್ಯೆ 6
ಗಿರಿಧರ ಶರ್ಮ 9945098262
ಮಿಥುನ ರಾಶಿ
ಸಣ್ಣ ಯೋಜನೆಗಳು ದೊಡ್ಡ ಮಟ್ಟದ ಲಾಭ ತಂದುಕೊಡಲಿದೆ. ಸಂಗಾತಿಯಿಂದ ಆರ್ಥಿಕ ಪರಿಸ್ಥಿತಿ ಸುಧಾರಣೆ ಗೊಳ್ಳಲಿದೆ. ಸಂಬಂಧಿಕರು ಈ ವಾರ ನಿಮ್ಮ ಮನೆಗೆ ಹೆಚ್ಚಾಗಿ ಬರಬಹುದು, ಇದರಿಂದ ಹಣಕಾಸಿನ ಸಮಸ್ಯೆ ಹೆಚ್ಚಾಗಲಿದೆ. ಬಹುನಿರೀಕ್ಷಿತ ಯೋಜನೆಯು ನಿಮ್ಮ ಕೈ ಸೇರುವ ಸಾಧ್ಯತೆ ಕಂಡುಬರುತ್ತದೆ.
ಅದೃಷ್ಟ ಸಂಖ್ಯೆ 4
ಗಿರಿಧರ ಶರ್ಮ 9945098262
ಕರ್ಕಾಟಕ ರಾಶಿ
ಸ್ವಾವಲಂಬನೆಯ ಬದುಕನ್ನು ಹುಡುಕುವ ನಿಮ್ಮ ಕ್ರಿಯೆಗೆ ಹಲವರು ಬೆಂಬಲ ನೀಡುವರು. ಪಾಕಶಾಸ್ತ್ರದಲ್ಲಿ ನಿಮ್ಮ ಕಲೆಯು ಅದ್ವಿತೀಯವಾಗಿ ಹೊರಹೊಮ್ಮುತ್ತದೆ, ಉತ್ತಮ ರೀತಿಯ ಭೂಷಣಗಳಿಂದ ಸಂತೋಷ ಭಾವನೆ ಆವರಿಸಲಿದೆ. ಆರ್ಥಿಕ ವಿಷಯವಾಗಿ ನಿಮ್ಮನ್ನು ಪುಸಲಾಯಿಸಿ ಮೋಸ ಮಾಡಬಹುದು ಎಚ್ಚರವಾಗಿರಿ. ಜಲ ಸಂಬಂಧಿತ ಕ್ರೀಡೆಗಳಲ್ಲಿ ಉತ್ತಮ ಅವಕಾಶಗಳು ಲಭ್ಯವಾಗುತ್ತದೆ. ಗೋಷ್ಠಿಗಳಲ್ಲಿ ನಿಮ್ಮ ಮಾತುಗಳು ಅತ್ಯಂತ ಪ್ರಕರವಾಗಿ ಹೊರಹೊಮ್ಮುವ ಸಾಧ್ಯತೆ ಇದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ.
ಅದೃಷ್ಟ ಸಂಖ್ಯೆ 2
ಗಿರಿಧರ ಶರ್ಮ 9945098262
ಸಿಂಹ ರಾಶಿ
ಉದ್ಯೋಗದಲ್ಲಿ ಹೆಚ್ಚಿನ ಸ್ಥಾನ ನಿರೀಕ್ಷಿಸಬಹುದು. ವೃತ್ತಿ ಬದುಕಿನಲ್ಲಿ ಅತ್ಯುತ್ತಮವಾದ ದಿನಗಳನ್ನು ಕಳೆಯುವಿರಿ. ನಿಮ್ಮ ಆಸಕ್ತಿಕರ ವಿಷಯಗಳಲ್ಲಿ ಹೆಚ್ಚು ಪಾಲ್ಗೊಳ್ಳುವ ಸಾಧ್ಯತೆ ಇದೆ. ಆರ್ಥಿಕವಾಗಿ ನಿಮ್ಮ ಸ್ಥಿತಿ ಉತ್ತಮಗೊಳ್ಳುತ್ತದೆ. ಬಂದಂತಹ ಹಣಕಾಸನ್ನು ಉಳಿತಾಯ ಮಾಡದೆ ಕಷ್ಟದಲ್ಲಿ ಸಿಲುಕುವ ಸಾಧ್ಯತೆ ಇದೆ. ಕುಟುಂಬಸ್ಥರೊಂದಿಗೆ ಹೆಚ್ಚಿನ ಕಾಲ ಕಳೆಯುವಿರಿ. ಕೆಲವು ಯೋಜನೆಗಳ ನಿಮಿತ್ತ ಪ್ರವಾಸದ ಉತ್ತಮ ಅನುಭವವನ್ನು ಗಳಿಸುತ್ತೀರಿ.
ಅದೃಷ್ಟ ಸಂಖ್ಯೆ 1
ಗಿರಿಧರ ಶರ್ಮ 9945098262
ಕನ್ಯಾ ರಾಶಿ
ಉತ್ತಮ ಆಹಾರ ಸೇವನೆಯಿಂದ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ. ಹಲವು ಜನಗಳ ಜೊತೆಗೆ ನಿರಂತರ ಸಭೆಗಳಲ್ಲಿ ಪಾಲ್ಗೊಳ್ಳುವುದರಿಂದ ಆಯಾಸ ಮತ್ತು ಒತ್ತಡ ಹೆಚ್ಚಾಗಬಹುದು. ಸೌಂದರ್ಯ ಆರಾಧಕರಾಗಿ ಹೊರಹೊಮ್ಮುವಿರಿ. ಪ್ರಕೃತಿಯ ಬಗ್ಗೆ ವಿಶೇಷ ಕಾಳಜಿ ವ್ಯಕ್ತಪಡಿಸುತ್ತೀರಿ. ನಯನಮನೋಹರವಾದಂತಹ ದೃಶ್ಯಗಳನ್ನು ಹತ್ತಿರದಿಂದ ಆಸ್ವಾದಿಸುವ ಸಾಧ್ಯತೆ ಇದೆ. ತಾಂತ್ರಿಕ ವರ್ಗದವರಿಗೆ ಅವಕಾಶಗಳು ಹೆಚ್ಚಾಗಲಿದೆ. ಲಾಭಾಂಶದ ಲೆಕ್ಕಾಚಾರದಿಂದ ಹೊಸ ಯೋಜನೆಯನ್ನು ಪ್ರಾರಂಭ ಮಾಡುವಿರಿ.
ಅದೃಷ್ಟ ಸಂಖ್ಯೆ 4
ಗಿರಿಧರ ಶರ್ಮ 9945098262
ತುಲಾ ರಾಶಿ
ಪ್ರತಿಭಾನ್ವಿತರಿಗೆ ಅವಕಾಶಗಳು ಹೆಚ್ಚಾಗುತ್ತದೆ. ಉದ್ಯೋಗದಲ್ಲಿ ಉತ್ತಮ ಸ್ಥಾನ. ನಿರುದ್ಯೋಗಿ ಜನಗಳಿಗೆ ಅವಕಾಶ ಹೆಚ್ಚಾಗಲಿದೆ. ಕುಟುಂಬದಲ್ಲಿನ ಕಲಹದಿಂದ ಮನಃಶಾಂತಿ ಕದಡುತ್ತದೆ. ನಿಮ್ಮಲ್ಲಿನ ಆಲಸ್ಯದಿಂದ ಕೆಲಸಗಳು ವಿಳಂಬವಾಗುವ ಸಾಧ್ಯತೆ ಇದೆ. ಕೆಲವರ ಒತ್ತಾಯದ ಮೇರೆಗೆ ನಿಮ್ಮ ಇಷ್ಟ ಇಲ್ಲದ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಆರ್ಥಿಕವಾಗಿ ಸಾಧಾರಣ ಸ್ಥಿತಿ ಇರಲಿದೆ.
ಅದೃಷ್ಟ ಸಂಖ್ಯೆ 6
ಗಿರಿಧರ ಶರ್ಮ 9945098262
ವೃಚಿಕ ರಾಶಿ
ಧೈರ್ಯದಿಂದ ಯೋಜನೆಗಳಲ್ಲಿ ಪಾಲ್ಗೊಳ್ಳುವಿರಿ. ಬುದ್ಧಿಗೆ ಬೆಂಬಲ ನೀಡಿ. ನಿಮ್ಮ ದೈಹಿಕ ಬಲವನ್ನು ಆದಷ್ಟು ತೋರ್ಪಡಿಸಿ ಕೊಳ್ಳುವುದು ಒಳ್ಳೆಯದಲ್ಲ. ಮಾತುಗಳು ಹರಿತವಾಗಿ ಬರಬಹುದು ಇದರಿಂದ ನಿಮ್ಮ ಬಹುದಿನದ ಮಿತ್ರತ್ವ ನುಚ್ಚುನೂರಾಗುವ ಸಾಧ್ಯತೆ ಇದೆ. ಯಾರನ್ನು ಬೆಂಬಲಿಸದೆ ತಟಸ್ಥವಾಗಿರುವುದು ನಿಮಗೆ ಕ್ಷೇಮ. ಸಹೋದರರೊಂದಿಗೆ ವಿಶ್ವಾಸದ ಹೆಜ್ಜೆಯಿಡಿ. ಹೇಳಿಕೆ ಮಾತುಗಳನ್ನು ಆದಷ್ಟು ಕೇಳುವುದು ಒಳ್ಳೆಯದಲ್ಲ. ಹಣಕಾಸಿನ ವಿಷಯದಲ್ಲಿ ಸಮೃದ್ಧತೆ ಕಾಣಬಹುದಾಗಿದೆ. ದಾಂಪತ್ಯ ಜೀವನದಲ್ಲಿ ಸಂತೋಷದ ವಾತಾವರಣ ಇರಲಿದೆ.
ಅದೃಷ್ಟ ಸಂಖ್ಯೆ 1
ಗಿರಿಧರ ಶರ್ಮ 9945098262
ಧನಸ್ಸು ರಾಶಿ
ಯೋಜನೆಗಳಲ್ಲಿ ವಿಸ್ತಾರತೆಯನ್ನು ಕಾಣಬಹುದು. ಆರ್ಥಿಕವಾಗಿ ಹಲವು ರೀತಿಯ ಅನುಕೂಲಗಳು ಪ್ರಾಪ್ತಿಯಾಗಲಿದೆ. ನಿಮ್ಮ ಅದೃಷ್ಟದ ಬಾಗಿಲು ತೆರೆಯುವ ಸಮಯವಿದು. ಹೊರಗಿನ ಆಹಾರವನ್ನು ಆದಷ್ಟು ತಡೆಗಟ್ಟುವುದು ಒಳ್ಳೆಯದು. ಮೂಳೆ ಸಂಬಂಧಿತ ಬಾದೆಗಳು ಹೆಚ್ಚಾಗಿ ಕಂಡುಬರುತ್ತದೆ. ಮಕ್ಕಳ ಉದ್ಯೋಗದಲ್ಲಿ ಬೆಳವಣಿಗೆ ಕಾಣಬಹುದು. ಗೃಹ ಕಟ್ಟಡದ ಕಾಮಗಾರಿ ವೇಗ ಪಡೆಯಲಿದೆ. ಸಂಗಾತಿಯ ಆರೈಕೆ ಮತ್ತು ಮುತುವರ್ಜಿ ಆಸ್ವಾದಿಸುವಿರಿ.
ಅದೃಷ್ಟ ಸಂಖ್ಯೆ 3
ಗಿರಿಧರ ಶರ್ಮ 9945098262
ಮಕರ ರಾಶಿ
ಭೂಮಿಗೆ ಸಂಬಂಧಪಟ್ಟಂತಹ ವ್ಯಾಜ್ಯಗಳು ಸೃಷ್ಟಿಯಾಗಲಿದೆ. ಕೆಲಸಗಳಲ್ಲಿ ಸ್ಥಿರತೆ ಕಂಡುಬರುವುದಿಲ್ಲ. ಚಂಚಲ ಮನಸ್ಸಿನಿಂದ ಕಾರ್ಯವನ್ನು ಪರಿಪೂರ್ಣ ಮಾಡಲು ಪರದಾಡುವಿರಿ. ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಭಂಗ ವಾಗಬಹುದು. ನಿಮ್ಮ ಜ್ಞಾನ ವಿಷಯಾಂತರವಾಗಿ ಎಲ್ಲೆಲ್ಲಿಯೂ ಹರಿಯ ಬಿಡಬೇಡಿ. ಆತ್ಮೀಯರೊಡನೆ ಭಿನ್ನಾಭಿಪ್ರಾಯಗಳು ಹೆಚ್ಚು ಕಂಡುಬರುತ್ತದೆ. ಮಂದಗತಿಯ ಆರ್ಥಿಕ ಬೆಳವಣಿಗೆ ಕಾಣಲಿದ್ದೀರಿ. ವಿಶ್ರಾಂತಿ ರಹಿತವಾದಂತಹ ಶ್ರಮದಿಂದ ಆರೋಗ್ಯದಲ್ಲಿ ಏರುಪೇರಾಗುವ ಸಂಭವವಿದೆ. ಹಿರಿಯರ ಮುತುವರ್ಜಿಯಿಂದ ಹೆಚ್ಚಿನ ಜವಾಬ್ದಾರಿ ಪ್ರಾಪ್ತಿಯಾಗಲಿದೆ.
ಅದೃಷ್ಟ ಸಂಖ್ಯೆ 7
ಗಿರಿಧರ ಶರ್ಮ 9945098262
ಕುಂಭ ರಾಶಿ
ಕೆಲಸದಲ್ಲಿ ವಿಳಂಬವಾದರೂ ಪರಿಪೂರ್ಣ ಮಾಡುವ ನಿಮ್ಮ ಮನಸ್ಥಿತಿ ಎಲ್ಲರೂ ಮೆಚ್ಚುತ್ತಾರೆ. ಆರ್ಥಿಕವಾಗಿ ಸಫಲತೆ ಸಾಧಿಸಲು ಹೆಚ್ಚಿನ ಓಡಾಟ ಮಾಡುವಿರಿ. ಹೂಡಿಕೆಗಳಲ್ಲಿ ಲಾಭದಾಯಕ ಸ್ಥಿತಿ ಕಂಡು ಬರುತ್ತದೆ. ಪ್ರೇಮಾಂಕುರವಾಗುವ ಸಂಭವ ಹೆಚ್ಚಾಗಿ ಕಂಡುಬರಲಿದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳು ಸಿಗುವ ಸಾಧ್ಯತೆ. ನಿಮ್ಮ ಕನಸು ನನಸು ಮಾಡಿಕೊಳ್ಳಲು ವಿಶೇಷ ಘಳಿಗೆ ಕಾಣಸಿಗುವುದು. ಭವಿಷ್ಯದ ಭದ್ರಬುನಾದಿಗೆ ನೀವು ಈಗಲೇ ತಯಾರಿ ನಡೆಸುವಿರಿ. ಕುಟುಂಬದಲ್ಲಿ ಸೌಕ್ಯದ ವಾತಾವರಣ ಕಂಡುಬರುತ್ತದೆ.
ಅದೃಷ್ಟ ಸಂಖ್ಯೆ 8
ಗಿರಿಧರ ಶರ್ಮ 9945098262
ಮೀನ ರಾಶಿ
ಪರಿಸ್ಥಿತಿ ಹಾಗೂ ಕಾಲಾವಕಾಶಗಳನ್ನು ನೋಡಿ ನೀವು ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗುವಿರಿ ಇದು ನಿಮ್ಮ ಬುದ್ಧಿವಂತಿಕೆಯ ಪ್ರತೀಕ. ಅಸಾಧಾರಣ ವಾದಂತಹ ಕೆಲಸವನ್ನು ನಿಮ್ಮಂತೆ ಮಾಡಿಕೊಳ್ಳುವ ವಿಶಿಷ್ಟ ಕಲೆ ತೋರ್ಪಡಿಸುವಿರಿ. ನಿಮ್ಮ ಕೆಲವು ವೈಯಕ್ತಿಕ ವಿಷಯಗಳನ್ನು ಹಂಚಿಕೊಳ್ಳುವುದು ತಪ್ಪಾಗಿ ಕಂಡುಬರುತ್ತದೆ. ಸಾಮಾಜಿಕ ಕ್ಷೇತ್ರದಲ್ಲಿ ಉತ್ತಮ ಪ್ರಶಂಸೆ ವ್ಯಕ್ತವಾಗಲಿದೆ. ಕುಟುಂಬ ಮತ್ತು ಉದ್ಯೋಗವನ್ನು ಸರಿಸಮಾನವಾಗಿ ಸಂತೋಷಪಡಿಸುವ ಸ್ಥಿತಿ ಕಂಡು ಬರುತ್ತದೆ. ಹಣಕಾಸಿನ ವಿಷಯದಲ್ಲಿ ಪ್ರಗತಿಯ ಬೆಳವಣಿಗೆ ಕಂಡುಬರಲಿದೆ. ವಸ್ತುಗಳ ಖರೀದಿಯ ಭರಾಟೆ ಈ ವಾರ ಕಾಣಬಹುದು.
ಅದೃಷ್ಟ ಸಂಖ್ಯೆ 3
ಗಿರಿಧರ ಶರ್ಮ 9945098262
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ, ಸಂತಾನ, ಸಾಲಬಾದೆ, ಹಣಕಾಸು, ಇನ್ನಿತರ ಗುಪ್ತ ಸಮಸ್ಯೆಗಳಿಗೆ ಕರೆ ಮಾಡಿ, ಪರಿಹಾರ ಪಡೆದುಕೊಳ್ಳಿ.
9945098262