ರಾಜ್ಯದಲ್ಲಿ 543, ಕಲ್ಯಾಣ ಕರ್ನಾಟಕದಲ್ಲಿಯೇ 90 ಪ್ರಾಂಶುಪಾಲರಿಲ್ಲದ ಕಾಲೇಜು.!
543 ಪ್ರಾಂಶುಪಾಲ ಹುದ್ದೆ ಖಾಲಿ,
ಕಲ್ಯಾಣ ಕರ್ನಾಟಕ 90 ಪ್ರಾಂಶುಪಾಲರಿಲ್ಲದ ಕಾಲೇಜು
ಬೆಂಗಳೂರಃ ರಾಜ್ಯದ ಬಹುತೇಕ ಸರ್ಕಾರಿ ಪದವಿ ಪೂರ್ವ ಕಾಲೇಜುಗಳು ಪ್ರಾಂಶುಪಾಲರಿಲ್ಲದೆ ನಡೆಯುತ್ತಿವೆ.
ಸುಮಾರು 543 ಪ್ರಾಂಶುಪಾಲ ಹುದ್ದೆಖಾಲಿಯಿದ್ದು ಇದೀಗ ರಾಜ್ಯ ಸರ್ಕಾರ ಕೌನ್ಸಲಿಂಗ್ ಮೂಲಕ ಅವುಗಳನ್ನು ಭರ್ತಿ ಮಾಡಲು ಪಿಯು ಶಿಕ್ಷಣ ಇಲಾಖೆ ಮುಂದಾಗಿದೆ.
ಕಳೆದ ಮೂರು ನಾಲ್ಕುವರ್ಷದಿಂದ ಕಾಲೇಜು ಪ್ರಾಂಶುಪಾಲ ಹುದ್ದೆ ಖಾಲಿಯಿದ್ದು, ಶೈಕ್ಷಣಿಕ ಹಿನ್ನಡೆ ಅನುಭವಿಸಿದಂತಾಗಿದೆ.
ಕಾರಣ ಖಾಲಿ ಇರುವ ಹುದ್ದೆಗಳನ್ನು ಶೀಘ್ರದಲ್ಲಿ ನಿಗದಿತ ದಿನಾಂಕದೊಳಗೆ ಭರ್ತಿ ಮಾಡಲು ಇಲಾಖೆ ಕ್ರಮಕೈಗೊಂಡಿದೆ ಎನ್ನಲಾಗಿದೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಸುಮಾರು 90 ಪ್ರಾಂಶುಪಾಲ ಹುದ್ದೆ ಖಾಲಿ ಇವೆ ಎನ್ನಲಾಗಿದೆ.
ಯಾದಗಿರಿ-18, ಬೀದರ – 10, ಕಲಬುರ್ಗಿ – 21, ಬಳ್ಳಾರಿ – 09, ರಾಯಚೂರ – 32 ಸೇರಿದಂತೆ ಕೊಪ್ಪಳ 15 ಪ್ರಾಂಶುಪಾಲ ಹುದ್ದೆಗಳು ಖಾಲಿ ಇವೆ. ರಾಜ್ಯದಾದ್ಯಂತ ವಿವಿಧ ಪಿಯು ಕಾಲೇಜುಗಳಲ್ಲಿ ಪ್ರಾಂಶುಪಾಲರ ಕೊರತೆ ಹೆಚ್ಚಿದೆ.
ರಾಜ್ಯ ಸರ್ಕಾರ ಹೊಸ ನೇಮಕಾತಿ ಇಲ್ಲದೆ ವರ್ಗಾವಣೆ ಕೌನ್ಸೆಲಿಂಗ್ ಮೂಲಕ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದ್ದು, ಇದರಿಂದ ಖಾಲಿ ಇರುವ ಹುದ್ದೆಗಳ ಸಂಖ್ಯೆ ಕಡಿಮೆಯಾಗುವ ಸಾಧ್ಯತೆ ಇದೆ.