ನಾಳೆ ಶನಿವಾರ ಅಯೋಧ್ಯ ತೀರ್ಪು ಪ್ರಕಟ
ವಿವಿ ಡೆಸ್ಕ್ಃ ಅಯೋಧ್ಯ ವಿವಾದ ಕುರಿತಾದ ಪ್ರಕರಣದ ತೀರ್ಪು ಶನಿವಾರ ಬೆಳಗ್ಗೆ 10ಃ30 ಕ್ಕೆ ಸಿಜೆಐ ರಂಜನ್ ಗೋಗಯ್ ನೇತೃತ್ವದ ಪೀಠ ತೀರ್ಪು ನೀಡಲಿದೆ. ಸುಮಾರು ಒಂದುವರೆ ದಶಕದ ಹಳೆಯದ್ದಾಗಿದ್ದ ಅಯೋಧ್ಯ ಪ್ರಕರಣದ ತೀರ್ಪು ನಾಳೆ ಶನಿವಾರ ಹೊರ ಬೀಳಲಿದೆ ಎಂಬ ಮಾಹಿತಿ ಇದೀಗ ದೊರೆತಿದೆ.
ಅಂತಿಮ ತೀರ್ಪು ನಾಳೆ ಹೊರಬೀಳಲಿರುವ ಹಿನ್ನೆಲೆ ಉತ್ತರ ಪ್ರದೇಶದಾದ್ಯಂತ ಕಟ್ಟುನಿಟ್ಟಿನ ಬಿಗಿಭದ್ರತೆವಹಿಸಲಾಗಿದೆ. ದೇಶದಾದ್ಯಂತ ಕಟ್ಟು ಕಟ್ಟೆಚ್ಚರಿಕೆವಹಿಸಲಾಗಿದೆ. ಅಧಿಕಾರಿಗಳಿಂದ ಮೀಟಿಂಗ್ ಮೇಲೆ ಮೀಟಿಂಗ್ ನಡೆಯುತ್ತಿದೆ. ಏನೇನು ಕ್ರಮಕೈಗೊಳ್ಳಬೇಕಿದೆ ಎಂಬ ಚರ್ಚೆ ನಡೆಸಲಾಗುತ್ತಿದೆ.
ಸುಪ್ರೀಂಕೋರ್ಟ ನಾಳೆ ಇಡಿ ಜಗತ್ತಿನ ಗಮನಸೆಳೆದಿದ್ದ ಪ್ರಕರಣದ ತೀರ್ಪು ನೀಡುತ್ತಿದೆ. ಸಿಜೆಐ ನೇತೃತ್ವದ ಐವರು ನ್ಯಾಯಧೀಶರ ಪೀಠ ತೀರ್ಪು ನೀಡುತ್ತಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಡೆ ಬಿಗಿಭದ್ರತೆ ಒದಗಿಸಲಾಗಿದೆ. ನಾಳೆ ಕಾರ್ತಿಕ ಮಾಸದ ವಿಶೇಷತೆ ತುಳಸಿ ಪೂಜೆ ಬೇರೆ ಇರುವದರಿಂದ ಎಲ್ಲಡೆ ಶಾಂತತೆ ಕಾಪಾಡುವದು ಅಗತ್ಯವಿದೆ. ಇಡಿ ಉತ್ತರ ಪ್ರದೇಶದಲ್ಲಿ ಇಂಟರ್ ನೆಟ್ ಸ್ಥಗಿತಗೊಳಿಸುವ ಸಾಧ್ಯತೆಯು ಕಂಡು ಬಂದಿದೆ.
ನಮ್ಮದು ಜಾತ್ಯಾತೀತ ರಾಷ್ಟ್ರವಾಗಿರುವದರಿಂದ ತೀರ್ಪು ಏನೇ ಆಗಿರಲಿ ಎಲ್ಲರೂ ಸಮಧಾನದಿಂದ ಇರಬೇಕು. ನ್ಯಾಯಪೀಠ ಹೊರಡಿಸುವ ತೀರ್ಪಿಗೆ ಎಲ್ಲರೂ ಬದ್ಧರಾಗಿರಬೇಕು. ಶಾಂತತೆಗೆ ಭಂಗ ಬಾರದಂತೆ ನೋಡಿಕೊಳ್ಳಬೇಕು. ಭಾರತದಲ್ಲಿರುವವರೆಲ್ಲರೂ ಭಾರತೀಯರೆ ಎಂಬುದನ್ನು ಮರೆಯಬೇಡಿ.
ಯಾವುದಕ್ಕೂ ನಾಳೆ ತೀರ್ಪು ಏನಾಗಲಿದೆ ಎಂಬುದನ್ನು ಕಾಯ್ದು ನೋಡಬೇಕು. ಶತಮಾನಗಳ ಹಳೆಯ ಪ್ರಕರಣಕ್ಕೆ ಐತಿಹಾಸಿಕ ತೀರ್ಪು ಹೊರ ಬೀಳಲಿರುವ ಹಿನ್ನೆಲೆ ಎಲ್ಲೆಡೆ ಹೈ ಅಲರ್ಟ್ ಆಗಿದೆ. ಮಾನವರಾದ ನಾವೆಲ್ಲ ಯಾವುದೇ ಧರ್ಮದವರಾಗಲಿ ಶಾಂತತೆಯನ್ನು ಕಾಪಾಡಿಕೊಳ್ಳಬೇಕು. ತೀರ್ಪು ಏನೆ ಬರಲಿ. ಸಮಧಾನ, ಶಾಂತಿ ಅಗತ್ಯವಿದೆ.