Homeಜನಮನಪ್ರಮುಖ ಸುದ್ದಿಮಹಿಳಾ ವಾಣಿ

ಪಿಯುಸಿ ವಿದ್ಯಾರ್ಥಿಗಳಿಗೆ ಸಿಗಲಿದೆ 25,000 ಸ್ಕಾಲರ್ ಶಿಪ್; ಇಲ್ಲಿದೆ ಸಂಪೂರ್ಣ ಮಾಹಿತಿ

(CA Scholarship:) 11 ಮತ್ತು 12ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 2024-25 ನೇ ಸಾಲಿನ ಕೋರ್ಟೇವಾ ಅಗ್ರಿಸೈನ್ಸ್ ಸ್ಕಾಲರ್ಶಿಪ್ ನೀಡುತ್ತಿದ್ದು, ಆಸಕ್ತ ಹಾಗೂ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಹೇಗೆ?, ಅರ್ಹತೆ ಏನಿರಬೇಕು, ಕೊನೆಯ ದಿನಾಂಕ ಯಾವಾಗ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಇದು ಕೋರ್ಟೇವಾ ಅಗ್ರಿಸೈನ್ಸ್ ಸೀಡ್ಸ್ ಪ್ರೈ. ಲಿ.ನ ಉಪಕ್ರಮವಾಗಿದ್ದು, ಕೃಷಿ ಕ್ಷೇತ್ರದಲ್ಲಿ ಸ್ನಾತಕೋತ್ತರ, ಡಾಕ್ಟರಲ್ ಅಥವಾ ಪದವಿಪೂರ್ವ ಕೋರ್ಸ್ಗಳಲ್ಲಿ ಮತ್ತು ಸ್ಟೆಮ್ ವಿಷಯಗಳೊಂದಿಗೆ 11 ಮತ್ತು 12ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವನ್ನು ಒದಗಿಸುವ ಗುರಿಯನ್ನು ಹೊಂದಿರುವಂತಹ ಕಾರ್ಯಕ್ರಮವಾಗಿದೆ.

ಅರ್ಜಿ ಸಲ್ಲಿಸಲು ಅರ್ಹತೆ ಏನಿರಬೇಕು?;
• ಸ್ನಾತಕೋತ್ತರ (ಎಂಬಿಎ/ಎಂ.ಎಸ್ಸಿ/ಎಂಟೆಕ್), ಡಾಕ್ಟರಲ್ ಅಥವಾ ಪದವಿಪೂರ್ವ ಕೋರ್ಸ್ಗಳು ಮತ್ತು ಸ್ಟೆಮ್ ವಿಷಯಗಳೊಂದಿಗೆ 11 ಮತ್ತು 12ನೇ ತರಗತಿಯಲ್ಲಿರುವ (ಸರ್ಕಾರಿ/ ಖಾಸಗಿ ಶಾಲೆಗಳು) ವಿದ್ಯಾರ್ಥಿನಿಯರು.
• ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ರೂ.6,00,000 ಅಥವಾ ಅದಕ್ಕಿಂತ ಕಡಿಮೆ ಇರಬೇಕು.
• ಭಾರತದಾದ್ಯಂತದ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
• ಕೋರ್ಟೇವಾ ಮತ್ತು ಬಡ್ಡಿ4ಸ್ಟಡಿಯ ಉದ್ಯೋಗಿಗಳ ಮಕ್ಕಳು ಅರ್ಹರಲ್ಲ

ಎಷ್ಟು ಸ್ಕಾಲರ್ ಶಿಪ್ ಲಭ್ಯ:
• ಪಿಜಿ ವಿದ್ಯಾರ್ಥಿಗಳಿಗೆ : ರೂ. 50,000
• ಯುಜಿ ವಿದ್ಯಾರ್ಥಿಗಳಿಗೆ : ರೂ. 25,000
• ಶಾಲಾ ವಿದ್ಯಾರ್ಥಿಗಳಿಗೆ: ರೂ. 10,000

ಅರ್ಜಿ ಸಲ್ಲಿಕೆ ಹೇಗೆ?;
ಆಸಕ್ತ ಹಾಗೂ ಅರ್ಹ ವಿದ್ಯಾರ್ಥಿಗಳು www.b4s.in/nwmd/CASP4 ಈ ವೆಬ್ ಸೈಟ್ ಗೆ ಭೇಟಿ ನೀಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ?;
30-09-2024

Related Articles

Leave a Reply

Your email address will not be published. Required fields are marked *

Back to top button