ಅ.12 ರಿಂದ ಇ-ಕ್ಲಾಸ್ ಪಾಠ ಆರಂಭ- ಸುರೇಶಕುಮಾರ
ಬೆಂಗಳೂರಃ ಕೋವಿಡ್-19 ಹಿನ್ನೆಲೆ ಸಂವೇದ ಇ-ಕ್ಲಾಸ್ ಎರಡನೇಯ ಅವಧಿಯ ಇ-ಕ್ಲಾಸ್ ಸರಣಿ ಪಾಠ ಇದೇ ಅಕ್ಟೋಬರ್ 12 ರಿಂದ ಆರಂಭವಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶಕುಮಾರ ತಿಳಿಸಿದ್ದಾರೆ.
5,6, ಮತ್ತು 7ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರಥಮ ಭಾಷೆ ಕನ್ನಡ, ದ್ವಿತೀಯ ಭಾಷೆ ಇಂಗ್ಲೀಷ್, ತೃತೀಯ ಭಾಷೆ ಹಿಂದಿ, ಕನ್ನಡ ಮಾಧ್ಯಮದಲ್ಲಿ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳಲ್ಲಿ ವಿಡಿಯೋ ಪಾಠಗಳು ಯೂಟ್ಯೂಬ್ ಚಾನಲ್‍ಗಳಲ್ಲಿ ಪ್ರಸಾರ ಮಾಡಲಾಗುತ್ತಿದೆ.
ಅಲ್ಲದೆ ಇದೇ ತರಗತಿಗಳು ದೂರದರ್ಶನದ ಚಂದನ ವಾಹಿನಿಯಲ್ಲೂ ಮರು ಪ್ರಸಾರಗೊಳ್ಳಲಿವೆ.
2020-21 ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಚಟುವಟಿಕೆಗಳನ್ನು ಆರಂಭಿಸಬೇಕಾಗಿದೆ. ಕೊರೊನಾದಿಂದಾಗಿ ಅದು ಸದ್ಯದ ಪರಿಸ್ಥಿತಿಯಲ್ಲಿ ಅದು ಸಾಧ್ಯವಿಲ್ಲವಾಗಿದೆ. ಆ ಹಿನ್ನೆಲೆಯಲ್ಲಿ ಪ್ರಸ್ತುತ ದೂರದರ್ಶನ ಚಂದನ ವಾಹಿನಿ ಮೂಲಕ ಪ್ರತಿ ದಿನ 4 ಗಂಟೆಯಂತೆ 8 ರಿಂದ 10 ನೇಯ ತರಗತಿ ಮಕ್ಕಳಿಗೆ ವಿಡಿಯೋ ಪಾಠ ತಯಾರಿಸಿ ಪ್ರಸಾರ ಮಾಡಲಾಗುತ್ತಿದೆ. ಸಮಯಧಾರಿತವಾಗಿ ಉಳಿದ ತರಗತಿಗಳ ಪಾಠವು ಪ್ರಸಾರ ಮಾಡಲಾಗುವದು ಎಂದು ಅವರು ಮಾಹಿತಿ ನೀಡಿದರು.