ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ಆತಂಕ ಬೇಡ-ಸ್ಟ್ಯಾನ್ಲಿ
ಸಂತಪಾಲ ಶಾಲೆ- ಬೀಳ್ಕೊಡುಗೆ ಸಮಾರಂಭ
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ
ಯಾದಗಿರಿ, ಶಹಾಪುರಃ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಹತ್ತಿರವಾಗುತ್ತಿದ್ದು, ವಿದ್ಯಾರ್ಥಿಗಳಲ್ಲಿ ಯಾವುದೇ ಭಯ ಆತಂಕ ಬೇಡ. ಈಗಲೇ ಪರೀಕ್ಷೆ ಎದುರಿಸಲು ಸಿದ್ಧತೆ ಮಾಡಿಕೊಳ್ಳಿ. ಬೆಳಗಿನ ಜಾವದಿಂದ ತಡ ರಾತ್ರಿವರೆಗೂ ಅಭ್ಯಾಸ ಮಾಡಿ ಇನ್ನೂ ಸಮಯವಿದೆ. ಯಾವುದಕ್ಕೂ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ ಎಂದು ಮುಖ್ಯಗುರು ಸ್ಟ್ಯಾನ್ಲಿ ವರದರಾಜ ಸಲಹೆ ನೀಡಿದರು.
ನಗರದ ಸಂತಪಾಲ ಶಾಲಾ ಆವಣದಲ್ಲಿ ನಡೆದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ನಿರಂತರ ಅಭ್ಯಸಿಸುವ ಮೂಲಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಹೆತ್ತವರ ಮತ್ತು ಶಾಲೆಗೆ ಕೀರ್ತಿ ತರಬೇಕೆಂದು ಕರೆ ನೀಡಿದರು.
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಶಾಲೆಯ ಶಿಕ್ಷಕರನ್ನು ಮತ್ತು ತಮ್ಮ ಸ್ನೇಹಿತರು ದೂರಾಗುತ್ತಿರುವ ಆತಂಕವನ್ನು ನೋವನ್ನು ತೋಡಿಕೊಂಡರು. ಆದಾಗ್ಯು ಉತ್ತಮ ಶೈಕ್ಷಣಿಕ ಪಯಣ ಚನ್ನಾಗಿರಲಿ ಮುಂದೆ ಉತ್ತಮ ಹುದ್ದೆ ಅಲಂಕರಿಸಿ ಕಲಿತ ಶಾಳೆ ಕಲಿಸಿದ ಗುರುಗಳನ್ನು ಎಂದಿಗೂ ಮರೆಯುವದಿಲ್ಲ ಎಂದಾಗ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಕಣ್ಣಾಲಿ ತುಂಬಿ ಬಂದವು.
ಇದೇ ಸಂದರ್ಭದಲ್ಲಿ 8 ಮತ್ತು 9 ನೇ ತರಗತಿ ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು. 10ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲಾವತಿಯಿಂದ ನೆನಪಿನ ಕಾಣಿಕೆಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಶಿಕ್ಷಕ ನಾಗರಾಜ, ಅನುಸೂಯ ಸೇರಿದಂತೆ ಶಿಕ್ಷಕರಾದ ಮಿಕಲ್, ಕವಿತಾ, ಗೀತಾಂಜಲಿ, ಮಾಲನಬಿ, ರವಿ ಇಟಗಿ, ಬಲರಾಮ ರಾಠೋಡ ಸೇರಿದಂತೆ ರಾಹುಲ್ ಡಿ.ಬಿ, ಪರಶುರಾಮ ಉಪಸ್ಥಿತರಿದ್ದರು.