ಶಹಾಪುರಃ ಇಂದು, ನಾಳೆ ಶಾಲೆಗೆ ರಜೆ ಘೋಷಣೆ ತಹಶೀಲ್ದಾರ ಸ್ಪಷ್ಟನೆ
ಶಹಾಪುರಃ ಆ.19, 20 ಎರಡು ದಿನ ರಜೆ ಘೋಷಣೆ - ತಹಶೀಲ್ದಾರ ಸ್ಪಷ್ಟನೆ

ಶಹಾಪುರಃ ಆ.19, 20 ಎರಡು ದಿನ ರಜೆ ಘೋಷಣೆ – ತಹಶೀಲ್ದಾರ ಸ್ಪಷ್ಟನೆ
ವಿನಯವಾಣಿ
ಶಹಾಪುರಃ ತಾಲೂಕಿನಾದ್ಯಂತ ನಿರಂತರ ಮಳೆ ಸುರಿಯುತ್ತಿರುವದರಿಂದ ಮಕ್ಕಳ ಆರೋಗ್ಯ ಮತ್ತು ಸುರಕ್ಷಿತ ಹಿನ್ನೆಲೆ ತಾಲೂಕಿನ ಎಲ್ಲಾ ಸರಕಾರಿ ಅನುದಾನಿತ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಆಗಸ್ಟ್ 19 ಮತ್ತ 20 ರಂದು ಎರಡು ದಿನ ರಜೆ ಘೋಷಣೆ ಮಾಡಿರುವ ಕುರಿತು ತಹಶೀಲ್ದಾರ ಸಿದ್ಧಾರೂಢ ಬನ್ನಿಕೊಪ್ಪ ಅವರು ವಿವಾಗೆ ಸ್ಪಷ್ಟ ಪಡಿಸಿದ್ದಾರೆ.
ಶಾಲಾ, ಕಾಲೇಜಿಗೆ ರಜೆ ನೀಡುವ ಕುರಿತು ಜಿಲ್ಲಾಧಿಕಾರಿಗಳು ಆಯಾ ತಹಶೀಲ್ದಾರರು ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳು ಸ್ಥಳೀಯ ಹವಾಮಾನ, ಪರಿಸ್ಥಿತಿ ಅನುಸರಿಸಿ ರಜೆ ನೀಡಲು ಮೌಖಿಕ ಆದೇಶ ನೀಡಿದ್ದು, ಅದರಂತೆ ಬಿಇಓ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳ ಜತೆ ಚರ್ಚಿಸಿ ಇಂದು ಮತ್ತು ನಾಳೆ ಅಂದರೆ ಆ.19, 20 ಎರಡು ದಿನ ಸರ್ಕಾರಿ ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ ಮಾಡಿದ್ದು, ಸಂಬಂಧಿಸಿದ ಆಯಾ ಶಾಲಾ ಮುಖ್ಯ ಗುರುಗಳಿಗೆ ಸೂಚನೆ ನೀಡಲಾಗಿದೆ. ಮುಂದಿನ ದಿನಗಳಲಿ ಈ ರಜೆ ಸರಿದೂಗಿಸಿಕೊಳ್ಳಲು ಸೂಚನೆ ನಿಡಲಾಗಿದೆ ಎಂದು ತಿಳಿಸಿದ್ದಾರೆ.