ವಿಜ್ಞಾನ ವಿಚಾರ ಗೋಷ್ಠಿಃ ಜೀವೇಶ್ವರ ಶಾಲಾ ಮಕ್ಕಳು ಜಿಲ್ಲಾ ಮಟ್ಟಕ್ಕೆ ಆಯ್ಕೆ
ಜೀವೇಶ್ವರ ಶಾಲಾ ಮಕ್ಕಳು ಜಿಲ್ಲಾ ಮಟ್ಟಕ್ಕೆ ಆಯ್ಕೆ
ಯಾದಗಿರಿ, ಶಹಾಪುರಃ ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪ್ರೌಢ ಶಾಲಾ ವಿಭಾಗದಲ್ಲಿ ತಾಲೂಕು ಮಟ್ಟದ ವಿಜ್ಞಾನ ವಿಚಾರ ಗೋಷ್ಠಿ ಮತ್ತು ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ನಗರದ ಜೀವೇಶ್ವರ ಪ್ರೌಢ ಶಾಲಾ ಮಕ್ಕಳು ಭಾಗವಹಿಸಿ ಪ್ರಥಮ ಸ್ಥಾನ ಪಡೆಯುವ ಮೂಲಕ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಮುಖ್ಯಗುರು ಪ್ರವೀಣ ಫಿರಂಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಟಕ ಸ್ಪರ್ಧೆಯಲ್ಲಿ ಸ್ವಚ್ಛತೆ, ನೈರ್ಮಲ್ಯ ಮತ್ತು ಆರೋಗ್ಯದ ಕುರಿತು ನಟಿಸಿದ ಮಕ್ಕಳ ದೃಶ್ಯಾವಳಿ ನೋಡುಗರ ಗಮನ ಸೆಳೆಯಿತು. ಈ ನಾಟಕದಲ್ಲಿ ಒಟ್ಟು ನಾಲ್ಕು ದೃಶ್ಯಾವಳಿಗಳಿವೆ.
ಮೊದಲನೇಯದ್ದು ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವದು, ಎರಡನೇಯದು ಬಯಲು ಶೌಚಾಲಯದ ದುಷ್ಪರಿಣಾಮ ಬಗ್ಗೆ ತಿಳಿಸುವದು ಮತ್ತು ಮೂರನೇಯದು ಗಿಡ ಮರಗಳನ್ನು ಏಕೆ ರಕ್ಷಿಸಬೇಕು ಹಾಗೂ ಕೊನೆಯದಾಗಿ ಪ್ಲಾಸ್ಟಿಕ್ ಮುಕ್ತಗೊಳಿಸುವ ಕುರಿತು ಅರಿವು ಮೂಡಿಸುವ ದೃಶ್ಯಾವಳಿಯನ್ನು ವಿದ್ಯಾರ್ಥಿಗಳು ಉತ್ತಮವಾಗಿ ನಟಿಸುವ ಮೂಲಕ ಜನರ ಗಮನ ಸೆಳೆದಿದ್ದಾರೆ ಎಂದು ಅವರು ವಿವರಿಸಿದರು.
ಮಕ್ಕಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಮಲ್ಲಯ್ಯ ಫಿರಂಗಿ, ರವಿ ದಂಡು, ವಿಶ್ವನಾಥ ಚಿಲ್ಲಾಳ ಸೇರಿದಂತೆ ಶಿಕ್ಷಕರಾದ ಮೌನೇಶ ಹಯ್ಯಾಳಕರ, ಸುರೇಖಾ ಏಕಬೋಟೆ, ಪ್ರತಿಭಾ ರುಮಾಲ, ವಿಜಯಲಕ್ಷ್ಮೀ, ಲಕ್ಷ್ಮೀ ಫಿರಂಗಿ ಹರ್ಷ ವ್ಯಕ್ತಪಡಿಸಿದ್ದಾರೆ.