ಸೀಮಂತ, ಪೌಷ್ಠಿಕ ಆಹಾರ, ಅನ್ನ ಪ್ರಸನ್ನ ಶಿಬಿರ
ರಕ್ತ ಹೀನತೆ ತಡೆಗೆ ಮಹಿಳೆಯರು ಉತ್ತಮ ಆಹಾರ ಸೇವಿಸಿ
ಶಹಾಪುರಃ ಗಭೀಣಿ ಸ್ತ್ರೀಯರು ಆರೋಗ್ಯವಾಗಿರಲು ಮೊದಲು ಉತ್ತಮ ಆಹಾರ ಸೇವನೆ ಮಾಡಬೇಕು. ಆಗ ಮಹಗು ಚನ್ನಾಗಿ ಬೆಳೆಯಲು ಸಹಕಾರಿಯಾಗಲಿದೆ. ಪ್ರಮುಖವಾಗಿ ರಕ್ತ ಹೀನತೆಯಂತ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಲು. ರಕ್ತ ಶೇಖರಣೆಯಾಗುವಂತ ಹಣ್ಣು, ತರಕಾರಿ ಸೇವನೆ ಅಗತ್ಯ ಎಂದು ಹಿರಿಯ ಆರೋಗ್ಯ ಸಹಾಯಕ ಮಲ್ಲಪ್ಪ ಕಾಂಬ್ಳೆ ತಿಳಿಸಿದರು.
ನಗರದ ಹಳಿಸಗರ ಭಾಗದ ಫೈಯರ್ ಸ್ಟೇಷನ್ ಹತ್ತಿರದ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಿದ್ದ ಸೀಮಂತ ಕಾರ್ಯಕ್ರಮ, ಅನ್ನ ಪ್ರಸನ್ನ ಮತ್ತು ಪೌಷ್ಠಿಕ ಆಹಾರ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪೌಷ್ಠಿಕಯುತ ಆಹಾರವನ್ನು ಸೇವನೆ ಮಾಡಬೇಕು. ಗರ್ಭೀಣಿ ಸ್ತ್ರೀಯರು ನಿರ್ಲಕ್ಷವಹಿಸದೆ ಸಂಬಂಧಿಸಿದ ಅಂಗನವಡಿ ಕಾರ್ಯಕರ್ತೆಯರ ಸಹಾಯದಿಂದ ಆಸ್ಪತ್ರೆಯ ಸಂಬಂಧಿತ ವೈದ್ಯರನ್ನಜು ಕಾಣಬೇಕು. ಅವರಿಂದ ಉತ್ತಮ ಚಿಕಿತ್ಸೆ ಸಲಹೆ ಪಡೆಯಬೇಕು. ಮಕ್ಕಳು ಸಶಕ್ತವಾಗಿ ಬೆಳೆಯಲು ಪೌಷ್ಠಿಕತೆ ಆಹಾರ ಸೇವನೆ ಅಗತ್ಯವಿದೆ. ಉತ್ತಮ ಆಹಾರ ಸೇವನೆಯೇ ಮೊದಲು ಮದ್ದು, ಹೀಗಾಗಿ ಮಹಿಳೆಯರು ಎಚ್ಚರಿಕೆವಹಿಸಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಗರ್ಭೀಣಿ ಸ್ತ್ರೀಯರಿಗೆ ಸೀಮಂತ ಕಾರ್ಯಕ್ರಮ ನಡೆಸಲಾಯಿತು. ಸರ್ವ ಶಿಕ್ಷಣ ಯೋಜನಾಧಿಕಾರಿ ಮಲ್ಲಣ್ಣ ದೇಸಾಯಿ, ಜಿಲ್ಲಾ ಸಂಯೋಜಕ ಯಲ್ಲಪ್ಪ ಸೇರಿದಂತೆ ಅಂಗನವಾಡಿ ಶಿಕ್ಷಕಿಯರು, ಆರೋಗ್ಯ ಇಲಾಖೆಯ ಸಿಬ್ಬಂದಿ ಇತರರು ಭಾಗವಹಿಸಿದ್ದರು.