ಪ್ರಮುಖ ಸುದ್ದಿ
ಶಹಾಪುರ ನಗರದಲ್ಲಿ ಸರಣಿ ಮನೆ ಕಳ್ಳತನ
ಅಪಾರ ಮೌಲ್ಯದ ಬಂಗಾರ ಆಭರಣ ಕದ್ದೊಯ್ದ ಕಳ್ಳರು
ಶಹಾಪುರಃ ಇಲ್ಲಿನ ಬಸವೇಶ್ವರ ನಗರದಲ್ಲಿ ಮೂರು ಮನೆಗಳಿಗೆ ರಾತ್ರಿ ಖನ್ನಾ ಹಾಕಿದ ಕಳ್ಳರು ಮನೆಯ ಬೀರುವಿನಲ್ಲಿಟ್ಟ ಅಪಾರ ಮೌಲ್ಯದ ಬಂಗಾರದ ಒಡವೆ, ಹಣ ಕದ್ದೊಯ್ದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಮನೆಗೆ ಬೀಗ ಹಾಕಿರುವದನ್ನು ಗಮನಿಸಿಸ ಕಳ್ಳರು ಬೀಗ ಮುರಿದು ಮನೆಯೊಳಗೆ ಪ್ರವೇಶ ಮಾಡಿ ಬಂಗಾರ, ಹಣ ತೆಗೆಸುಕೊಂಡು ಪರಾರಿಯಾಗಿದ್ದಾರೆ ಎಂದು ಮನೆ ಮಾಲೀಕರು ತಿಳಿಸಿದ್ದಾರೆ.
ಸರಣಿ ಕಳ್ಳತನ ನಡೆಸಿದ ಕಳ್ಳರು ಪಕ್ಕದ ಮನೆಯೊಂದರಲ್ಲಿ ಜನರು ಇರುವದನ್ನು ಕಂಡುಕೊಂಡು ಹೊರಗಡೆಯಿಂದ ಅವರ ಮನೆಗೆ ಚಿಲಕವಿಟ್ಟಿದ್ದಾರೆ.
ನಂತರ ಬೀಗ ಹಾಕಲಾಗಿದ್ದ ಮೂರು ಮನೆ ಕಳ್ಳತನ ಮಾಡಿ ಒಂದೇ ಮನೆಯಲ್ಲಿ 15 ತೊಲೆ ಬಂಗಾರ ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಇನ್ನುಳಿದ ಮನೆಗಳಲ್ಲಿ ಎಷ್ಟು ಬಂಗಾರ, ಹಣ ಹೊತ್ತೊಯ್ದಿದ್ದಾರೆ ಗೊತ್ತಿಲ್ಲ.
ಘಟನಾ ಸ್ಥಳಕ್ಕೆ ಬೆಳಗ್ಗೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಪರಿಶೀಲನೆ ನಂತರವೇ ಒಟ್ಟು ಕದ್ದೊಯ್ದ ಹಣ, ಬಂಗಾರದ ಒಡೆವೆ ಎಷ್ಟೆಂಬುದು ತಿಳಿಯಲಿದೆ.