420, ಫ್ರಾಡರ್ ಗೆ ಸಚಿವ ಸ್ಥಾನಃ ಹೆಚ್.ವಿಶ್ವನಾಥ ಆಕ್ರೋಶ
420, ಫ್ರಾಡರ್ ಗೆ ಸಚಿವ ಸ್ಥಾನಃ ಹೆಚ್.ವಿಶ್ವನಾಥ ಆಕ್ರೋಶ
ಬೆಂಗಳೂರಃ ಒಬ್ಬ ಫ್ರಾಡ್ ಗೆ ನೀವು ಸಚಿವ ಸ್ಥಾನ ಕೊಡ್ತೀರಿ..ಮುನಿರತ್ನ ಅವರಿಗೆ ಸಚಿವ ಸ್ಥಾನ ಕೊಡ್ತೀವಿ ಎಂದು ಕೊಡೊದಿಲ್ಲ. ಕಾರಣ ಕೇಳಿದರೆ, ಮುನಿರತ್ನನ ಮೇಲೆ ಕೇಸ್ ಇದೆ ಅಂತೀರಾ.?
ಸೈನಿಕ ಸಿಪಿ ಯೋಗೇಶ್ವರ ಮೇಲೆ ಕೇಸ್ ಇಲ್ವಾ.? 420 ಕೇಸ್ ಇದೆ. ಹಲವಾರು ಜನಕ್ಕೆ ನಿವೇಶನ ನೀಡುವೆ ಎಂದು ಚೀಟಿಂಗ್ ಮಾಡಿದ್ದಾನೆ ಎಂದು ಹಿರಿಯ ನಾಯಕ ಹಳ್ಳಿಹಕ್ಕಿ ಹೆಚ್.ವಿಶ್ವನಾಥ ಹರಿಹಾಯ್ದರು.
ನನ್ನ ಸಚಿವ ಮಾಡಲು ಕೇಸ್ ಇದೆ. ಮುನಿರತ್ನಗೂ ಸಚಿವ ಸ್ಥಾನ ನೀಡದೆ ಓರ್ವ ಫ್ರಾಡ್ ಗೆ ನೀವು ಸಚಿವ ಸ್ಥಾನ ಕೊಡ್ತೀರಿ ಅಂದ್ರೆ ಏನ್ ನಡಿತಿದೆ ಇಲ್ಲಿ. ಅಲ್ಲದೆ ಪಾಪ ನಾಗೇಶನಿಗೆ ರಾಜೀನಾಮೆ ಕೊಡಲು ಹೇಳ್ತೀರಿ. ಸರ್ಕಾರ ರಚನೆಗೆ ನಾಗೇಶ ತ್ಯಾಗ ಮಾಡಿಲ್ವಾ.?
ಯೋಗೇಶ್ವರ್ ಏನಾದ್ರೂ ಬ್ಲಾಕ್‌ಮೇಲ್ ಮಾಡಿದ್ದಾರಾ.? ಏನ್ ಸಮಾಚಾರ ಯಾವ ಮಾನದಂಡನೆಗಳು ಉಪಯೋಗಿಸಿದ್ದೀರಿ.? ಎಂದು ಯಡಿಯೂರಪ್ಪನವರಿಗೆ ನೇರವಾಗಿ ಅವರು ಪ್ರಶ್ನೆ ಮಾಡಿದ್ದಾರೆ. ಇದರಿಂದ ನಂಬಿ ಬಂದವರ ಗತಿ ಏನು.? ಎಂದು ಅವರು ಬೇಸರ ವ್ಯಕಪಡಿಸಿದ್ದಾರೆ.