ಪ್ರಮುಖ ಸುದ್ದಿ
BREAKING – ಶಹಾಪುರಃ ಅಂಗಡಿಗಳಿಗೆ ಬೆಂಕಿ ಧಗಧಗ ಉರಿದ ಕೃಷಿ ಪರಿಕರಗಳು, ಅಪಾರ ನಷ್ಟ
ಅಗ್ನಿಶಾಮಕ ದಳ ತಂಡದಿಂದ ಬೆಂಕಿ ನಂದಿಸಲು ಹರಸಾಹಸ
ಶಹಾಪುರಃ ಗ್ಯಾರೇಜ್ ಲೈನ್ ನಾಲ್ಕೈದು ಅಂಗಡಿಗಳಿಗೆ ಬೆಂಕಿ ಅಪಾರ ನಷ್ಟ, ಸಾಮಾಗ್ರಿಗಳು ಸುಟ್ಟು ಭಸ್ಮ
ಬೆಂಕಿ ಹೊತ್ತಿ ಉರಿದ ಅಂಗಡಿಗಳು ಅಪಾರ ನಷ್ಟ
yadgiri, ಶಹಾಪುರಃ ನಗರದ ಗ್ಯಾರೇಜ್ ಲೈನ್ ನ ನಾಲ್ಕೈದು ಅಂಗಡಿಗಳಿಗೆ ಆಕಸ್ಮಿಕ ಬೆಂಕಿ ಹೊತ್ತಿ ಉರಿದು ಅಪಾರ ನಷ್ಟವಾದ ಘಟನೆ ಇದೀಗ ನಡೆದಿದೆ.
ಗ್ಯಾರೇಜ್ ಲೈನ್ ವೀರ ಭೂಮಿಪುತ್ರ ಏಜೆನ್ಸಿಯ ಅಂಗಡಿಗೆ ಬೆಂಕಿಹೊತ್ತಿದ್ದು, ಈ ಅಂಗಡಿಯ ಹಿಂಬದಿಯ ಆರ್ಟ್ಸ್ ಮತ್ತು ಫರ್ನಿಚರ್ ಅಂಗಡಿಗೂ ಬೆಂಕಿ ಮುನ್ನಾಲೆ ಚಾಚಿಕೊಂಡಿದ್ದು ಒಟ್ಟು ನಾಲ್ಕೈದು ಅಂಗಡಿಗಳು ಬೆಂಕಿಗೆ ಆಹುತಿಯಾಗಿವೆ ಎನ್ನಲಾಗಿದೆ.
ವೀರ ಭೂಮಿಪುತ್ರ ಎಜೆನ್ಸಿ ಅಂಗಡಿಯೊಳಗಿನ ಕೃಷಿ ಪರಿಕರಗಳು ಸುಟ್ಟು ಕರಕಲಾಗಿವೆ. ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಕ ದಳ ಆಗಮಿಸಿ ಹರಸಾಹಸ ಪಟ್ಟು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.
ಅದೃಷ್ಟವಶಾತ್ ಯಾವುದೆ ಪ್ರಾಣ ಹಾನಿ ಸಂಭವಿಸಿಲ್ಲ. ಘಟನೆ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಪ್ರಕರಣ ದಾಖಲಿಸಲಿದ್ದಾರೆ.