ಪ್ರಮುಖ ಸುದ್ದಿ
ಶಹಾಪುರ: ಕಾಲುವೆಯಲ್ಲಿ ಪತ್ತೆಯಾದ ದೇಹ ಯಾರದು..?
ಶಹಾಪುರ: ಕಾಲುವೆಯಲ್ಲಿ ಮಹಿಳಾ ಶವ ಪತ್ತೆ.!
ಶಹಾಪುರ: ತಾಲೂಕಿನ ಮದ್ರಿಕಿ ಗ್ರಾಮ ಸಮೀಪದ ಕೃಷ್ಣಾ ಕಾಲುವೆಯಲ್ಲಿ ಮಹಿಳಾ ಶವ ಹರಿದು ಬಂದ ಘಟನೆ ಗುರುವಾರ ನಡೆದಿದೆ. ಮೃತಳನ್ನು ತಾಲೂಕಿನ ಶಟ್ಟಿಕೇರಾ ಗ್ರಾಮದ ಚಂದವ್ವ ಗಂಡ ಮಂಜು (25) ಎಂದು ಗುರುತಿಸಲಾಗಿದೆ.
ಕಳೆದ ಮೂರು ದಿನಗಳಿಂದ ಈಕೆ ತನ್ನ ತವರು ಮನೆಯಾದ ವನದುರ್ಗಾದ ಮನೆಯಿಂದ ಗಂಡನ ಮನೆಗೆ ತೆರಳುವುದಾಗಿ ಹೇಳಿ ಹೋಗಿದ್ದಳು. ಗುರುವಾರ ಹೆಣವಾಗಿ ಮದ್ರಿಕಿ ಸಮೀಪದ ಕಾಲುವೆಯಲ್ಲಿ ಪತ್ತೆಯಾಗಿದ್ದಾಳೆ.
ಸ್ಥಳಕ್ಕೆ ಭೀಮರಾಯನ ಗುಡಿ ಪಿಎಸ್‍ಐ ತಿಪ್ಪಣ್ಣ ರಾಠೋಡ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಅವರು ತನಿಖೆ ಕೈಗೊಂಡಿದ್ದಾರೆ.
ಸಂಬಂಧಿಕರು ಶವ ಗುರುತಿಸಿದ್ದು, ಹಲವು ಸಂಶಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಚಂದವ್ವ ಗಂಡನ ಮನೆಗೆ ಹೊರಟವಳು ಹೇಗೆ ಹೆಣವಾಗಿ ಪತ್ತೆಯಾದಳು ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಪೊಲೀಸರ ತನಿಖೆಯಿಂದಲೇ ಸತ್ಯಾಂಶ ಹೊರಬರಬೇಕಿದೆ.