ಪ್ರಮುಖ ಸುದ್ದಿ
ಶಹಾಪುರಃ ಬೆಳಗ್ಗೆಯಿಂದ ಸಂಜೆವರೆಗೆ ವಿದ್ಯುತ್ ಸರಬರಾಜು ಇಲ್ಲ
ಮಂಗಳವಾರ ವಿದ್ಯುತ್ ಸರಬರಾಜು ಇಲ್ಲ ಸಹಕರಿಸಲು ಜೆಸ್ಕಾಂ ಮನವಿ
ಶಹಾಪುರಃ ನಗರದ ಹಳಿಸಗರ ಭಾಗದಲ್ಲಿ ದಿನಾಂಕ ಅಕ್ಟೋಬರ್ 30 ಮಂಗಳವಾರದಂದು ಬೆಳಗ್ಗೆ 09:00 ಗಂಟೆಯಿಂದ ಸಂಜೆ 05:30 ಗಂಟೆವರೆಗೆ ವಿದ್ಯುತ್ ಸರಬರಾಜು ಇರುವದಿಲ್ಲ.
ಕಾರಣ ನಾಗರಿಕರು ಸಹಕರಿಸಬೇಕೆಂದು ಜೆಸ್ಕಾಂ ಅಧಿಕಾರಿಗಳು ವಿನಯವಾಣಿ ಗೆ ತಿಳಿಸಿದ್ದಾರೆ.
ನಗರದ ಉಪ ವಿಭಾಗದ ವಿದ್ಯುತ್ ವಿತರಣಾ ಕೇಂದ್ರದಲ್ಕಿ ತುರ್ತು ದುರಸ್ಥಿ ಕಾರ್ಯ ಹಮ್ಮಿಕೊಂಡಿರುವದರಿಂದ ಎಫ್-2 ಹಳಿಸಗರ ಫೀಡರದಲ್ಲಿ ಬರುವ ಗ್ರಾಹಕರ ಮನೆಗಳಿಗೆ ವಿಸ್ಯುತ್ ಸಂಪರ್ಕ ಇರುವದಿಲ್ಲ ಕಾರಣ ಸಾರ್ವಜನಿಕರು ಸಹಕರಿಸಬೇಕೆಂದು ಕೋರಲಾಗಿದೆ.
ಈಗಲೇ ರಾತ್ರಿ ನಾಗರಿಕರು ನೀರಿನ ಟ್ಯಾಂಕ್ ಭರ್ತಿ ಮಾಡಿಕೊಳ್ಳಿ. ಬೇರೆ ಮಿಕ್ಸರ್ ಗೆ ಹಾಕುವ ಯಾವುದೆ ಆಹಾರ ಪದಾರ್ಥಗಳನ್ನು ಈಗಲೇ ಮಾಡಿಟ್ಟುಕೊಳ್ಳುವದು ಒಳಿತು ಎಂದು ಹಳಿಸಗರ ಭಾಗದ ಜನರಿಗೆ ವಿನಯವಾಣಿ ಕಾಳಜೀಪೂರ್ವಕವಾಗಿ ಮುನ್ಸೂಚನೆ ನೀಡುತ್ತಿದೆ ಧನ್ಯವಾದಗಳು.