ಪ್ರಮುಖ ಸುದ್ದಿ
ಶಹಾಪುರ ನಗರಸಭೆಯಲ್ಲಿಃ ಬಹಿರಂಗ ಹರಾಜು
ಯಾದಗಿರಿಃ ಶಹಾಪುರ ನಗರಸಭೆಯ ಆವರಣದಲ್ಲಿರುವ ನಿರುಪಯುಕ್ತವಾದ ನೀರು ಸರಬರಾಜು ಮತ್ತು ವಿದ್ಯುತ್ ನೈರ್ಮಲ್ಯ ಶಾಖೆಯ ಸಾಮಗ್ರಿಗಳ ಹರಾಜು ಪ್ರಕ್ರಿಯೆಯನ್ನು ಫೆಬ್ರುವರಿ 20 ರಂದು ಮಧ್ಯಾಹ್ನ 12 ಗಂಟೆಗೆ ನಗರಸಭೆ ಆವರಣದಲ್ಲಿ ನಡೆಸಲಾಗುವುದು.
ಆಸಕ್ತ ಏಜೆನ್ಸಿಯವರು 10,000 ರೂ. ಮುಂಗಡ ಠೇವಣಿಯನ್ನು ಫೆ.19ರೊಳಗೆ ನೈರ್ಮಲ್ಯ ಶಾಖೆಯ ಮುಖ್ಯಸ್ಥರಲ್ಲಿ ಜಮಾ ಮಾಡತಕ್ಕದ್ದು. ಹರಾಜು ಪ್ರಕ್ರಿಯೆ ಮುಗಿದ ಮೇಲೆ ಯಶಸ್ವಿ ಭಾಗಿದಾರರು ಅಂದೇ ಸಂಪೂರ್ಣ ಹಣವನ್ನು ನಗರಸಭೆಗೆ ಭರಿಸಬೇಕು ಮತ್ತು 2 ದಿನಗಳಲ್ಲಿ ಸಂಪೂರ್ಣ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗತಕ್ಕದ್ದು ಎಂದು ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.