ಶಹಾಪುರಃ ವಸತಿ ಶಾಲೆಯ ಶೌಚಾಲಯದಲ್ಲಿ ಮಗು ಹೆತ್ತ ವಿದ್ಯಾರ್ಥಿನಿ
ಡಿಸಿ ಮತ್ತು ಎಸ್ಪಿ ಆಸ್ಪತ್ರೆಗೆ ಭೇಟಿಃ ಅಧಿಕಾರಿಗಳ ಸಭೆ, ವಿಚಾರಣೆ

ಶಹಾಪುರಃ ವಸತಿ ಶಾಲೆಯ ಶೌಚಾಲಯದಲ್ಲಿ ಮಗು ಹೆತ್ತ ವಿದ್ಯಾರ್ಥಿನಿ
ಡಿಸಿ ಮತ್ತು ಎಸ್ಪಿ ಆಸ್ಪತ್ರೆಗೆ ಭೇಟಿಃ ಅಧಿಕಾರಿಗಳ ಸಭೆ, ವಿಚಾರಣೆ
yadgiri, ಶಹಾಪುರಃ ನಗರದ ವಸತಿ ಶಾಲೆಯ ಶೌಚಾಲಯವೊಂದರಲ್ಲಿ 9 ನೇ ತರಗತಿ ವಿದ್ಯಾರ್ಥಿನಿಯೋರ್ವಳು ಗಂಡು ಮಗುವಿಗೆ ಜನ್ಮ ನೀಡಿದ ವಿಷಯ ತಿಳಿದು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಧಾವಿಸಿದ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ತಂಡ, ಆಸ್ಪತ್ರೆಯಲ್ಲಿ ತಾಲೂಕಾಡಳಿತದ ಸಭೆ ನಡೆಸಿ, ಘಟನೆಗೆ ಸಂಬಂಧಿಸಿದ ಶಾಲಾ ಪ್ರಾಚಾರ್ಯರು, ವಾರ್ಡನ್ ಮತ್ತು ಆರೋಗ್ಯ ತಪಾಸಣೆಯ ನರ್ಸ್ ಸೇರಿದಂತೆ ಇತರರನ್ನು ವಿಚಾರಿಸಿ ಸಮರ್ಪಕ ಮಾಹಿತಿ ಸಂಗ್ರಹಿಸಿದರು.
ನಂತರ ಮಾಧ್ಯಮದೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಹರ್ಷಲ್ ಬೋಯರ್, ಘಟನೆ ಕುರಿತು ಸಮರ್ಪಕ ವಿಚಾರಣೆ ನಡೆಸುತ್ತಿದ್ದು, ಶಾಲಾ ಪ್ರಾಚಾರ್ಯರು, ವಾರ್ಡನ್ ಸೇರಿದಂತೆ ನರ್ಸ್ ಇತರೆ ಸಂಬಂಧಿಸಿದ ಅಧಿಕಾರಿಗಳ ವಿಚಾರಣೆ ನಡೆಸಲಾಗುತ್ತಿದೆ. ಘಟನೆ ವಿಚಾರಣೆ ಹಂತದಲ್ಲಿರುವದರಿಂದ ಮಾಧ್ಯಮಕ್ಕೆ ಈಗಲೇ ಬಹಿರಂಗ ಪಡಿಸಲಾಗುವದಿಲ್ಲ. ಒಟ್ಟಾರೆ ತಪ್ಪಿತಸ್ತರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಪಾಲಕರಾರು ಆತಂಕ, ಭಯ ಪಡುವ ಅಗತ್ಯವಿಲ್ಲ. ವಿದ್ಯಾರ್ಥಿನಿ ಮತ್ತು ಮಗುವನ್ನು ಯಾದಗಿರಿಯ ತಾಯಿ ಮತ್ತು ಮಗು ಸುರಕ್ಷಿತ ಕೇಂದ್ರಕ್ಕೆ ದಾಖಲಿಸಲಾಗುತ್ತದೆ. ಮುಂದೆ ಯಾವುದೇ ಶಾಲೆ, ವಸತಿ ಶಾಲೆಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಸೂಕ್ತ ಎಚ್ಚರಿಕೆವಹಿಸಲೂ ಸೂಚಿಸಿದ್ದೇನೆ.
ಈ ವೇಳೆ ಸಭೆಯಲ್ಲಿ ತಾಲೂಕು ಟಿಎಚ್‍ಓ ಡಾ.ರಮೇಶ ಗುತ್ತೇದಾರ, ತಹಶೀಲ್ದಾರ ಸಿದ್ಧಾರೂಢ ಬನ್ನಿಕೊಪ್ಪ, ನಗರಸಭೆ ಪೌರಾಯುಕ್ತ ಜೀವನ್, ವಸತಿ ಶಾಲೆಯ ಪ್ರಾಚಾರ್ಯೆ ಬಸ್ಸಮ್ಮ, ವಾರ್ಡನ್, ನರ್ಸ್ ಸೇರಿದಂತೆ ಇಲ್ಲಾ ಪಜಾ, ಪಪಂ ಉಸ್ತುವಾರಿ ಸಮಿತಿಯ ಸದಸ್ಯ ಮಲ್ಲಪ್ಪ ಉಳ್ಳಂಡಗೇರಿ ಇತರರಿದ್ದರು.