ಸರ್ಕಾರಿ ಕ್ವಾರಂಟೈನ್ ಕ್ಯಾನ್ಸಲ್ಗೆ ನಿರ್ಧಾರ..? ICMR ಗೆ ಪ್ರಸ್ತಾವನೆ ಸಲ್ಲಿಕೆಗೆ ಚಿಂತನೆ
ಸರ್ಕಾರಿ ಕ್ವಾರಂಟೈನ್ ಕ್ಯಾನ್ಸಲ್ ಓನ್ಲಿ ಹೋಂ ಕ್ವಾರಂಟೈನ್.? ಪ್ರಸ್ತಾವನೆಗೆ ಸಿದ್ಧತೆ.!?
ವಿವಿ ಡೆಸ್ಕ್ಃ ಸರ್ಕಾರಿ ಕ್ವಾರಂಟೈನ್ ತೆಗೆದು ಹಾಕಿ ಕೇವಲ ವಲಸಿಗರಿಗೆ ಹೋಂಕ್ವಾರಂಟೈನ್ ಮಾತ್ರ ಮುಂದುವರೆಸುವ ನಿರ್ಧಾರ ವನ್ನು ರಾಜ್ಯ ಸರ್ಕಾರ ಕೈಗೊಳ್ಳುವ ತೀರ್ಮಾನಕ್ಕೆ ಬಂದಿದೆ ಎನ್ನಲಾಗಿದೆ.
ಈ ಕುರಿತು ರಾಜ್ಯ ಆರೋಗ್ಯ ಇಲಾಖೆ ಐಸಿಎಂಆರ್ ಗೆ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದೆ ಎನ್ನಲಾಗಿದೆ. ಸರ್ಕಾರ ದಿಡೀರನೆ ಸರ್ಕಾರಿ ಕ್ವಾರಂಟೈನ್ ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬಂದಿದೆಯೋ ಗೊತ್ತಿಲ್ಲ.
ಇನ್ಮುಂದೆ ಹೊರ ರಾಜ್ಯದಿಂದ ಬರುವ ವಲಸಿಗರು ಹೋಂಕ್ವಾರಂಟೈನ್ ನಲ್ಲಿ ಮಾತ್ರ ಇರಬೇಕು. ಅವರ ವ್ಯವಸ್ಥೆ ಅವರೆ ಮಾಡಿಕೊಳ್ಳಬೇಕು. ಕೊರೊನಾ ಲಕ್ಷಣ ಕಂಡು ಬಂದಲ್ಲಿ ಮಾತ್ರ ಅಂತವರನ್ನು ನಿಗದಿತ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಲಾಗುವದು ಎಂದು ಮೂಲಗಳಿಂದ ತಿಳಿದು ಬಂದಿದೆ.
ಹೀಗಾದಲ್ಲಿ ಜನರ ಗತಿ ರಾಜ್ಯದ ಸ್ಥಿತಿ ದೇವರೆ ಬಲ್ಲ. ಒಂದು ವೇಳೆ ಸರ್ಕಾರಿ ಕ್ವಾರಂಟೈನ್ ಬಂದ್ ಮಾಡಿದರೆ, ಮುಂಬರುವ ದಿನಗಳಲ್ಲಿ ಕೊರೊನಾ ಹಾವಳಿ ಮಿತಿ ಮೀರಲಿದೆ ಎಂದು ಹೇಳಲಾಗುತ್ತಿದೆ. ಕೊರೊನಾ ಕಾರ್ಯದಿಂದ ಸರ್ಕಾರ ಬೇಗನೆ ಕೈತೊಳೆದುಕೊಂಡು ಬಿಡಲು ಚಿಂತಿಸುತ್ತಿದೆ ಎಂಬ ವರದಿ ಹೊರಬಿದ್ದಿದೆ.