ಶಹಾಪುರ ಠಾಣೆ ಕಾನ್ಸಟೇಬಲ್ಗೆ ನೆಗೆಟಿವ್ , ನಿಟ್ಟುಸಿರು ಬಿಟ್ಟ ಜನತೆ
ಠಾಣೆ ಕಾನ್ಸಟೇಬಲ್ಗೆ ನೆಗೆಟಿವ್ , ನಿಟ್ಟುಸಿರು ಬಿಟ್ಟ ಜನತೆ
ಶಹಾಪುರಃ ನಗರ ಠಾಣೆಯ ಕಾನ್ಸಟೇಬಲ್ ಓರ್ವರಿಗೆ ಕೊರೊನಾ ಪಾಸಿಟಿವ್ ವರದಿ ಕೇಳಿ ನಗರದ ಜನತೆ ಆತಂಕದ ಛಾಯೆಯಲ್ಲಿ ಮುಳುಗಿತ್ತು, ಆದರೆ ಹೊಸದಾಗಿ ಸ್ವಾಬ್ ಮಾಡಿಸಲಾಗಿ ಪರೀಕ್ಷಾ ವರದಿ ಪಾಸಿಟಿವ್ ಬಂದಿರುವ ಕಾರಣ, ಬುಧವಾರ ನಗರ ಠಾಣೆಗೆ ಭೇಟಿ ನೀಡಿದ ಐಜಿಪಿ ಮನೀಷ್ ಕರ್ಬೇಕರ್ ಕಾನ್ಸ್‍ಟೇಬಲ್‍ಗೆ ಪರೀಕ್ಷಾ ವರದಿ ಪ್ರತಿ ನೀಡಿ ನಿಮ್ಮದು ನೆಗೆಟಿವ್ ವರದಿ ಬಂದಿದ್ದು, ಯಾರೊಬ್ಬರು ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.
ಮುಂದುವರೆದು ಮಾತನಾಡಿದ ಅವರು, ಠಾಣೆಯಲ್ಲಿ ಕೊರೊನಾ ಪಾಸಿಟಿವ್ ಬಂದಿದೆ ಎಂದು ನಾಗರಿಕ ವಲಯದಲ್ಲೂ ಆತಂಕ ಎದುರಾಗಿತ್ತು. ಪರೀಕ್ಷಾ ವರದಿ ವಿಳಂಬವಾದ ಪರಿಣಾಮ ಠಾಣೆಯಲ್ಲಿ ಮಂಕು ಬಡಿದಂತಾಗಿತ್ತು. ಇದೀಗ ಯಾರೊಬ್ಬರು ಹೆದರುವ ಅಗತ್ಯವಿಲ್ಲ. ಠಾಣೆಗೆ ಬಂದವರ ಜೊತೆ ಕಡಿಮೆ ಸಮಯದಲ್ಲಿ ಅವರ ಸಮಸ್ಯೆ ಆಲಿಸಿ ಆದಷ್ಟು ಬೇಗನೆ ಅವರನ್ನು ಕಳುಹಿಸಿ ಎಂದು ಸಲಹೆ ನೀಡಿದರು.
ಲಾಖ್ ಡೌನ್ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ, ನಿಮ್ಮ ಕರ್ತವ್ಯ ನಿಭಾಐಇಸುವ ಜೊತೆಗೆ ನಿಮ್ಮ ಆರೋಗ್ಯವು ಬಹುಮುಖ್ಯವಾಗಿದೆ. ಹೀಗಾಗಿ ಸಿಬ್ಬಂದಿ ಬಹು ಎಚ್ಚರಿಕೆಯಿಂದ ಎಲ್ಲವನ್ನು ನಿಭಾಯಿಸಬೇಕು. ಆಗಾಗ ಸ್ಯಾನಿಟೈಸರ್, ಮಾಸ್ಕ್ ಬಳಸಿ ಕಡ್ಡಾಯವಾಗಿ ಅಂತರ ಕಾಯ್ದುಕೊಳ್ಳಿ ಎಂದು ಸಲಹೆ ನೀಡಿದರು. ಶಹಾಪುರ ಹಾಗೂ ಭೀಮರಾಯನ ಗುಡಿ ಠಾಣೆಗೆ ಭೇಟಿ ನೀಡಿ ಸಿಬ್ಬಂದಿ ಜೊತೆ ಮಾತುಕತೆ ನಡೆಸಿ ಹಲವು ಸಲಹೆ ಸೂಚನೆ ನೀಡಿದರು. ಕೊರೊನಾ ವಿರುದ್ಧ ಸಮರ್ಪಕವಾಗಿ ಹೋರಾಟ ಕುರಿತು ಮನವರಿಕೆ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್ ಸೊನೆವಾಲೆ, ಡಿವೈಎಸ್ಪಿ ವೆಂಕಟೇಶ ಹುಗಿಬಂಡಿ, ಗ್ರಾಮೀಣ ಸಿಪಿಐ ಶ್ರೀನಿವಾಸ ಅಲ್ಲಾಪುರೆ, ನಗರ ಪಿಐ ಹನುಮರಡ್ಡೆಪ್ಪ, ಪಿಎಸ್‍ಐ ಚಂದ್ರಕಾಂತ ಮೆಕಾಲೆ, ಭೀ.ಗುಡಿ ಪಿಎಸ್‍ಐ ರಾಜಕುಮಾರ ಜಾಮಗೊಂಡ ಇತರರಿದ್ದರು.