ಪ್ರಮುಖ ಸುದ್ದಿ
ಠಾಣೆಯಲ್ಲಿ ರಾಜ್ಯೋತ್ಸವಃ PI ಹಿರೇಮಠರಿಂದ ರಾಷ್ಟ್ರ ಧ್ವಜಾರೋಹಣ
ಠಾಣೆಯಲ್ಲಿ ರಾಜ್ಯೋತ್ಸವಃ PI ಹಿರೇಮಠರಿಂದ ರಾಷ್ಟ್ರ ಧ್ವಜಾರೋಹಣ
ಯಾದಗಿರಿಃ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಶಹಾಪುರ ನಗರ ಪೊಲೀಸ್ ಠಾಣೆಯಲ್ಲಿ ಪಿಐ ಚನ್ನಯ್ಯ ಹಿರೇಮಠ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕರುನಾಡಿನ ನೆಲದಲ್ಲಿ ಜನ್ಮಿಸಿದ ನಾವೆಲ್ಲ, ತಾಯಿ ಕನ್ನಡಾಂಬೆಗೆ ಕೃತಜ್ಞಪೂರ್ವಕವಾಗಿ ನಮನಗಳನ್ನು ಸಲ್ಲಿಸುವದು ನಮ್ಮೆಲ್ಲರ ಕರ್ತವ್ಯ ಎಂದರು.
ರಾಜ್ಯೋತ್ಸವ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಟಿಕ್ ಟಾಕ್ ಆಗಿ ಪೊಲೀಸ್ ಪೋಷಾಕುನೊಂದಿಗೆ ವಿಜೃಂಬಿಸಿರುವದು ಕಂಡು ಬಂದಿತು.
ಧ್ವಜಾರೋಹಣ ಅಂಗವಾಗಿ ಪೂರ್ವ ಸಿದ್ಧತೆ ಮಾಡಿಕೊಂಡ ಸಿಬ್ಬಂದಿ ಧ್ವಜಾರೋಹಣ ನೆರವೇರಿಸುತ್ತಿದ್ದಂತೆ ರಾಷ್ಟ್ರಗೀತೆಯನ್ನು ಹಾಡಿದರು.
ನಂತರ ಪರಸ್ಪರ ರಾಜ್ಯೋತ್ಸವ ಶುಭಾಶಯಗಳನ್ನು ಹಂಚಿಕೊಂಡರು.