ಪ್ರಮುಖ ಸುದ್ದಿ
BREAKING NEWS ಶಾಸಕ ರಾಜೂಗೌಡಗೆ ಪಿತೃ ವಿಯೋಗ
ಶಾಸಕ ರಾಜೂಗೌಡಗೆ ಪಿತೃ ವಿಯೋಗ
ಶಂಭನಗೌಡ (75) ನಿಧನ ನಾಳೆ ಕೊಡೆಕಲ್ ನಲ್ಲಿ ಅಂತ್ಯಕ್ರಿಯೆ
ಯಾದಗಿರಿಃ ಜಿಲ್ಲೆಯ ಸುರಪುರ ಮತಕ್ಷೇತ್ರದ ಬಿಜೆಪಿ ಶಾಸಕ ರಾಜೂಗೌಡ (ನರಸಿಂಹ ನಾಯಕ) ಅವರ ತಂದೆಯವರಾದ ಶಂಭನಗೌಡ (75) ನಿಧನ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅವರು ಸುರಪುರದ ಅವರ ಸ್ವಗ್ರಹದಲ್ಲಿ ನಿಧನ ಹೊಂದಿದರು. ಅವರು ಕಳೆದ ತಿಂಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ.
ಸುರಪುರ ತಾಲೂಕಿನ ಸ್ವಗ್ರಾಮ ಕೊಡೆಕಲ್ ನಲ್ಲಿ ನಾಳೆ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.