ಪ್ರಮುಖ ಸುದ್ದಿ

ಶರಣರ ತತ್ವಾದರ್ಶ ಪಾಲಿಸಲು ಗುರು ಪಾಟೀಲ್ ಕರೆ

ನಿಜ ಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವ

ಯಾದಗಿರಿಃ ಸಗರನಾಡು ಶರಣರ ಬೀಡು. ಹಲವಾರು ಸೂಫಿ ಸಂತರು ಶರಣರು ಸತ್ಪುರುಷರು ಈ ನೆಲದಲ್ಲಿ ಜನ್ಮಿಸಿದ್ದು, ಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದ್ದಾರೆ. ಅಲ್ಲದೆ ಹರಿತವಾದ ವಚನಗಳ ರಚನೆ ಮೂಲಕ ಶಾಶ್ವತ ಜಾಗೃತಿ ಮೂಡುವಲ್ಲಿ ಕಾರಣಿಕರ್ತರಾಗಿದ್ದಾರೆ ಎಂದು ಶಾಸಕ ಗುರು ಪಾಟೀಲ್ ಶಿರವಾಳ ಹೇಳಿದರು.

ಜಿಲ್ಲೆಯ ಶಹಾಪುರ ನಗರಸಭೆ ಆವರಣದಲ್ಲಿ ತಾಲೂಕು ಆಡಳಿತದಿಂದ ನಿಜ ಶರಣ ಅಂಬಿಗರ ಚೌಡಯ್ಯನವರ ಜಯಂತಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತಮ್ಮ ಹರಿತವಾದ ವಚನಗಳ ಮೂಲಕ ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವಲ್ಲಿ ಶರಣ ಅಂಬಿಗರ ಚೌಡಯ್ಯನವರು ಶ್ರಮಿಸಿದ್ದಾರೆ. ಸಮಾಜದಲ್ಲಿ ಪರಸ್ಪರರು ಗೌರವದಿಂದ ಬಾಳಬೇಕು. ಅನಿಷ್ಟ ಮತ್ತು ಕನಿಷ್ಟ ಗುಣಗಳುಳ್ಳವರಿಗೆ ಶರಣ ಚೌಡಯ್ಯನವರು ತಮ್ಮ ವಚನಗಳಲ್ಲಿ ಛಾಟಿ ಏಟು ನೀಡಿದ್ದಾರೆ.
ಅವರ ತತ್ವಾದರ್ಶಗಳನ್ನು ಇಂದಿನ ಸಮಾಜ ಅಳವಡಿಕೊಳ್ಳಬೇಕಿದೆ. ತಪ್ಪುಗಳನ್ನು ಕಂಡು ಬಂದಲ್ಲಿ ನೇರವಾಗಿ ಹೇಳುವಂತ ಶರಣರಲ್ಲಿ ಚೌಡಯ್ಯನವರು ಮುಂಚೂಣಿ ವ್ಯಕ್ತಿತ್ವಾಗಿತ್ತು.

ಸಮಾಜದ ಜನರು ಶೈಕ್ಷಣಿಕ, ಆರ್ಥಿಕವಾಗಿ ಸಾಮಾಜಿಕವಾಗಿ ಬೆಳೆಯಬೇಕು. ಶರಣರ ಆದರ್ಶವನ್ನು ಪಾಲಿಸಿದಲ್ಲಿ ಉತ್ತಮ ಸಮಾಜ ನಿರ್ಮಾಣ ಸಾಧ್ಯವಿದೆ. ಸಮುದಾಯದ ಬಂಧುಗಳು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕು. ಆ ನಿಟ್ಟಿನಲ್ಲಿ ಸಮುದಾಯದ ಮುಖಂಡರು ಒಗ್ಗಟ್ಟಾಗಿ ಶ್ರಮಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ನಗರದ ಡಾ.ಚಂದ್ರಶೇಖರ ಸುಬೇದಾರ, ಡಾ.ಸುದತ್ ದರ್ಶನಾಪುರ, ಜೆಸ್ಕಾಂ ಶಾಖಾ ಅಧಿಕಾರಿ ಇಕ್ಬಾಲ್ ಲೋಹಾರಿ ಸೇರಿದಂತೆ ಇತರೆ ಸಾಧಕರನ್ನು ಸನ್ಮಾನಿಸಲಾಯಿತು. ತಹಸೀಲ್ದಾರ ಸೋಮಶೇಖರ ಅರಳಗುಂಡಗಿ, ತಾಪಂ ಅಧ್ಯಕ್ಷ ಹೊನ್ನಪ್ಪಗೌಡ ಹೋತಪೇಠ, ಕೋಲಿ ಸಮಾಜ ಮುಖಂಡ ಅಯ್ಯಣ್ಣ ಕನ್ಯಾಕೋಳೂರ, ಮಹಾದೇವಪ್ಪ ಸಾಲಿಮನಿ ಸೇರಿದಂತೆ ಸಿಪಿಐ ಜೆ.ನಾಗರಾಜ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button