108 AMBULENCE ನಲ್ಲಿ ಹೆರಿಗೆಃ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ
ಬಳ್ಳಾರಿಃ AMBULENCE ನಲ್ಲಿ ಹೆರಿಗೆ, ಅವಳಿ ಮಕ್ಕಳೆತ್ತ ಮಹಾಲಕ್ಷ್ಮೀ
ಬಳ್ಳಾರಿಃ ಹೆರಿಗೆ ನೋವು ತಾಳದ ಮಹಿಳೆಯನ್ನು ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ಯಲು ಪರದಾಡುತ್ತಿರುವಾಗ, ತಟ್ಟನೆ ನೆನಪಾದದು, 108 ಅಬ್ಯುಲೆನ್ಸ್. ಇದಕ್ಕೆ ಕರೆ ಮಾಡಿದ ಕುಟುಂಬಸ್ಥರು, ತಕ್ಷಣಕ್ಕೆ ಬರುವಂತೆ ಮನವಿ ಮಾಡಿದ್ದಾರೆ.
ನಂತರ ಸ್ಥಳಕ್ಕೆ ಬಂದ ಅಂಬ್ಯುಲೆನ್ಸ್ ಮಹಿಳೆಗೆ ಪ್ರಥಮ ಹಂತದ ಚಿಕಿತ್ಸೆ ನೀಡಿದೆ. ಈ ಘಟನೆ ನಡೆದಿರುವುದು ಜಿಲ್ಲೆಯ ಹೊಸಪೇಟೆ ತಾಲೂಕಿನ ಅಯ್ಯನಹಳ್ಳಿ ಗ್ರಾಮದಲ್ಲಿ. ಇಲ್ಲಿಂದ ಮಹಿಳೆಯನ್ನು ಅಂಬ್ಯುಲೆನ್ಸ್‍ನಲ್ಲಿ ಸಮೀಪದ ಹೊಸಪೇಟ ನಗರದ ನೂರು ಹಾಸಿಗೆಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುತ್ತಿರುವಾಗ, ಮಾರ್ಗ ಮಧ್ಯೆ ಹೆರಿಗೆ ನೋವು ಇನ್ನಷ್ಟು ಜಾಸ್ತಿಯಾಗಿರುವುದು ಕಂಡು ಬಂದಿದೆ.
ಕೂಡಲೇ ಮಹಿಳೆಯ ಸ್ಥಿತಿ ಅರಿತ ಅಂಬ್ಯುಲೆನ್ಸ್ ಸಿಬ್ಬಂದಿ ಮಾರ್ಗ ಮಧ್ಯೆದ ಮರಿಯಮ್ಮನಹಳ್ಳಿ ಗ್ರಾಮ ಬಳಿ ನಿಲ್ಲಿಸಿ ಚಿಕಿತ್ಸೆ ನೀಡುವ ಮೂಲಕ ಸುಸೂತ್ರ ಹೆರಿಗೆಯಾಗಲು ನೆರವಾಗಿದ್ದಾರೆ.
108 ವಾಹನದಲ್ಲಿದ್ದ ವೈದ್ಯಕೀಯ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಹೆರಿಗೆಯಾಗಿದೆ. ಆದರೆ ಅಚ್ಚರಿ ಎಂದರೆ ಅವಳಿ ಮಕ್ಕಳನ್ನು ಜನ್ಮವೆತ್ತ ಅಯ್ಯನಹಳ್ಳಿಯ ಲಕ್ಷ್ಮೀ ನಿಟ್ಟುಸಿರುಬಿಟ್ಟಿದ್ದಾಳೆ. ಹೆರಿಗೆ ನೋವಿನಿಂದ ಆಸ್ಪತ್ರೆಗೆ ತಲುಪದೆ ನೋವು ಜಾಸ್ತಿಯಾಗಿದ್ದರಿಂದ ಸಾಕಷ್ಟು ಆತಂಕದಲ್ಲಿದ್ದ ತಾಯಿ ಇಬ್ಬರ ಮಕ್ಕಳಿಗೆ ಜನ್ಮ ನೀಡುವ ಮೂಲಕ ಅಪಾಯದಿಂದ ಪಾರಾಗಿದ್ದಾಳೆ.
ಅಂಬ್ಯುಲೆನ್ಸ್‍ನಲ್ಲಿ ಕಾರ್ಯನಿರ್ವಹಿಸುವ ಇ.ಎಂ.ಟಿ. ಅನೀಲ್ ಮತ್ತು ಚಾಲಕ ಸುರೇಶ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ ಎನ್ನಲಾಗಿದೆ. ಪ್ರಸ್ತುತ ಅವಳಿ ಮಕ್ಕಳಾದ ಹೆಣ್ಣು, ಇನ್ನೊಂದು ಗಂಡು ಮಗು ಸೇರಿದಂತೆ ತಾಯಿ ಲಕ್ಷ್ಮೀಯನ್ನು ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಮಕ್ಕಳು ಸೇರಿದಂತೆ ತಾಯಿ ಆರಾಮವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.