ಟಿವಿ ನ್ಯೂಸ್ ಆಂಕರಿಂಗ್ ಆಗಿದ್ದ ಶೀತಲ್ ಶೆಟ್ಟಿ ಈಗ ಏನ್ಮಾಡ್ತಿದ್ದಾರೆ ಗೊತ್ತಾ..?
ಟಿವಿ ನ್ಯೂಸ್ ಆಂಕರಿಂಗ್ ಆಗಿದ್ದ ಶೀತಲ್ ಶೆಟ್ಟಿ ಈಗ ಏನ್ಮಾಡ್ತಿದ್ದಾರೆ ಗೊತ್ತಾ..?
ವಿವಿ ಡೆಸ್ಕ್ಃ ಒಂದು ಕಾಲದಲ್ಲಿ ಫೇಮಸ್ ಟಿವಿ ನ್ಯೂಸ್ ಚಾನಲ್ ವೊಂದರಲ್ಲಿ ನ್ಯೂಸ್ ಆಂಕರಿಂಗ್ ಆಗಿ ಚಿರಪರಿಚಿತಳಾಗಿದ್ದ, ಶೀತಲ್ ಶೆಟ್ಟಿ ನ್ಯೂಸ್ ಚಾನಲ್ ಬಿಟ್ಟು ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಸೈ ಎನಿಸಿಕೊಂಡ ಶೀತಲ್ ಶೆಟ್ಟಿ ಇದೀಗ ತಮ್ಮ ನಿರ್ದೇಶನದ “ವಿಂಡೋಸೀಟ್” ಚಿತ್ರದ ಮೂಲಕ ನಿರ್ದೇಶನದತ್ತ ಮುಖ ಮಾಡಿರುವ ಶೀತಲ್ ತಮ್ಮ ಮೊದಲ ಚಿತ್ರದ ಕೆಲಸದಲ್ಲಿ ಬ್ಯೂಸಿಯಾಗಿದ್ದಾರೆ.
ಫಸ್ಟ್ ಲುಕ್ ಮೂಲಕ ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿದ್ದ ವಿಂಡೋ ಸೀಟ್ ಚಿತ್ರದೀಗ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಸಿಕೊಂಡಿದೆ.
ಲಾಕ್ ಡೌನ್‌ಗಿಂತ ಮೊದಲೇ ಚಿತ್ರದ ಶೂಟಿಂಗ್ ಕಂಪ್ಲೀಟ್ ಮಾಡಲಾಗಿದ್ದು, ಚಿತ್ರತಂಡ ಅನ್ಲಾಕ್ ಬಳಿಕ ಚಿತ್ರದ ಪೋಸ್ಟರ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ.
ಅನ್ಲಾಕ್ ಬಳಿಕ ಚಿತ್ರದ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ಶೀತಲ್ ಶೆಟ್ಟಿ ಸಂಗೀತದ ಕೆಲಸದಲ್ಲಿ ಬ್ಯೂಸಿಯಾಗಿದ್ದಾರೆ. ಅರ್ಜುನ್ ಜನ್ಯ ಈ ಚಿತ್ರಕ್ಕೆ ಸಂಗೀತ ನಿರ್ದಶನ ನೀಡುತ್ತಿದ್ದು, ಈ ಒಂದು ತುಣಕನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ.
ಒಟ್ಟಾರೆ ವಿಂಡೋಸೀಟ್ ವರ್ಷಾಂತ್ಯಕ್ಕೆ ಬಿಡುಗಡೆ ಮಾಡುವ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.