Home
ಮೋದಿಜಿಗೆ ಏನಾದರೂ ಹೇಳಬೇಕಾ ಮಕ್ಕಳೇ.? ಶೇಖಾವತ್ ಪ್ರಶ್ನೆ
ಮಕ್ಕಳಿಗೆ ಚಾಕೋಲೇಟ್ ಹಂಚಿ ಸಂಭ್ರಮಿಸಿದ ಕೇಂದ್ರ ಮಂತ್ರಿ ಶೇಖಾವತ್
ಮಕ್ಕಳಿಗೆ ಚಾಕೋಲೇಟ್ ಹಂಚಿ ಸಂಭ್ರಮಿಸಿದ ಕೇಂದ್ರ ಮಂತ್ರಿ ಶೇಖಾವತ್
ಮೋದಿಜಿ ನಿಮಗೆ ಗೊತ್ತಾ.? ಎಂದು ಮಕ್ಕಳಿಗೆ ಪ್ರಶ್ನೆ ಮಾಡಿದ ಮಂತ್ರಿ
yadgiri, ಶಹಾಪುರಃ ಭೀಮರಾಯನ ಗುಡಿಯ ಕೃಷ್ಣಾ ಕಾಡಾದಲ್ಲಿ ವಿನೂತನ ಸ್ಕಾಡಾ ತಂತ್ರಜ್ಞಾನ ಅಳವಡಿಕೆ ಕುರಿತು ಪರಿಶೀಲನೆಗೆ ಆಗಮಿಸಿದ ಕೇಂದ್ರದ ಜಲಶಕ್ತಿ ಮಂತ್ರಿ ಗಜೇಂದ್ರ ಸಿಂಗ್ ಶೇಖಾವತ್ ಭೀ.ಗುಡಿ ಹೆಲಿಕಾಪ್ಟರ್ ನಿಂದ ಇಳೀಯುತ್ತಿದ್ದಂತೆ ಅಲ್ಲಿ ಸೇರಿದ್ದ ಮಕ್ಕಳನ್ನು ಕರೆದು ಚಾಕಲೇಟ್ ನೀಡಿ ಸಂತಸ ಪಟ್ಟರು.
ಅಲ್ಲದೆ ಇದೇ ವೇಳೆ ಮೋದಿಜಿಯನ್ನು ಯಾರ್ಯಾರು ಗುರುತಿಸುತ್ತೀರಾ ಎಂದು ಹಿಂದಿ ಕೇಳುತ್ತಿದ್ದಂತೆ ಮಕ್ಕಳೆಲ್ಲರೂ ಕೈ ಎತ್ತಿದ್ದರು. ಮುಂದುವರೆದ ಅವರು ಮೋದಿಜಿಗೆ ನೀವೇನಾದರೂ ಹೇಳಬೇಕಾ ಹೇಳಿ ನಾನು ಅವರಿಗೆ ಹೇಳುವೆ ಎಂದು ಕೇಳಿದಾಗ ಮಕ್ಕಳು ಒಂದೇ ಮಾತರಂ ಎಂದು ಘೋಷಣೆ ಕೂಗಿದರು. ಮಕ್ಕಳೊಂದಿಗೆ ಕೆಲ ಕ್ಷಣ ಕಳೆದ ಕೇಂದ್ರ ಮಂತ್ರಿ ಅವರಿಗೆ ಸಿಹಿ ತಿಂಡಿ ವಿತರಿಸಿ ಟಾಟಾ ಮಾಡಿ ಮುನ್ನಡೆದರು.