ಪ್ರಮುಖ ಸುದ್ದಿ
“ಶ್ರೇಷ್ಠ ಕೃಷಿಕ” ಪ್ರಶಸ್ತಿಗೆ ಭಾಜನ ನೀಲಕಂಠ ಕಡಗಂಚಿ
ನೀಲಕಂಠ ಕಡಗಂಚಿಗೆ “ಶ್ರೇಷ್ಠ ಕೃಷಿಕ” ಪ್ರಶಸ್ತಿ
ಯಾದಗಿರಿ, ಶಹಾಪುರಃ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಅತ್ಯುತ್ತಮ ಸಾಧನೆ ಮಾಡಿರುವದನ್ನು ಪರಿಗಣಿಸಿ ಕೃಷಿ ಇಲಾಖೆ ನಗರ ನಿವಾಸಿ ನೀಲಕಂಠ ಕಡಗಂಚಿ ಇವರ ಸಾಧನೆ ಗುರುತಿಸಿ ತಾಲೂಕು ಮಟ್ಟದ “ಶ್ರೇಷ್ಠ ಕೃಷಿಕ” ಪ್ರಶಸ್ತಿ ನೀಡಿ ಗೌರವಿಸುತ್ತಿದೆ.
ಕೃಷಿ ಇಲಾಖೆಯ 2019-20 ನೇ ಸಾಲಿನ ಆತ್ಮ ಯೋಜನೆಯಡಿ ಇವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ.
ನೀಲಕಂಠ ಕಡಗಂಚಿ ಅವರು, ಮೆಕ್ಯಾನಿಕಲ್ ಇಂಜಿನಿಯರಿಂಗ್ ಆಗಿದ್ದು, ಕೃಷಿ ಕಾಯಕದಲ್ಲಿ ನಿರಂತರ ಶ್ರಮವಹಿಸುತ್ತಿದ್ದು, ಅವರ ಸಾಧನೆಗೆ ದೊರೆತ ಪ್ರಶಸ್ತಿ ಇದಾಗಿದ್ದು ಅವರನ್ನು ಮತ್ತಷ್ಟು ಪ್ರೋತ್ಸಾಹಿಸಿದಂತಾಗಿದೆ.
ಅವರ ಶ್ರಮಕ್ಕೆ ತಕ್ಕ ಫಲ ಇದಾಗಿದೆ ಎಂದು ಆತನ ಸ್ನೇಹಿತರು, ಆತ್ಮೀಯರು ಅಭಿನಂದನೆ ಸಲ್ಲಿಸಿದ್ದಾರೆ.