ಪ್ರಮುಖ ಸುದ್ದಿ

ಶಿರವಾಳ ಗ್ರಾಪಂಕ್ಕೆ ಸರ್ವ ಸದಸ್ಯರ ಅವಿರೋಧ ಆಯ್ಕೆ

ಶಿರವಾಳ ಗ್ರಾಪಂಕ್ಕೆ ಸರ್ವ ಸದಸ್ಯರ ಅವಿರೋಧ ಆಯ್ಕೆ

ಶಹಾಪುರಃ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಶಿರವಾಳ ಗ್ರಾಮ ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ ಅವರ ಸ್ವಗ್ರಾಮ.

ಪ್ರಸ್ತುತ ನಡೆಯುತ್ತಿರುವ ಗ್ರಾಮ‌ ಪಂಚಾಯತ್ ಚುನಾವಣೆ ಹಿನ್ನೆಲೆ ಶಿರವಾಳ ಪಂಚಾಯತ್ ನ 17 ಜನ ಸದಸ್ಯರನ್ನು ಮಾಜಿ ಶಾಸಕ ಗುರು ಪಾಟೀಲ್ ಹಾಗೂ ಗ್ರಾಮದ ಹಿರಿಯರು ಪಕ್ಷಾತೀತವಾಗಿ  ಎಲ್ಲರ ಮನವೊಲಿಸಿ ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ಗ್ರಾಪಂಗೆ ಹಿರಿಮೆ ತಂದಿದ್ದಾರೆ ಎಂದು ಗ್ರಾಮದ ಮುಖಂಡ ಮರೆಪ್ಪ ಪ್ಯಾಟಿ ತಿಳಿಸಿದ್ದಾರೆ.

ಶಿರವಾಳ‌ ಪಂಚಾಯತ್ ನಲ್ಲಿ ಯಾವುದೇ ಗದ್ದಲ‌, ಕಿರಿಕಿರಿ ಇಲ್ಲದೆ ಪಂಚಾಯತ್‌ ಸದಸ್ಯರನ್ನಾಗಿ 17 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಗೆ ಸಹಕರಿಸಿದ ಗ್ರಾಮದ ಹಿರಿಯರು, ಮುಖಂಡರು ಯುವಕರೆಲ್ಲರಿಗೂ ಅವರು ಧನ್ಯವಾದಗಳನ್ನು ಅರ್ಪಿಸಿದ್ದಾರೆ.‌

ಈಗಾಗಲೇ ನಾಮಪತ್ರ ಸಲ್ಲಿಸಲಾಗಿದ್ದು, ಪ್ರತಿ ಸದಸ್ಯ ಸ್ಥಾನದಲ್ಲಿ ಗ್ರಾಮದ ಎಲ್ಲರ ಒಮ್ಮತದ ಮೇಲೆ ಸೂಚಿಸಲಾದ ಅಭ್ಯರ್ಥಿ‌ ಮಾತ್ರ ಕಣದಲ್ಲಿ ಉಳಿದಿದ್ದು‌ ಉಳಿದವರೂ ನಾಮಪತ್ರ ವಾಪಸ್ ಪಡೆದಿದ್ದಾರೆ. ಈತನ್ಮೂಲಕ ಅವಿರೋಧಕ್ಕೆ ಪಕ್ಷಾತೀತವಾಗಿ ಸಹಕರಿಸಲಾಗಿದೆ ಎಂದು ಪ್ಯಾಟಿ ತಿಳಿಸಿದ್ದಾರೆ.

ಅಲ್ಲದೆ ನೂತನ ಸದಸ್ಯರಿಗೂ ಹಾರ್ಧಿಕ ಅಭಿನಂದನೆಗಳನ್ನು ಸಹ ಅವರು ವ್ಯಕ್ತಪಡಿಸಿದ್ದಾರೆ.

Related Articles

Back to top button